ಮಾರುಕಟ್ಟೆಗಳಲ್ಲಿ ನಕಲಿ ಔಷಧಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದರಿಂದಾಗಿ ಜನರಿಗೆ ನಿಜವಾದ ಔಷಧಿಗಳ ಗುರುತಿಸುವಿಕೆ ಕಷ್ಟವಾಗುತ್ತಿದೆ. ಅದರಲ್ಲಿಯೂ ಇತ್ತೀಚೆಗೆ, ಕೋಟ್ಯಂತರ ರೂಪಾಯಿ ಮೌಲ್ಯದ ನಕಲಿ ಔಷಧಿಗಳನ್ನು ವಿವಿಧ ರಾಜ್ಯಗಳಿಗೆ ಕಳುಹಿಸಲಾಗುತ್ತಿದೆ ಎಂದು ವರದಿಯಾಗಿದೆ. ಇದಕ್ಕೆ ಪೂರಕವಾಗಿ ಯುಪಿ ಎಸ್ಟಿಎಫ್ ಮತ್ತು ಔಷಧ ಇಲಾಖೆಯ ತಂಡವು ಆಗ್ರಾದಲ್ಲಿ ನಕಲಿ ಔಷಧಿ ಮಾರುಕಟ್ಟೆಯ ಮೇಲೆ ದಾಳಿ ನಡೆಸಿದ್ದು, 3.32 ಕೋಟಿ ಮೌಲ್ಯದ ನಕಲಿ ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾತ್ರವಲ್ಲ ಇದು ಈವರೆಗಿನ ಅತಿದೊಡ್ಡ ದಾಳಿ ಎನಿಸಿಕೊಂಡಿದೆ. ಆದರೆ ನಮ್ಮ ಮುಂದಿರುವ ಪ್ರಶ್ನೆ ಎಂದರೆ ಸಾಮಾನ್ಯ ಜನರು ಅವುಗಳನ್ನು ಹೇಗೆ ಗುರುತಿಸಬೇಕು? ನಿಜಕ್ಕೂ ಮತ್ತು ನಕಲಿ ಔಷಧಿಗೂ ಇರುವ ವ್ಯತ್ಯಾಸವನ್ನು ಹೇಗೆ ಗುರುತಿಸುವುದು? ಈ ಬಗ್ಗೆ ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.
ಊಹಿಸಿಕೊಳ್ಳಿ, ನೀವು ಅನಾರೋಗ್ಯದಿಂದಿರುವಾಗ ಸರಿಯಾದ ಔಷಧಿ ಸೇವನೆ ಮಾಡುವ ಬದಲು ನಕಲಿ ಔಷಧವನ್ನು ಸೇವನೆ ಮಾಡಿದರೆ ಏನಾಗಬಹುದು? ಆರೋಗ್ಯ ಸರಿಯಾಗುವ ಬದಲು ಇನ್ನಷ್ಟು ಹದಗೆಡುತ್ತದೆ. ಕೆಲವೊಮ್ಮೆ, ನಕಲಿ ಔಷಧಗಳು ದೇಹಕ್ಕೆ ಹಾನಿ ಮಾಡುವಂತಹ ರಾಸಾಯನಿಕಗಳನ್ನು ಹೊಂದಿರುತ್ತವೆ. ಹಾಗಾಗಿ ಇದರ ಸೇವನೆ ಮಾಡುವುದು ಬಹಳ ಅಪಾಯಕಾರಿ, ಅದರಲ್ಲಿಯೂ ರಕ್ತದೊತ್ತಡ, ಮಧುಮೇಹ, ಹೃದಯ ಸಮಸ್ಯೆಗಳು ಮತ್ತು ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಗಳಿರುವವರ ಆರೋಗ್ಯ ಮತ್ತಷ್ಟು ಹಾಳಾಗಬಹುದು.
ನಕಲಿ ಔಷಧಗಳನ್ನು ಗುರುತಿಸಲು ಈ ಸುಲಭ ಮಾರ್ಗಗಳನ್ನು ಅನುಸರಿಸಿ
ಪ್ಯಾಕೇಜಿಂಗ್ ಅನ್ನು ಎಚ್ಚರಿಕೆಯಿಂದ ನೋಡಿ
ಸಾಮಾನ್ಯವಾಗಿ ಒಳ್ಳೆಯ ಔಷಧಿಗಳು ಉತ್ತಮ ಗುಣಮಟ್ಟದ ಪ್ಯಾಕೇಜಿಂಗ್ ಅನ್ನು ಹೊಂದಿರುತ್ತವೆ. ನಕಲಿ ಔಷಧಗಳು ಸಾಮಾನ್ಯವಾಗಿ ಮಸುಕಾದ ಮುದ್ರಣ, ತಪ್ಪಾದ ಪದಗಳು ಅಥವಾ ಸಡಿಲವಾದ ಪ್ಯಾಕೇಜಿಂಗ್ ಅನ್ನು ಹೊಂದಿರುತ್ತವೆ.
ಈ ವಿವರಗಳನ್ನು ನಿಜವಾದ ಔಷಧಿಗಳ ಮೇಲೆ ಸ್ಪಷ್ಟವಾಗಿ ಮುದ್ರಿಸಲಾಗುತ್ತದೆ. ನಕಲಿ ಔಷಧಿಗಳಲ್ಲಿ, ಬ್ಯಾಚ್ ಸಂಖ್ಯೆ ವಿಚಿತ್ರವಾಗಿ ಕಾಣಿಸಬಹುದು ಅಥವಾ ಎಲ್ಲಾ ಪ್ಯಾಕ್ಗಳಲ್ಲಿ ಒಂದೇ ರೀತಿಯ ಮಾಹಿತಿ ಇರುತ್ತದೆ.
ಬಾರ್ಕೋಡ್ ಅಥವಾ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ
ಈಗ ಹೆಚ್ಚಿನ ಕಂಪನಿಗಳು ಕ್ಯೂಆರ್ ಕೋಡ್ಗಳನ್ನು ಒದಗಿಸುತ್ತವೆ. ಮೊಬೈಲ್ ಫೋನ್ ನಿಂದ ಸ್ಕ್ಯಾನ್ ಮಾಡಿದರೆ ಆ ಔಷಧ ಕಂಪನಿಗೆ ದಾಖಲೆಗಳಿದೆಯೇ ಅಥವಾ ಇಲ್ಲವೇ ಎಂಬುದನ್ನು ತ್ವರಿತವಾಗಿ ನಿಮಗೆ ತಿಳಿಸುತ್ತದೆ.
ಔಷಧದ ಬಣ್ಣ ಮತ್ತು ಆಕಾರವನ್ನು ಗಮನಿಸಿ
ನಿಜವಾದ ಔಷಧದ ಬಣ್ಣ ಮತ್ತು ಆಕಾರ ಯಾವಾಗಲೂ ಒಂದೇ ಆಗಿರುತ್ತದೆ. ನಕಲಿ ಔಷಧವು ಮಸುಕಾಗಿ ಅಥವಾ ಅತಿಯಾಗಿ ಹೊಳೆಯುವಂತೆ ಕಾಣಿಸಬಹುದು.
ಬಿಲ್ನೊಂದಿಗೆ ಔಷಧಿಯನ್ನು ಖರೀದಿಸಿ
ಔಷಧಿಯ ಬೆಲೆ 10 ರೂಪಾಯಿಗಳಾಗಲಿ ಅಥವಾ 1000 ರೂಪಾಯಿಯಾಗಿರಲಿ, ಯಾವಾಗಲೂ ಔಷಧಿ ಖರೀದಿ ಮಾಡಿದ ಮೇಲೆ ಬಿಲ್ ತೆಗೆದುಕೊಳ್ಳುವುದನ್ನು ಮರೆಯಬೇಡಿ. ಬಿಲ್ ಇಲ್ಲದೆ ಔಷಧ ಕೊಡುತ್ತಿದ್ದರೆ ಅದನ್ನು ಖರೀದಿ ಮಾಡಬೇಡಿ.
ಕಂಪನಿಯ ಲೋಗೋ ಮತ್ತು ಸೀಲ್ ಅನ್ನು ಪರಿಶೀಲಿಸಿ
ಔಷಧಿ ಖರೀದಿ ಮಾಡುವಾಗ ಕಂಪನಿಯ ಲೋಗೋ ಮತ್ತು ಸೀಲ್ ಅನ್ನು ಪರಿಶೀಲಿಸಿ. ಇತ್ತೀಚಿನ ದಿನಗಳಲ್ಲಿ ಅನೇಕ ನಕಲಿ ಪ್ಯಾಕೇಜಿಂಗ್ಗಳು ಕಂಪನಿಯ ಲೋಗೋವನ್ನು ಕೂಡ ನಕಲಿಸುತ್ತವೆ, ಆದರೆ ಎಚ್ಚರಿಕೆಯಿಂದ ಪರಿಶೀಲಿಸಿದಾಗ ಅದರಲ್ಲಿನ ವ್ಯತ್ಯಾಸಗಳು ಗೋಚರವಾಗುತ್ತದೆ.
ಔಷಧಿ ತೆಗೆದುಕೊಂಡ ನಂತರ ಯಾವುದೇ ರೀತಿಯ ಪರಿಣಾಮ ಕಂಡುಬರದಿದ್ದರೆ ಅಥವಾ ದೇಹದಲ್ಲಿ ವಿಚಿತ್ರ ಪ್ರತಿಕ್ರಿಯೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಆ ಔಷಧವನ್ನು ಕಂಪನಿ ಅಥವಾ ಔಷಧ ವಿಭಾಗಕ್ಕೆ ವರದಿ ಮಾಡಿ. ಸರ್ಕಾರ ಕೂಡ ನಕಲಿ ಔಷಧಿಗಳನ್ನು ಮಾರಾಟ ಮಾಡುವ ಗ್ಯಾಂಗ್ಗಳ ವಿರುದ್ಧ ನಿರಂತರವಾಗಿ ಕ್ರಮ ಕೈಗೊಳ್ಳುತ್ತಿದೆ, ಆದರೆ ಸಾಮಾನ್ಯ ಜನರಿಗೆ ಈ ಬಗ್ಗೆ ಹೆಚ್ಚಿನ ಅರಿವಿಲ್ಲದಿರುವುದರಿಂದ ಈ ವ್ಯವಹಾರವನ್ನು ತಡೆಯಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ನಾವು ಹಣ್ಣು ಮತ್ತು ತರಕಾರಿಗಳನ್ನು ಖರೀದಿಸುವಾಗ ಗುಣಮಟ್ಟವನ್ನು ಪರಿಶೀಲಿಸುವಂತೆಯೇ, ಔಷಧಿಗಳನ್ನು ತೆಗೆದುಕೊಳ್ಳುವಾಗಲೂ ಕೂಡ ಜಾಗರೂಕರಾಗಿರುವುದು ಅತ್ಯಗತ್ಯ. ಆದ್ದರಿಂದ, ಮುಂದಿನ ಬಾರಿ ಔಷಧಿ ಖರೀದಿಸುವಾಗ, ಮೇಲೆ ತಿಳಿಸಲಾದ ಅಂಶಗಳನ್ನು ನೆನಪಿನಲ್ಲಿಡಿ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







