ಚಿತ್ರದುರ್ಗ: ದಲೈಲಾಮಾ ಅವರ 90ನೇ ವರ್ಷದ ಹುಟ್ಟುಹಬ್ಬ ಹಿನ್ನಲೆ ಕೋಟೆನಾಡು ಚಿತ್ರದುರ್ಗದ ಮುರುಘಾ ರಾಜೇಂದ್ರ ಬೃಹನ್ಮಠದಲ್ಲಿ ಬಸವ ನಾಡಿನಲ್ಲಿ ಬುದ್ಧನ ಸ್ಮರಣೆ ಶೀರ್ಷಿಕೆಯಲ್ಲಿ ಬೃಹತ್ ಕಾರ್ಯಕ್ರಮವನ್ನು ಮುರುಘಾ ರಾಜೇಂದ್ರದ ಅನುಭವ ಮಂಟಪದಲ್ಲಿ ಬೃಹತ್ ಆಯೋಜನೆ ಮಾಡಲಾಗಿದೆ ಎಂದು ಮಾಜಿ ರಾಜ್ಯಸಭಾ ಸದಸ್ಯರಾದ ಹೆಚ್. ಹನುಮಂತಪ್ಪ ತಿಳಿಸಿದರು.ನಗರದ ಹೈಟೆಕ್ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಿತ್ರದುರ್ಗಕ್ಕೂ ದಲೈಲಾಮಾ ಅವರಿಗೆ ಅವಿನಾಭಾವ ಸಂಬಂಧ ಇದೆ. ನಿಜಲಿಂಗಪ್ಪ ಸಿಎಂ ಆದಾಗ ನೆಹರೂ ಅವರು ನಿಜಲಿಂಗಪ್ಪ ಅವರಿಗೆ ಕರೆ ಮಾಡಿ ಟಿಬೆಟಿಯನ್ನರಿಗೆ ಆಶ್ರಯ ನೀಡಲು ಒಪ್ಪಿಸಿದ್ದರು. ಆಗಿನಿಂದಲೂ ನಮ್ಮ ಜಿಲ್ಲೆಗೂ ಅವರಿಗೂ ಉತ್ತಮ ಸಂಬಂಧ ಇದೆ ಎಂದು ಹಳೆ ನೆನಪು ಮೆಲುಕು ಹಾಕಿದರು. ದಲೈಲಾಮಾ ಅವರ ಹುಟ್ಟು ಹಬ್ಬದ ವರ್ಷವನ್ನು ಸ್ನೇಹ ಸೌಹಾರ್ದಯುತ ವರ್ಷ ಎಂದು ಇಡೀ ವರ್ಷ ಆಚರಿಸುವುದಕ್ಕೆ ಕರೆ ನೀಡಿದ್ದಾರೆ. ಈ ಬಾರಿ ನನ್ನ ಹುಟ್ಟುಹಬ್ಬದ ಅಂಗವಾಗಿ ಚಿತ್ರದುರ್ಗದಲ್ಲಿ ಕಾರ್ಯಕ್ರಮ ಮಾಡಬೇಕು ಎಂದು ದಲೈಲಾಮಾ ಅವರೇ ಪತ್ರ ಬರೆದಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮಕ್ಕೆ 500 ಬೌದ್ಧ ಭಿಕ್ಷುಗಳು ಬರಲಿದ್ದು, ನೀಲಕಂಠೇಶ್ವರ ದೇಗುಲದಿಂದ ಅಂಬೇಡ್ಕರ್ ವೃತ್ತ, ಮದಕರಿ ವೃತ್ತದ ಮೂಲಕ ಮಾದರ ಚೆನ್ನಯ್ಯ ಮಠಕ್ಕೆ ಮೆರವಣಿಗೆ ಮೂಲಕ ಆಗಮಿಸಲಿದ್ದಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವಕುಮಾರ ಸ್ವಾಮೀಜಿ ವಹಿಸಲಿದ್ದು, ಮಾದರ ಚೆನ್ನಯ್ಯ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕೈಗಾರಿಕ ಸಚಿವ ಎಂ.ಬಿ ಪಾಟೀಲ್ ಮಾಡಲಿದ್ದು, ಟಿಬೆಟ್ ಸರ್ಕಾರದ ಪ್ರತಿನಿಧಿ ಜಿಗ್ಮೆಲಾಮ thank you india ಹಾಗೂ thank you ಕರ್ನಾಟಕ ಧನ್ಯವಾದ ಹೇಳಲಿದ್ದಾರೆ. ಜೊತೆಗೆ ಮಾದರ ಚೆನ್ನಯ್ಯ ಸ್ವಾಮೀಜಿ ಅಖಿಲ ಭಾರತ ಇಂಡೋ ಟಿಬೆಟಿಯನ್ ಫ್ರೆಂಡ್ಶಿಪ್ ಸೊಸೈಟಿಗೆ ಉಪಾಧ್ಯಕ್ಷರಾಗಿ ನೇಮಕ ಆಗಿದ್ದು, ಕಾರ್ಯಕ್ರಮದಲ್ಲಿ ಶ್ರೀಗಳಿಗೆ ಅಧಿಕಾರ ಪತ್ರ ನೀಡುವ ಮೂಲಕ ಅಧಿಕಾರ ಸ್ವೀಕಾರ ಮಾಡ್ತಾರೆ ಎಂದು ಮಾಹಿತಿ ನೀಡಿದರು.
ಇದೆ ವೇಳೆ ಮಾದರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ದಲಾಲೈಮಾ ಇಡೀ ದೇಶಕ್ಕೆ ಕೃತಜ್ಞತೆ ಸಲ್ಲಿಸಬೇಕು ಎಂಬ ಉದ್ದೇಶದಿಂದ ಚಿತ್ರದುರ್ಗದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ರಾಜ್ಯದ ಸಾಂಸ್ಕೃತಿಕ ನಾಯಕರಾಗಿ ಬಸವಣ್ಣರನ್ನ ಕರೆದಿದ್ದು, ಅದಕ್ಕಾಗಿಯೇ ಬಸವ ನಾಡಿನಲ್ಲಿ ಬುದ್ಧನ ಸ್ಮರಣೆ ಎಂಬ ಶೀರ್ಷಿಕೆಯಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಕಾರ್ಯಕ್ರಮಕ್ಕೆ ಸರ್ಕಾರದ ಪರವಾಗಿ ಬೃಹತ್ ಕೈಗಾರಿಕ ಸಚಿವ ಎಂ. ಬಿ ಪಾಟೀಲ್, ಸಚಿವರಾದ ಸಂತೋಷ್ ಲಾಡ್, ಕೆ.ಹೆಚ್ ಮುನಿಯಪ್ಪ, ಗೋವಿಂದ ಕಾರಜೋಳ, ಶಾಸಕ ವೀರೇಂದ್ರ ಪಪ್ಪಿ ಸೇರಿದಂತೆ ಸ್ಥಳೀಯ ಶಾಸಕರು ಭಾಗಿಯಾಗಲಿದ್ದಾರೆ. ದಲೈಲಾಮಾ ಅವರ ಪ್ರತಿನಿಧಿಯಾಗಿ ಸಾರ್ಕ್ ದೇಶಗಳಿಗೆ ಸದಸ್ಯರಾಗಿರುವ ಜಿಗ್ಮೆಜುಗ್ನೆ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಧರ್ಮಶಾಲಾದಿಂದ ಬರಲಿದ್ದಾರೆ ಎಂದರು. ಬೌದ್ಧ ಸಮುದಾಯದ ಗಣ್ಯರು ಭಾಗಿಯಾಗಲಿದ್ದಾರೆ. ಬಸವಣ್ಣ ಹಾಗೂ ಬುದ್ಧನ ತತ್ವಗಳನ್ನು ಸಾರ್ವತ್ರಿಕವಾಗಿ ಜಾತಿ ಮತ ಮೀರಿದ ಸಾರುವ ಉದ್ದೇಶದಿಂದ ಈ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.ಮುರುಘಾ ಮಠದ ಉಸ್ತುವಾರಿಗಳಾದ ಡಾ.ಶ್ರೀಬಸವಕುಮಾರ ಸ್ವಾಮೀಜಿ ಮಾತನಾಡಿ, ಬೌದ್ಧ ಸನ್ಯಾಸಿಗಳು ಮೊಟ್ಟ ಮೊದಲ ಬಾರಿಗೆ ಬರಲಿದ್ದಾರೆ. ನಿಜಲಿಂಗಪ್ಪ ಚಿತ್ರದುರ್ಗದವರು ಎಂಬ ಕಾರಣಕ್ಕೆ ಇಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ವೀರಶೈವ ಸಮಾಜದ ಮುಖಂಡರಾದ ಷಣ್ಮುಖಪ್ಪ, ಹಾಲೇಶ್, ಹೆಚ್. ಜೆ.ಕೃಷ್ಣಮೂರ್ತಿ, ಮಂಜುನಾಥ್, ಜಯಣ್ಣ ಮತ್ತಿತರು ಇದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



