ಹೊಳಲ್ಕೆರೆ: ಸರ್ಕಾರದಲ್ಲಿ ಹೋರಾಟ ಮಾಡಿ ಸಾವಿರಾರು ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ದಿಗೆ ಹಗಲು-ರಾತ್ರಿ
ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ಗಂಗಸಮುದ್ರ ಗ್ರಾಮದಲ್ಲಿ ಎರಡು ಕೋಟಿ ರೂ.ವೆಚ್ಚದಲ್ಲಿ ಕೆರೆ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ
ಮಾತನಾಡಿದರು.ನಾನು ಮಂತ್ರಿಯಲ್ಲ. ಆರ್ಡಿನರಿ ಶಾಸಕ ಯಾರಿಂದಲೂ ಏನನ್ನು ಹೇಳಿಸಿಕೊಳ್ಳದೆ. ಯಾವ ಊರಿಗೆ ಏನು ಬೇಕು ಎನ್ನುವುದನ್ನು ಆಲೋಚಿಸಿ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದೇನೆ. ಸರ್ಕಾರ ಉಚಿತ ಗ್ಯಾರೆಂಟಿಗಳಿಗೆ ಹಣ ಬಳಸುತ್ತಿರುವುದರಿಂದನಮಗೆ ಅನುದಾನವಿಲ್ಲವೆಂದು ಕಾಂಗ್ರೆಸ್ ಶಾಸಕರುಗಳು ಗೋಳಾಡುತ್ತಿದ್ದಾರೆ. ನಾನು ಕೋಟಿ ಕೋಟಿ ಹಣ ತಂದು ದಿನವೂಒಂದಲ್ಲ ಒಂದು ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸುತ್ತಿದ್ದೇನೆ. ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದೇನೆ.
ಡ್ಯಾಂ ಬಳಿನಾಲ್ಕು ಪಂಪ್‍ಗಳನ್ನು ಚಾಲು ಮಾಡಿದರೆ ಸಾಕು ತಾಲ್ಲೂಕಿನಲ್ಲಿರುವ 37 ಕೆರೆಗಳು ತುಂಬಿ ಹರಿಯುತ್ತವೆ ಎಂದು ತಿಳಿಸಿದರು.ವಿಧಾನಸಭೆಯಲ್ಲಿ ಎರಡು ಮೂರು ಬಾರಿ ಚರ್ಚಿಸಿದ್ದೇನೆ. ತರಿಕೆರೆ ಶಾಸಕ ಶ್ರೀನಿವಾಸ್‍ಮೂರ್ತಿ ಭರವಸೆ ಕೊಟ್ಟಿದ್ದಾರೆ. ಅಧಿಕಾರಶಾಶ್ವತವಲ್ಲ. ಇರುವಷ್ಟು ದಿನ ಹತ್ತಾರು ಜನ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡಬೇಕು. ವಿಧಾನಸೌಧ ಕಟ್ಟಿದ್ದು, ಕೇವಲ 90 ಲಕ್ಷರೂ.ಗಳಲ್ಲಿ. ನಾನು ಸಾವಿರಾರು ಕೋಟಿ ರೂ.ಗಳನ್ನು ಕ್ಷೇತ್ರದ ಅಭಿವೃದ್ದಿಗೆ ಖರ್ಚು ಮಾಡುತ್ತಿದ್ದೇನೆ. ರೈತರ ತೋಟಗಳುಒಣಗಬಾರದು. ಸರ್ವಾಂಗೀಣ ಅಭಿವೃದ್ದಿಯಾಗಬೇಕೆಂಬುದು ನನ್ನ ಗುರಿ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರುಗಳಾದ ಮಹೇಶ್, ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳಾದ ಶಕುಂತಲಮ್ಮ,
ದಾನವೇಂದ್ರ ದಾನೇಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಮೇಶ್, ಸದಸ್ಯರುಗಳಾದ ಚಂದ್ರಶೇಖರ್, ಜಯಣ್ಣ, ಚಂದ್ರಕಲಾ,
ಮಾರುತೇಶ್, ಮಂಜುನಾಥ್, ಹಳ್ಳಪ್ಪ, ರಮೇಶ್, ಆನಂದ್, ರುದ್ರಣ್ಣ, ಯುವರಾಜ್ ಹಾಗೂ ಗಂಗಸಮುದ್ರ ಮತ್ತು ಸುತ್ತಮುತ್ತಲಿನಗ್ರಾಮದ ಮುಖಂಡರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



