ಚಿತ್ರದುರ್ಗ: ರಾಜ್ಯ ಸರ್ಕಾರ ವರ್ಷಕ್ಕೊಮ್ಮೆ ನೂರಾರು ಹೊಸ ಬಸ್ ಗಳನ್ನು ಖರೀದಿ ಮಾಡುತ್ತದೆ. ಆದ್ರೆ ಆ ಬಸ್ ಗಳು ಎಲ್ಲಿಗೆ ಹೋಗ್ತವೆ ಅನ್ನೋದು ಮಾತ್ರ ಗೊತ್ತಿಲ್ಲದಂತೆ ಆಗಿದೆ. ಕೆಲ ಜಿಲ್ಲೆಗಳಲ್ಲಿ ಬಸ್ ಗಳು ಗುಜರಿ ತಲುಪುವ ಮಟ್ಟಕ್ಕೆ ಬಂದಿದ್ದರು ಸಹ ಅದೇ ಬಸ್ ಗಳನ್ನು ರೋಡಿಗಿಳಿಸಿ ಪ್ರಯಾಣಿಕರ ಜೀವದ ಜೊತೆ ಆಟವಾಡುತ್ತಿರುವಂತೆ ಕಾಣುತ್ತಿದೆ. ಇದಕ್ಕೆ ಕೋಟೆನಾಡು ಚಿತ್ರದುರ್ಗ ಸಾರಿಗೆ ವಿಭಾಗದ ಬಸ್ ಗಳೇ ಸಾಕ್ಷಿ… ಚಳ್ಳಕೆರೆ ಪಟ್ಟಣದಿಂದ ಚಿತ್ರದುರ್ಗಕ್ಕೆ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಓಡಾಟ ನಡೆಸುವ ಸರ್ಕಾರಿ ಬಸ್ ವೊಂದರಲ್ಲಿ ಬಸ್ಸಿನ ಸೀಟುಗಳು ಅಲುಗಾಡುತ್ತಿರುವುದು, ಬಸ್ ಡೋರ್ ಲಾಕ್ ಮುರಿದಿದ್ದಕ್ಕೆ ಬಾಗಿಲಿಗೆ ಅಡ್ಡಲಾಗಿ ದೊಡ್ಡದಾದ ಕಲ್ಲುಗಳನ್ನು ಇಟ್ಟಿದ್ದಾರೆ. ಇಂತಹ ಹಳೆಯದಾದ ಬಸ್ ಗಳನ್ನ ರೋಡಿಗಿಳಿಸಿ ಜನರ ಜೀವನದ ಜೊತೆ ಸಾರಿಗೆ ಇಲಾಖೆ ಆಟವಾಡುತ್ತಿದೆ.ಕೂಡಲೇ ಇಂತಹ ಬಸ್ ಗಳ ಓಡಾಟ ನಿಲ್ಲಿಸಿ ಸುಸಜ್ಜಿತ ಬಸ್ ಗಳನ್ನ ಬಿಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







