ನವದೆಹಲಿ: ಮೊನ್ನೆ-ಮೊನ್ನೆಯವರೆಗೂ ಕುಚಿಕು ಗೆಳೆಯರಂತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್- ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವೆ ಬಿರುಕು ಉಂಟಾಗಿದೆ. ಅವರಿಬ್ಬರ ನಡುವೆ ಈಗ ಶೀತಲ ಸಮರ ಉಂಟಾಗಿದೆ. ಭಾರತದ ಮೇಲೆ ಅಮೆರಿಕ (United States) ಹೆಚ್ಚುವರಿ ಶೇ. 25ರಷ್ಟು ಸುಂಕ ಘೋಷಿಸಿದ ನಂತರ ಎರಡೂ ದೇಶಗಳ ನಡುವಿನ ಅಂತರ ಹೆಚ್ಚಾಗಿದೆ. ಮೇಲ್ನೋಟಕ್ಕೆ ಟ್ರಂಪ್ ವಿರುದ್ಧ ಮೋದಿ ನೇರವಾಗಿ ಎಲ್ಲೂ ಹೇಳಿಕೆ ನೀಡದಿದ್ದರೂ ಪರೋಕ್ಷವಾಗಿ ತಮ್ಮ ಭಾಷಣದಲ್ಲಿ ಟ್ರಂಪ್ ವಿರುದ್ಧ ಚಾಟಿ ಬೀಸುತ್ತಲೇ ಇರುತ್ತಾರೆ. ಅವರಿಬ್ಬರ ನಡುವಿನ ಸಂಬಂಧದಲ್ಲಿ ಇದುವರೆಗೂ ಏನೆಲ್ಲ ಆಯ್ತು? ಅವರ ಸ್ನೇಹ ಮುರಿದುಬೀಳಲು ಕಾರಣವಾದ ಘಟನೆಗಳು ಯಾವುವು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.ಪಾಕಿಸ್ತಾನದ ಅಂದಿನ ಪ್ರಧಾನಿ ಇಮ್ರಾನ್ ಖಾನ್ ಶ್ವೇತಭವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಎರಡೂ ದೇಶಗಳು ಒಪ್ಪಿಕೊಂಡರೆ ಕಾಶ್ಮೀರದ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ಧರಿರುವುದಾಗಿ ಡೊನಾಲ್ಡ್ ಟ್ರಂಪ್ 2019ರಲ್ಲಿ ಹೇಳಿದ್ದರು. ಈ ಹೇಳಿಕೆಯು ಭಾರತವನ್ನು ಆಘಾತಗೊಳಿಸಿತು. ಇದು ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಗೆ ಅವಕಾಶ ನೀಡುವುದಿಲ್ಲ, ಇದು ದ್ವಿಪಕ್ಷೀಯ ವಿಷಯ ಎಂಬ ಭಾರತದ ದೀರ್ಘಕಾಲೀನ ನಿಲುವಿಗೆ ಬದ್ಧವಾಗಿದ್ದ ಮೋದಿ ಆ ಪ್ರಸ್ತಾಪಕ್ಕೆ ಸೊಪ್ಪು ಹಾಕಲಿಲ್ಲ. ಇದರಿಂದ ಟ್ರಂಪ್ ಅವರಿಗೆ ಸ್ವಲ್ಪ ಮುಜುಗರವಾಗಿತ್ತು.ಸೆಪ್ಟೆಂಬರ್ 2024ರಲ್ಲಿ ಪ್ರಧಾನಿ ಮೋದಿ ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿ ಮತ್ತು ಅಧ್ಯಕ್ಷ ಜೋ ಬೈಡೆನ್ ಆಯೋಜಿಸಿದ್ದ ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸಲು ಯುಎಸ್ಗೆ ಭೇಟಿ ನೀಡಿದ್ದರು. ಆಗ ಎರಡನೇ ಅವಧಿಗೆ ಪ್ರಚಾರ ನಡೆಸುತ್ತಿದ್ದ ಟ್ರಂಪ್ ಅವರನ್ನು ಭೇಟಿ ಮಾಡಲು ಭಾರತೀಯ ಸಂವಾದಕರು ಮೋದಿಯ ಸಹಾಯ ಕೋರಿದರು. ಅದೇ ಸಮಯದಲ್ಲಿ ಅವರ ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್ ಕೂಡ ಮೋದಿಯನ್ನು ಸಂಪರ್ಕಿಸಿದರು. ಟ್ರಂಪ್ ಭಾರತೀಯ ಪ್ರಧಾನಿಯನ್ನು ನೋಡಲು ಸಿದ್ಧರಿದ್ದರು ಮತ್ತು ಮಿಚಿಗನ್ನಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮೋದಿ ಅವರನ್ನು ಭೇಟಿಯಾಗುತ್ತಿರುವುದಾಗಿ ಘೋಷಿಸಿದರು. ಆದರೆ ಕಮಲಾ ಹ್ಯಾರಿಸ್ ಅವರ ಪ್ರಚಾರ ವಿಳಂಬವಾಯಿತು. ಈ ವೇಳೆ ಒಬ್ಬ ಅಭ್ಯರ್ಥಿಯನ್ನು ಮಾತ್ರ ಭೇಟಿಯಾಗಲು ಮೋದಿ ಬಯಸಿದ ಕಾರಣದಿಂದ ಭಾರತೀಯ ಕಡೆಯವರು ಟ್ರಂಪ್ ಸಭೆಯಿಂದ ಹಿಂದೆ ಸರಿದರು. ಟ್ರಂಪ್ಗೆ ಇದು ಅಸಮಾಧಾನ ಮೂಡಿತ್ತು. ಏಕೆಂದರೆ ಅವರು ಈಗಾಗಲೇ ಮೋದಿಯನ್ನು ಭೇಟಿಯಾಗುವುದಾಗಿ ಘೋಷಿಸಿದ್ದರು.ಆದರೂ, ಎರಡನೇ ಅವಧಿಗೆ ಗೆದ್ದ ನಂತರ ಶ್ವೇತಭವನದಲ್ಲಿ ಟ್ರಂಪ್ ಅವರನ್ನು ಭೇಟಿಯಾದ ಮೊದಲ ವಿದೇಶಿ ನಾಯಕರಲ್ಲಿ ಪ್ರಧಾನಿ ಮೋದಿ ಒಬ್ಬರಾದರು. ಈ ವರ್ಷ ಫೆಬ್ರವರಿ 13ರಂದು ಅಮೆರಿಕದ ಅಧ್ಯಕ್ಷ ಟ್ರಂಪ್ ಮೋದಿಯನ್ನು ಭೇಟಿ ಮಾಡಿದಾಗ ಅವರಿಬ್ಬರೂ ಸುಂಕದ ಬಗ್ಗೆ ಚರ್ಚಿಸಿದ್ದರು. ಆದರೂ ಅಮೆರಿಕ ತನ್ನದೇ ನಿರ್ಧಾರ ತೆಗೆದುಕೊಂಡಿತು.ಇದಲ್ಲದೆ, ಟ್ರಂಪ್ MAGA ಬಗ್ಗೆ ಮಾತನಾಡಿದಾಗ, ಅದು MIGA ಅಥವಾ ವಿಕಸಿತ ಭಾರತದ ಸ್ವಂತ ಕಲ್ಪನೆಯೊಂದಿಗೆ ಸರಿಹೊಂದುತ್ತದೆ ಎಂದು ಪ್ರಧಾನಿ ಮೋದಿ ಪ್ರತಿಕ್ರಿಯಿಸಿದರು. ನಂತರ ಓವಲ್ ಆಫೀಸ್ ಸಭೆಯ ಮೊದಲು ಬ್ಲೇರ್ ಹೌಸ್ನಲ್ಲಿ ಎಲಾನ್ ಮಸ್ಕ್ ಮೋದಿಯವರನ್ನು ಭೇಟಿ ಮಾಡಿದ್ದರು. ಆ ಹೊತ್ತಿಗೆ ಟ್ರಂಪ್ ಭಾರತದಲ್ಲಿ ಟೆಸ್ಲಾ ಮತ್ತು ಆಪಲ್ನ ಯೋಜನೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲು ಪ್ರಾರಂಭಿಸಿದ್ದರು.
ಇದೆಲ್ಲ ಆದ ನಂತರ ಭಾರತ-ಪಾಕಿಸ್ತಾನ ಸಂಘರ್ಷದ ಸಮಯದಲ್ಲಿ ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧ ಮತ್ತಷ್ಟು ಹಳಸಿತು. ಆ ಘರ್ಷಣೆಯ ಸಮಯದಲ್ಲಿ ಟ್ರಂಪ್ ಮತ್ತು ಮೋದಿ ನಡುವೆ ಯಾವುದೇ ಫೋನ್ ಸಂಭಾಷಣೆ ನಡೆದಿರಲಿಲ್ಲ ಎಂದು ಭಾರತ ಹೇಳುತ್ತಿದ್ದರೂ, ಅಮೆರಿಕ ಮಾತ್ರ ತಾನೇ ಎರಡೂ ದೇಶಗಳ ನಡುವಿನ ಯುದ್ಧ ನಿಲ್ಲಿಸಿದ್ದು ಎಂದು ಹೇಳಿಕೊಂಡರು. ಇದು ಜಾಗತಿಕ ಮಟ್ಟದಲ್ಲಿ ಮತ್ತು ಭಾರತದೊಳಗೆ ಕೂಡ ಮೋದಿ ಸರ್ಕಾರಕ್ಕೆ ತೀವ್ರ ಮುಜುಗರ ತಂದಿತು.ಕೆನಡಾದಲ್ಲಿ ನಡೆದ ಜಿ-7 ಶೃಂಗಸಭೆಯಿಂದ ಹಿಂದಿರುಗುವಾಗ ಅಮೆರಿಕ ಅಧ್ಯಕ್ಷ ಟ್ರಂಪ್ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಅಮೆರಿಕಕ್ಕೆ ಊಟಕ್ಕೆ ಆಹ್ವಾನಿಸಿದ್ದರು. ಟ್ರಂಪ್ ಅವರು ಶ್ವೇತಭವನಕ್ಕೆ ಬರುವಂತೆ ನೀಡಿದ ಆಹ್ವಾನವನ್ನು ಮೋದಿ ನಿರಾಕರಿಸಿದ್ದು ಕೂಡ ಎರಡೂ ದೇಶಗಳನಡುವೆಅಂತರಹೆಚ್ಚಲುಕಾರಣವಾಯಿತು.ಇದಾದ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ರಷ್ಯಾದಿಂದ ತೈಲ ಖರೀದಿ ಮಾಡುವುದನ್ನೇ ಮುಂದಿಟ್ಟುಕೊಂಡು ಭಾರತಕ್ಕೆ ದಂಡದ ರೂಪದಲ್ಲಿ ಹೆಚ್ಚುವರಿ ಶೇ. 25ರಷ್ಟು ಸುಂಕ ಘೋಷಿಸುವ ಮೂಲಕ ಒಟ್ಟು ಸುಂಕವನ್ನು ಶೇ. 50ಕ್ಕೆ ಏರಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







