ನಮ್ಮ ದೇಹದಲ್ಲಿ ತುಂಬಾ ಸೂಕ್ಷ್ಮವಾದ ಮತ್ತು ಅತಿ ಹೆಚ್ಚು ಉಪಯೋಗಕ್ಕೆ ಬರುವ ಅಂಗಗಳು ಎಂದರೆ ಅದು ನಮ್ಮ ಕಣ್ಣುಗಳು. ಹಲವು ಕಾರಣಗಳಿಂದ ನಮಗೆ ಕಣ್ಣುಗಳ ನವೆ ಉಂಟಾಗಬಹುದು. ಕಣ್ಣುಗಳಲ್ಲಿ ಸಣ್ಣ ಸಣ್ಣ ಗುಳ್ಳೆ ಆದರೆ, ಧೂಳು ಮಿಶ್ರಿತ ವಾತಾವರಣದಲ್ಲಿ ಹೊಗೆ ತುಂಬಿದ ಪ್ರದೇಶದಲ್ಲಿ ಹೆಚ್ಚು ಹೊತ್ತು ಇರುವುದರಿಂದ, ಕಣ್ಣುಗಳಿಗೆ ಕಸ ಬಿದ್ದರೆ, ಹೀಗೆ ನಮಗೆ ಉಂಟಾಗುವ ಕಣ್ಣುಗಳ ಕಿರಿಕಿರಿ ನಮ್ಮಿಂದ ಸಾಕಷ್ಟು ಜವಾಬ್ದಾರಿಯುತ ನಡೆಯನ್ನುನಿರೀಕ್ಷಿಸುತ್ತದೆ.ನಮಗೆ ಕಣ್ಣುಗಳು ಯಾವುದೋ ಕಾರಣಕ್ಕೆ ನವೆ ಉಂಟಾಗುತ್ತಿದ್ದರೆ, ಆದಷ್ಟು ಬೇಗನೆ ಅದರಿಂದ ಪರಿಹಾರಗಳನ್ನು ನಮ್ಮ ಕೈಗಳನ್ನು ಬಳಕೆ ಮಾಡುತ್ತೇವೆ. ಆ ಕ್ಷಣದಲ್ಲಿ ನಮ್ಮ ಕೈಗಳು ಕೊಳೆಯಿಂದ ಕೂಡಿರುತ್ತವೆ ಅಥವಾ ಧೂಳಿನಿಂದ ತುಂಬಿರುತ್ತವೆ ಎಂಬುದನ್ನು ನಾವು ಗಮನಿಸುವುದಿಲ್ಲ.ಕೇವಲ ಕಣ್ಣುಗಳ ನವೆಯಿಂದ ಪರಿಹಾರ ಕಾಣುವುದು ಮಾತ್ರ ನಮಗೆ ಮುಖ್ಯವಾಗಿರುತ್ತದೆ. ಆದರೆ ಹೀಗೆ ಮಾಡುವುದರಿಂದ ಕಣ್ಣಿನ ನವೆ ಇನ್ನಷ್ಟು ಜಾಸ್ತಿಯಾಗುತ್ತದೆ.ಹಾಗಾಗಿ ಇಂತಹ ಸಮಯದಲ್ಲಿ ಸಂಪ್ರದಾಯಿಕವಾಗಿ ಬಹಳ ಹಿಂದಿನಿಂದ ಜನರ ಅನುಸರಿಸಿಕೊಂಡು ಬರುತ್ತಿರುವ ಒದ್ದೆ ಬಟ್ಟೆಯ ತಂತ್ರ ಕೆಲಸ ಮಾಡುತ್ತದೆ. ಕಣ್ಣುಗಳ ಕಿರಿಕಿರಿ ಮತ್ತು ನವೆಯನ್ನು ತಣ್ಣೀರಿನಲ್ಲಿ ಅದ್ದಿದ ಒದ್ದೆ ಬಟ್ಟೆ ದೂರ ಮಾಡುತ್ತದೆ ಮತ್ತು ಕಣ್ಣುಗಳಿಗೆ ಪ್ರಶಾಂತತೆಯ ವಾತಾವರಣವನ್ನು ನಿರ್ಮಾಣ ಮಾಡಿಕೊಡುತ್ತದೆ.ಅಲೋವೆರಾದಲ್ಲಿ ಸಾಕಷ್ಟು ಬಗೆಯ ಔಷಧೀಯ ಗುಣಗಳು ಇರುವುದು ನಿಮಗೆಲ್ಲ ಗೊತ್ತೇ ಇದೆ. ಚರ್ಮದ ಕಾಂತಿಯನ್ನು ಹೆಚ್ಚಿಸಲು ಮತ್ತು ಚರ್ಮದ ಕಿರಿಕಿರಿ ತಪ್ಪಿಸಲು ಅಲವೇರಾ ಬಳಕೆಯಾಗುತ್ತದೆ. ಅದೇ ರೀತಿ ಕಣ್ಣುಗಳ ಆರೋಗ್ಯದಲ್ಲೂ ಕೂಡ ಅಲೋವೆರಾ ತುಂಬಾ ಅಚ್ಚುಕಟ್ಟಾಗಿ ಕೆಲಸ ಮಾಡುತ್ತದೆ.ಕಣ್ಣುಗಳ ನವೆಯಿಂದ ಪಾರಾಗಲು ನೀವು ಒಂದು ಬ್ಲೆಂಡರ್ ನಲ್ಲಿ 1 ಟೀ ಸ್ಪೂನ್ ಅಲೋವೆರಾ ಜೆಲ್, 1 ಐಸ್ ಕ್ಯೂಬ್ ಮತ್ತು 1 ಟೀ ಚಮಚ ನೀರು ಮಿಶ್ರಣ ಮಾಡಿ ಅದನ್ನು ಒಂದು ಬೌಲ್ ಗೆ ವರ್ಗಾಯಿಸಿಕೊಂಡು ಒಂದು ಹತ್ತಿ ಉಂಡೆಯನ್ನು ತೆಗೆದುಕೊಂಡು ಈ ಮಿಶ್ರಣದಲ್ಲಿ ಅದ್ದಿ ನಿಮ್ಮ ಕಣ್ಣು ಗಳನ್ನು ಮುಚ್ಚಿಕೊಂಡು ಮೇಲ್ಭಾಗದಲ್ಲಿ ಇಟ್ಟುಕೊಳ್ಳಿ. ಕೇವಲ 2 ರಿಂದ 3 ನಿಮಿಷದಲ್ಲಿ ನಿಮಗೆ ತಕ್ಷಣವೇ ಪರಿಹಾರ ಸಿಗುತ್ತದೆ.ಚರ್ಮದ ಆರೋಗ್ಯಕ್ಕೆ ಹಾಲು ಮತ್ತು ರೋಸ್ ವಾಟರ್ ತುಂಬಾ ಪರಿಣಾಮಕಾರಿ. ಕಣ್ಣುಗಳಲ್ಲಿ ಉಂಟಾಗುತ್ತಿರುವ ನವೆ ಮತ್ತು ಕೆರೆತಕ್ಕೆ ಇದೊಂದು ಅತ್ಯುತ್ತಮ ಮನೆಮದ್ದು ಎಂಬುದು ಈಗಾಗಲೇ ಸಾಬೀತಾಗಿದೆ.ಅಚ್ಚ ಹಸುವಿನ ಹಾಲನ್ನು ತಂಪಾದ ರೀತಿ ತೆಗೆದುಕೊಂಡು ಅಷ್ಟೇ ಸಮ ಪ್ರಮಾಣದ ರೋಜ್ ವಾಟರ್ ಹಾಲಿಗೆ ಮಿಶ್ರಣಮಾಡಿ ಅದರಲ್ಲಿ ಒಂದು ಹತ್ತಿ ಉಂಡೆಯನ್ನು ಅದ್ದಿ ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಮೇಲ್ಭಾಗದಲ್ಲಿ ಇಟ್ಟುಕೊಳ್ಳುವುದರಿಂದ ಕೇವಲ 5 ನಿಮಿಷದಲ್ಲಿ ನಿಮಗೆ ಪರಿಹಾರ ಸಿಗುತ್ತದೆ.ಕಣ್ಣುಗಳ ನವೆ ನಿವಾರಣೆಗೆ ಇನ್ನೊಂದು ಪರಿಣಾಮಕಾರಿ ಮನೆಮದ್ದು ಎಂದರೆ ಅದು ಚಾಮೊಮೈಲ್ ಹೂವು ಅಥವಾ ಚಾಮೊಮೈಲ್ ಎಣ್ಣೆಯ ಬಳಕೆ ಮಾಡುವುದು. ಚಾಮೊಮೈಲ್ ಚಹಾ ಬ್ಯಾಗ್ ಕೂಡ ಬಹಳ ಸುಲಭವಾಗಿ ಎಲ್ಲರ ಬಳಿ ಲಭ್ಯವಿರುತ್ತದೆ. ಹಾಗಾಗಿ ಇದನ್ನು ಬೇಕಾದರೂ ಫ್ರೀಜರ್ ನಲ್ಲಿ ಸ್ವಲ್ಪ ಹೊತ್ತು ಇಟ್ಟು ಕಣ್ಣುಗಳ ಮೇಲೆ ನಂತರ ಇಟ್ಟುಕೊಳ್ಳುವುದರ ಮೂಲಕ ಪರಿಹಾರ ಕಾಣಬಹುದು.ಜೀರ್ಣಾಂಗ ವ್ಯವಸ್ಥೆಗೆ ಅತ್ಯುತ್ತಮವಾಗಿ ಕೆಲಸ ಮಾಡುವ ಸೋಂಪು ಕಾಳುಗಳು ಚರ್ಮದ ಹಾಗೂ ಕಣ್ಣುಗಳ ಆರೋಗ್ಯ ಸಮಸ್ಯೆಯಲ್ಲಿ ಕೂಡ ತಮ್ಮ ಪ್ರಭಾವ ಬೀರುತ್ತವೆ 1 ಟೇಬಲ್ ಚಮಚ ಸೋಂಪು ಕಾಳುಗಳನ್ನು 1 ಕಪ್ ಕುದಿಯುವ ನೀರಿನಲ್ಲಿ ಹಾಕಿ ಐದು ನಿಮಿಷಗಳ ಕಾಲ ಕುದಿಸಿ ನಂತರ ಇದನ್ನು ಆರಿಸಿ ಶೋಧಿಸಿ ಇದರಿಂದ ನಿಮ್ಮ ಕಣ್ಣುಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವ ಮೂಲಕ ಕಣ್ಣುಗಳ ನವೆಯನ್ನು ದೂರ ಮಾಡಿಕೊಳ್ಳಬಹುದು.ಕೊತ್ತಂಬರಿ ಬೀಜ ಸಾಮಾನ್ಯ ಮಸಾಲೆ ಪದಾರ್ಥ ಎಂದು ಅನಿಸಿದರೂ ಇದರಲ್ಲಿ ಸಾಕಷ್ಟು ಆಂಟಿ ಬ್ಯಾಕ್ಟೀರಿಯಲ್ ಮತ್ತು anti-inflammatory ಗುಣಲಕ್ಷಣಗಳು ಲಭ್ಯವಿದ್ದು, ಕಣ್ಣುಗಳಿಗೆ ಕಿರಿಕಿರಿ ಉಂಟು ಮಾಡುತ್ತಿರುವ ರೋಗ ಲಕ್ಷಣಗಳ ವಿರುದ್ಧ ಹೋರಾಡುವ ಶಕ್ತಿ ಪಡೆದಿವೆ.ಒಣ ಕಣ್ಣುಗಳ ಸಮಸ್ಯೆಯನ್ನು ಧನಿಯ ಬೀಜಗಳು ನಿವಾರಣೆ ಮಾಡುತ್ತದೆ. ಇದಕ್ಕಾಗಿ ನೀವು ಒಂದು ಪ್ಯಾನ್ ತೆಗೆದುಕೊಂಡು ಅದರಲ್ಲಿ ಅರ್ಧ ಕಪ್ ನೀರು ಹಾಕಿ ಒಂದು ಟೇಬಲ್ ಚಮಚ ಧನಿಯಾ ಕಾಳುಗಳನ್ನು ಸೇರಿಸಿ ಈ ನೀರನ್ನು ಸ್ವಲ್ಪ ಹೊತ್ತು ಕುದಿಯಲು ಬಿಟ್ಟು ನಂತರ ಆರಿಸಿ ಕೆಲವು ಹನಿಗಳನ್ನು ನಿಮ್ಮ ಕಣ್ಣುಗಳಿಗೆ ಡ್ರಾಪರ್ ಸಹಾಯದಿಂದ ಬಿಟ್ಟುಕೊಳ್ಳಬಹುದು. ಇಲ್ಲವೆಂದರೆ ಇದೇ ನೀರಿನಲ್ಲಿ ಕಣ್ಣುಗಳನ್ನು ಸ್ವಚ್ಛ ಮಾಡಿಕೊಳ್ಳಬಹುದು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







