ಕೋಟೆನಾಡು ಚಿತ್ರದುರ್ಗದಲ್ಲಿ ಬೃಹತ್ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಚಾಲನೆ ನೀಡಲಾಯಿತು. ನಗರದ ಜೈನಧಾಮದ ಮುಂಭಾಗದ ವೇದಿಕೆಯಲ್ಲಿ ಚಿತ್ರದುರ್ಗದ ಮಾದರ ಚೆನ್ನಯ್ಯ ಸ್ವಾಮೀಜಿ, ಸಂಸದ ಗೋವಿಂದ ಕಾರಜೋಳ, ಸೇರಿದಂತೆ ವಿವಿಧ ಮಠದ ಮಠಾಧೀಶರು, ಶರಣ್ ಪಂಪ್ ವೆಲ್ ಸೇರಿದಂತೆ ಹಲವು ಮಠಾಧೀಶರು ಹಾಗೂ ರಾಜಕೀಯ ಗಣ್ಯರು, ಹಿಂದೂ ಮುಖಂಡರು ಭಾಗಿಯಾಗಿದ್ದರು. ಇದೇ ವೇಳೆ ಶರಣ್ ಪಂಪ್ ವೆಲ್ ಮಾತನಾಡಿ ಸರ್ಕಾರ ಗಣೇಶೋತ್ಸವಕ್ಕೆ ಹಲವು ನಿರ್ಬಂಧಗಳನ್ನು ಹೇರುತ್ತಿದೆ. ಚಿತ್ರದುರ್ಗದಲ್ಲಿ 18 ವರ್ಷದಿಂದ ಶೋಭಾಯಾತ್ರೆ ನಡೆಯುತ್ತಿದೆ. ಎಂದಾದರೂ ತೊಂದರೆ ಆಗಿದ್ಯಾ, ಆಗಿದ್ದರೆ ಹೇಳಿ ಎಂದು ಹೇಳಿದರು.ನನಗೆ ಮೊದಲೇ ಜಿಲ್ಲಾಡಳಿತ ಜಿಲ್ಲೆಗೆ ನಿರ್ಬಂಧ ಹೇರುತ್ತದೆ ಎಂದು ಗೊತ್ತಿತ್ತು. ಆದರೆ ಗಣೇಶನ ಕೃಪೆಯಿಂದ ಜಿಲ್ಲೆಗೆ ಬಂದಿದ್ದೇನೆ. ಇನ್ನು ಮುಂದಿನ ದಿನಗಳಲ್ಲಿ ಸಹ ಶೋಭಾಯಾತ್ರೆ ಅದ್ಧೂರಿಯಾಗಿ ನಡೆಯಬೇಕು. ಅದಕ್ಕೆ ಎಲ್ಲರ ಬೆಂಬಲ ಸಹಕಾರ ಬೇಕಿದೆ. ಚಿತ್ರದುರ್ಗದ ಜನತೆ ಇದುವರೆಗೂ ಜಾತಿ ಮತ ಮರೆತು ಶೋಭಾಯಾತ್ರೆಯಲ್ಲಿ ಭಾಗಿ ಆಗಿದ್ದಾರೆ ಎಂದು ಹೇಳಿದರು.ವೇದಿಕೆ ಕಾರ್ಯಕ್ರಮದ ಬಳಿಕ ಹರಾಜು ಪ್ರಕ್ರಿಯೆ ನಡೆಯಿತು. ಇದರಲ್ಲಿ ಗಣೇಶನಿಗೆ ಹಾಕಿದ್ದ ಬೃಹತ್ ಹೂವಿನ ಹಾರವನ್ನು ಚಿತ್ರಹಳ್ಳಿ ಲವ ಕುಮಾರ್ 1 ಲಕ್ಷಕ್ಕೆ ಹರಾಜು ಕೂಗುವ ಮೂಲಕ ತಮ್ಮದಾಗಿಸಿಕೊಂಡರು. ಗಣಪತಿಯ ಮುಂದೆ ಇಟ್ಟಿದ್ದ ಭಗವಾಧ್ವಜವನ್ನು ಹನುಮಂತೆಗೌಡ್ರು 6 ಲಕ್ಷ ರೂಪಾಯಿಗೆ ಪಡೆದರೆ, 5.25 ಲಕ್ಷಕ್ಕೆ ತಿರುಪತಿ ತಿಮ್ಮಪ್ಪನ ಮಾಡೆಲ್ ಅನ್ನು ವಜ್ರ ಮಹೇಶ್, ಐಶ್ವರ್ಯ ಕಿರಣ್ 1 ಲಕ್ಷ ರೂಪಾಯಿಗೆ ಫಲಹಾರವನ್ನು, 1.5 ಲಕ್ಷ ರೂಪಾಯಿಗೆ ಗಣೇಶನ ಪೇಂಟಿಂಗ್ ನ್ನು ಮಂಜಣ್ಣ ಎಂಬುವವರು ತಮ್ಮದಾಗಿಸಿಕೊಂಡರು.ಬಳಿಕ 2 ಗಂಟೆ ಸುಮಾರಿಗೆ ವೇದಿಕೆಯ ಬಳಿಗೆ ವಿವಿಧ ಬಗೆಯ ಸುಂದರ ಹೂವಿನ ಹಾರಗಳಿಂದ ಅಲಂಕಾರಗೊಂಡು ವಿರಾಜಮಾನನಾಗಿ ಗಣಪ ಆಗಮಿಸುತ್ತಿದ್ದಂತೆ ಗಣಪನನ್ನು ಕೊಡಲು ಕಾತುರದಿಂದ ಕಾಯುತ್ತಿದ್ದ ಲಕ್ಷಾಂತರ ಭಕ್ತರು ಗಣಪನನ್ನು ಕಂಡ ಕೂಡಲೇ ಜಯಘೋಷ ಕೂಗಿ, ಶಿಳ್ಳೆ ಕೇಕೆ ಮೂಲಕ ಸ್ವಾಗತ ಕೋರಿದರು. ಬಳಿಕ ವೇದಿಕೆಯ ಪಕ್ಕದಲ್ಲಿ ಗಣಪ ಬರುತ್ತಿದ್ದಂತೆ ವೇದಿಕೆಯ ಮೇಲಿದ್ದ ಗಣ್ಯರು ಗಣೇಶನಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಕ್ಷಿಣ ಭಾರತದ ಐತಿಹಾಸಿಕ ಬೃಹತ್ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಶೋಭಾಯಾತ್ರೆಗೆ ಚಾಲನೆ ನೀಡಿದ ಬಳಿಕ ಪೊಲೀಸರ ಅನುಮತಿಯಂತೆ 5 ಟ್ರ್ಯಾಕ್ಟರ್ ಗಳಲ್ಲಿ ಒಂದೊಂದು ಟ್ರ್ಯಾಕ್ಟರ್ ಗಳಲ್ಲಿ 4 ಸ್ಪೀಕರ್ ಬಾಕ್ಸ್ ಗಳಲ್ಲಿ ಹಾಡುಗಳು ಆರಂಭ ಆಗುತ್ತಿದ್ದಂತೆ ಕಾತುರದಿಂದ ಕಾಯುತ್ತಿದ್ದ ಲಕ್ಷಾಂತರ ಮಂದಿ ಹನುಮಂತ, ಗಣೇಶ ಚಿತ್ರಗಳಿಂದ ಬಾವುಟ ಹಾಗೂ ಕೇಸರಿ ಶಾಲುಗಳನ್ನು ಹಾಕಿಕೊಂಡು ವಯಸ್ಸಿನ ಹಂಗಿಲ್ಲದೆ ಎಲ್ಲರೂ ಕುಣಿದು ಕುಪ್ಪಳಿಸಿದರು ಸಂಭ್ರಮಿಸಿದರು. ಶೋಭಾಯಾತ್ರೆ ಉದ್ದಕ್ಕೂ ಪೊಲೀಸರು ಸರ್ಪಗಾವಲು ಹಾಕಿದ್ದು, ಜೊತೆಗೆ ಡ್ರೋನ್ ಕ್ಯಾಮರಾಗಳ ಮೂಲಕ ಹದ್ದಿನ ಕಣ್ಣಿಟ್ಟು ಶೋಭಾಯಾತ್ರೆಯಲ್ಲಿ ಏನು ತೊಂದರೆ ಆಗದಂತೆ ನೋಡಿಕೊಂಡರು. ಶೋಭಾಯಾತ್ರೆ ಸಾಗುವ ದಾರಿಯುದ್ದಕ್ಕೂ ವಿವಿಧ ಸಂಘಟನೆಗಳು ಹಾಗೂ ಹಿಂದೂ ಕಾರ್ಯಕರ್ತರು ಶೋಭಾಯಾತ್ರೆಗೆ ಆಗಮಿಸಿದ್ದ ಭಕ್ತರಿಗೆ ನೀರು, ಮಜ್ಜಿಗೆ ನೀಡಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







