ಇಂದಿನ ಸಮಾಜದಲ್ಲಿ ಜನರು ಹೆಚ್ಚಾಗಿ ಶುಗರ್, ಹೃದಯಾಘಾತ, ಅಧಿಕ ರಕ್ತದೊತ್ತಡ, ಪಾರ್ಶ್ವವಾಯು ಹಾಗೂ ಕ್ಯಾನ್ಸರ್ ಕಾಯಿಲೆಯಂತಹ ರೋಗಗಳನ್ನು ಎದುರಿಸುತ್ತಿದ್ದಾರೆ ಎಂದು ಸಂಸದ ಡಾ. ಸಿ.ಎನ್ ಮಂಜುನಾಥ್ ಹೇಳಿದರು.ಬೆಂಗಳೂರಿನ ಜಕ್ಕೂರಿನ ಡಾ. ಶಿವರಾಮ ಕಾರಂತ ನಗರದಲ್ಲಿ ದಿ ಪಾವಗಡ ಸೌಹಾರ್ದ ಮಲ್ಟಿಪರ್ಪಸ್ ಕೋ-ಆಪರೇಟಿವ್ ಸೊಸೈಟಿ ಲಿ. ಆಯೋಜಿಸಿದ್ದ ವಾರ್ಷಿಕ ಸಾಮಾನ್ಯ ಮಹಾಸಭೆಯಲ್ಲಿ ಮಾತನಾಡಿದ ಅವರು ಈ ಹಿಂದೆ 60–65 ವರ್ಷ ವಯಸ್ಸಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಯಿಲೆಗಳು ಈಗ 20 ವರ್ಷ ಮುಂಚಿತವಾಗಿ ಅಂದರೆ 40–45 ವರ್ಷದಲ್ಲೇ ಕಾಣಿಸಿಕೊಳ್ಳುತ್ತಿವೆ.
ಇದಲ್ಲದೆ, ಮತ್ತೊಂದು ಗಂಭೀರ ಸಮಸ್ಯೆಯಾದ ಒಂಟಿತನ ಹಾಗೂ ಮೊಬೈಲ್, ಟಿವಿ, ಕಂಪ್ಯೂಟರ್ಗೆ ಅತಿಯಾದ ಅಂಟಿಕೊಳ್ಳುವಿಕೆ (ಸ್ಕ್ರೀನ್ ಅಡಿಶನ್) ಕೂಡ ಸಮಾಜದಲ್ಲಿ ವೇಗವಾಗಿ ಹೆಚ್ಚುತ್ತಿದೆ ಎಂದು ಎಚ್ಚರಿಸಿದರು.ಇಂದು ಅನೇಕರು ಮೇಲೆ ನೋಡಲು ಆರೋಗ್ಯವಾಗಿರುವಂತೆ ತೋರುತ್ತಾರೆ. ಆದರೆ ಏಕಾಏಕಿ ಹೃದಯಾಘಾತ, ಸ್ಟ್ರೋಕ್ ಅಥವಾ ಇನ್ನಾವುದೋ ಗಂಭೀರ ಸಮಸ್ಯೆಯಿಂದ ಬಾಧಿತರಾಗುತ್ತಾರೆ. ಇದರ ಹಿಂದೆ ಇರುವ ಮೂಲ ಕಾರಣವೇ ಜೀವನಶೈಲಿ, ಒತ್ತಡ, ವ್ಯಾಯಾಮದ ಕೊರತೆ ಮತ್ತು ಆಹಾರ ಪದ್ಧತಿಯ ಅಸ್ಥಿರತೆ.
ಈ ಸಂದರ್ಭದಲ್ಲಿ ತಾಯಂದಿರ ಬಗ್ಗೆ ವಿಶೇಷವಾಗಿ ಉಲ್ಲೇಖಿಸಿ, “ಮಕ್ಕಳ ವಿದ್ಯಾಭ್ಯಾಸವನ್ನು ತಾಯಂದಿರೇ ಹೊತ್ತುಕೊಂಡಿದ್ದಾರೆ. ಮಕ್ಕಳಿಗಿಂತಲೂ ಹೆಚ್ಚು ತಾಯಂದಿರೇ ಓದಿಸುತ್ತಿದ್ದಾರೆ, ಪರೀಕ್ಷೆ ಬರೆಸುತ್ತಿದ್ದಾರೆ. ಇದರ ಪರಿಣಾಮವಾಗಿ ತಾಯಂದಿರಿಗೇ ಒತ್ತಡ, ಅನಾರೋಗ್ಯ ಉಂಟಾಗುತ್ತಿದೆ. ವಿದ್ಯಾಭ್ಯಾಸ ಮಕ್ಕಳ ಹೊಣೆಗಾರಿಕೆ ಎಂಬ ಅರಿವು ಸಮಾಜದಲ್ಲಿ ಬರುವುದು ಅತ್ಯಗತ್ಯ” ಎಂದು ಹೇಳಿದರು.ಜನರಿಗೆ ಆರೋಗ್ಯ ಕಾಪಾಡಿಕೊಳ್ಳಲು ಸಲಹೆ ನೀಡಿದ ಅವರು, ಪ್ರತಿದಿನ ಕನಿಷ್ಠ ಅರ್ಧ ಗಂಟೆ ವ್ಯಾಯಾಮ ಮಾಡಬೇಕು, ಆಹಾರದಲ್ಲಿ ನಿಯಮ, ತಾಳ್ಮೆ ಮತ್ತು ಸರಳತೆ ಇರಬೇಕು, ಸ್ಕ್ರೀನ್ ಟೈಮ್ ಕಡಿಮೆ ಮಾಡಬೇಕು, ಕುಟುಂಬದವರೊಂದಿಗೆ ಹೆಚ್ಚು ಸಮಯ ಕಳೆಯಬೇಕು ಹಾಗೂ ಒಂಟಿತನ ತೊರೆದು ಸ್ನೇಹ ಸಂಬಂಧಗಳು ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ, ಶೈಕ್ಷಣಿಕ, ಎಲ್ಐಸಿ, ಆರೋಗ್ಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಕೇಂದ್ರ ಸರ್ಕಾರ ಜಿಎಸ್ಟಿ ಕಡಿಮೆ ಮಾಡಿರುವುದು ಮಧ್ಯಮ ವರ್ಗದ ಜನರಿಗೆ ಹೆಚ್ಚು ಅನುಕೂಲವಾಗಿದೆ ಎಂದು ಮಾನ್ಯ ಸಂಸದರು ಪ್ರಶಂಸಿಸಿದರು.ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರು, ಸದಸ್ಯರು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







