ಚಿತ್ರದುರ್ಗ : ನವಭಾರತ ನಿರ್ಮಾಣದಲ್ಲಿ ಮಕ್ಕಳ ಪಾತ್ರಮಹತ್ವಪೂರ್ಣವಾಗಿದೆ. ಮಕ್ಕಳಲ್ಲಿ ದೇಶಾಭಿಮಾನದ ಬಗ್ಗೆ ಅರಿವನ್ನುಮೂಡಿಸಬೇಕು ಎಂದು ಬಾಪೂಜಿ ಶಿಕ್ಷಣ ಸಮೂಹ ಸಂಸ್ಥೆಗಳಕಾರ್ಯದರ್ಶಿ ಹಾಗೂ ಶ.ಸಾ.ಪ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್ಅಭಿಪ್ರಾಯಪಟ್ಟರು.ನಗರದ ಪಿಳ್ಳೇಕರೇನಹಳ್ಳಿಯ ಬಾಪೂಜಿ ಶಿಕ್ಷಣ ವಿದ್ಯಾಸಂಸ್ಥೆಆವರಣದಲ್ಲಿ 79ನೆಯ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣನೆರವೇರಿಸಿ ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ಸ್ವಾತಂತ್ರ್ಯಕ್ಕಾಗಿ ಮಡಿದ
ಮಹನೀಯರ ಜೀವನ ಕ್ರಮವನ್ನು ಮಕ್ಕಳಿಗೆ ಪರಿಚಯಿಸುವಅವಶ್ಯಕತೆಯಿದೆ ಎಂದರು.ನಿವೃತ್ತ ಡಿವೈಎಸ್ಪಿ ಸೈಯದ್ ಇಸಾಕ್ ಮುಖ್ಯ ಅತಿಥಿಯಾಗಿಉಪಸ್ಥಿತರಿದ್ದು ಮಾತನಾಡಿ ಮಕ್ಕಳಿಗೆ ಶಿಸ್ತು, ಶ್ರದ್ಧೆ ಮತ್ತುಏಕಾಗ್ರತೆ ಸಾಧಿಸುವ ಬೌದ್ಧಿಕಮಟ್ಟವನ್ನು ಶ್ರೀಮಂತಗೊಳಿಸುವಕೆಲಸ ನಡೆಸಬೇಕಾಗಿದೆ ಎಂದರು. ಸಂಸ್ಥೆಯ ನಿರ್ದೇಶಕಕೆ.ಎಂ.ಚೇತನ್ ಮಾತನಾಡಿ ರಾಷ್ಟçಪತಿ ಎಪಿಜೆ.ಅಬ್ದುಲ್ಕಲಾಂ ರವರಜೀವನಕ್ರಮವನ್ನು ಪರಿಚಯಿಸಿ ಅವರಂತೆ ಆದರ್ಶವನ್ನು
ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.ಸಂಸ್ಥೆಯ ನಿರ್ದೇಶಕಿ ಮೇಘನಾಚೇತನ್, ಬಾಪೂಜಿ ಶಿಕ್ಷಣಮಹಾವಿದ್ಯಾಲಯ ಪ್ರಾಚಾರ್ಯೆ ಎಂ.ಆರ್.ಜಯಲಕ್ಷಿö್ಮ, ಪದವಿ ಕಾಲೇಜಿನಪ್ರಾಚಾರ್ಯೆ ಮಂಜುಳ, ಪಿಯು ಕಾಲೇಜಿನ ಜ್ಞಾನದೇವ್, ಪ್ರಾಚಾರ್ಯವೀರೇಶ್, ಪ್ರೌಢಶಾಲೆಯ ಮುಖ್ಯಸ್ಥರಾದ ಮಾರುತೇಶ್,ನಫೀಜಾಬಾನು, ಬಾಪೂಜಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಬಿ.ಜಿ.ಪದ್ಮಾಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಬಾಪೂಜಿ ಸಂಸ್ಥೆಯಿAದ ಎನ್ಐಟಿಆಯ್ಕೆಯಾದ ವಿದ್ಯಾರ್ಥಿಗಳನ್ನು ಹಾಗೂ ಹೆಚ್ಚುಅಂಕ ಗಳಿಸಿದ ಪಿಯುಸಿವಾಣಿಜ್ಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಕೊನೆಯಲ್ಲಿ ಬಾಪೂಜಿ ಶಾಲಾಮಕ್ಕಳಿಂದ ದೇಶಾಭಿಮಾನ ಮೂಡಿಸುವಆಕರ್ಷಕ ನೃತ್ಯ ಪ್ರದರ್ಶನ ನೆರವೇರಿತು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







