ಚಿತ್ರದುರ್ಗ : ಚಿಕ್ಕಂದಿನಿಂದಲೇ ಅಸಾಮಾನ್ಯ ಬಾಲ ಪ್ರತಿಭೆಗಳನ್ನು ಗುರುತಿಸಬೇಕು. ಕೆಲವು ಮಕ್ಕಳ ಬುದ್ದಿಮತ್ತೆ ವಿಶೇಷವಾಗಿರುತ್ತದೆ.ವಯಸ್ಸಿಗೂ ಮೀರಿದ ಜ್ಞಾನ, ಬುದ್ದಿವಂತಿಕೆಯಿಂದ ಅವರು ಜಗತ್ತಿನ ಗಮನ ಸೆಳೆಯುತ್ತಾರೆ. ವಿಶೇಷವಾದ್ದನ್ನು ಸಾಧಿಸುತ್ತಾರೆ ಎಂದುಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.ಎಸ್.ಜೆ.ಎಸ್ ಸಮೂಹ ವಿದ್ಯಾಸಂಸ್ಥೆ ಹಮ್ಮಿಕೊಂಡಿದ್ದ ಗುರುಪೂರ್ಣಿಮಾ ನಿಮಿತ್ತ ಅಕ್ಷರಾಭ್ಯಾಸ ಪ್ರಾರಂಭದ ದಿವ್ಯಸಾನ್ನಿಧ್ಯವಹಿಸಿಕೊಂಡು ಮಾತನಾಡಿದ ಶ್ರೀಗಳು, ಅಕ್ಷರ ಎಂಬ ಶಬ್ಧಕ್ಕೆ ನಾಶವಿಲ್ಲದಿರುವುದು ಎಂದರ್ಥ. ಮೌಲಿಕವಾಗಿ ಇದುನಾಶವಿಲ್ಲದ ಪರತತ್ವವನ್ನೇ ಹೇಳುತ್ತದೆ.
ಅಭ್ಯಾಸವೆಂದರೆ ಆ ತತ್ವಕ್ಕೆ ತನ್ನನ್ನು ಅಭಿಮುಖವಾಗಿ ಇರಿಸಿಕೊಳ್ಳುವುದು. ಮಕ್ಕಳಲ್ಲಿಶಿಕ್ಷಣದ ಬಗೆಗೆ ಪ್ರೀತಿ ಹುಟ್ಟಿಸುವ ಕಲಿಕೆಯು ಬದುಕಿನ ಮೊದಲ ಆದ್ಯತೆಯಾಗಬೇಕಾದ ಬಗ್ಗೆ ಅರಿವು ಮೂಡಿಸುವ ಬಾಲಜಾಗೃತಿಹೆಚ್ಚಾಗಬೇಕು. ಪ್ರತಿ ಮಗುವಿಗೆ ಅನ್ನ ಅಕ್ಷರ ಆರೋಗ್ಯ ಅತ್ಯ ಅವಶ್ಯಕತೆ. ಬದುಕಿನ ಜಂಜಾಟದಲ್ಲಿ ಏನೇ ಸಮಸ್ಯೆಗಳುಎದುರಾದರೂ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣದಿಂದ ವಂಚಿತರನ್ನಾಗಿಸಬಾರದು. ಉತ್ತಮ ಶಿಕ್ಷಣದ ಮೂಲಕ ತಮ್ಮ ಮಕ್ಕಳನ್ನುಸಮಾಜದ ಉನ್ನತ ಶ್ರೇಣಿಯಲ್ಲಿ ಅಲಂಕರಿಸುವಂತೆ ಜೀವನೋತ್ಸಾಹ ತುಂಬಬೇಕು. ಮಕ್ಕಳು ಅನುಕರಣೆಯನ್ನು ಹೆಚ್ಚುಮಾಡುವುದರಿಂದ ಪೋಷಕರು ಮಕ್ಕಳು ಮನೆಯಲ್ಲಿದ್ದಾಗ ಟಿವಿ ಮತ್ತು ಮೊಬೈಲ್ ಗಳಿಂದ ಸ್ವತಃ ದೂರವಿರಬೇಕು. ಮಕ್ಕಳೊಂದಿಗೆಧ್ಯಾನ ಅಧ್ಯಯನ ಮಾಡುವ ರೂಢಿಯನ್ನು ಬೆಳೆಸಿಕೊಳ್ಳಬೇಕು. ಮನೆಯೇ ಮೊದಲ ಪಾಠಶಾಲೆ, ತಂದೆ-ತಾಯಿಗಳೇ ಮೊದಲಗುರುಗಳಾಗಿರುವುದರಿಂದ ತಂದೆ ತಾಯಿಗಳ ಮೂಲಕ ಉಜ್ವಲ ಬೆಳಕನ್ನು ಮಕ್ಕಳು ಕಾಣಬೇಕೆಂದು ಹೇಳಿದರು.ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಪ್ರತಿ ಮಗುಗೆ ಪ್ರಥಮ ಅಕ್ಷರಭ್ಯಾಸ ಮಾಡಿಸಿದರು.ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕ ಸಿಬ್ಬಂದಿ, ಶಿಕ್ಷಕೇತರ ಸಿಬ್ಬಂದಿ, ಮಕ್ಕಳು ಹಾಗೂ ಪೋಷಕ ವರ್ಗದವರು ಉಪಸ್ಥಿರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



