ಸಾಮಾನ್ಯವಾಗಿ ಮಹಿಳೆಯರ ಆರೋಗ್ಯದ ವಿಷಯಕ್ಕೆ ಬಂದಾಗ ಸರಿಹೋಗಬಹುದು ಎಂದು ಹೇಳುವ ಸಂದರ್ಭಗಳೇ ಹೆಚ್ಚು. ಆದರೆ ಮಹಿಳೆಯರ ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳು ಹೆಚ್ಚು ಅಪಾಯವನ್ನು ಉಂಟು ಮಾಡಬಹುದು. ಅಂತಹ ಸಮಸ್ಯೆಗಳಲ್ಲಿ ಕರುಳಿಗೆ ಸಂಬಂಧಿಸಿದ ಕಾಯಿಲೆ ಕೂಡ ಒಂದು.
ಆರಂಭದಲ್ಲಿ ಕಿಬ್ಬೊಟ್ಟೆಯ ನೋವು ಕಾಣಿಸಿಕೊಳ್ಳುವ ಈ ಕರುಳಿನ ಸಮಸ್ಯೆ ಚಿಕಿತ್ಸೆ ಪಡೆಯದಿದ್ದರೆ ಇನ್ನಷ್ಟು ಅಪಾಯವನ್ನು ಉಂಟು ಮಾಡುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಆಗದೇ ಇದ್ದಾಗ ಕರುಳಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಅದಕ್ಕೆ ಕಾರಣವೇನು, ಪರಿಹಾರದ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ಕರುಳಿನ ಸಮಸ್ಯೆ
ಕರುಳಿಗೆ ಸಂಬಂಧಿಸಿದ ಅನಾರೋಗ್ಯ ಕಾಡಿದಾಗ ದೇಹವು ಪೋಷಕಾಂಶಗಳನ್ನು ಹೀರಿಕೊಳ್ಳಲು, ಕೊಬ್ಬನ್ನು ಸಂಗ್ರಹಿಸಲು ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲುಸಾಧ್ಯವಾಗದಸ್ಥಿತಿಗೆತಲುಪುತ್ತದೆ.ಬ್ಯಾಕ್ಟೀರಿಯಾದ ಬೆಳವಣಿಗೆ ಅಥವಾ ಪೋಷಕಾಂಶಗಳ ಕೊರತೆಯಿಂದ ತೂಕ ನಷ್ಟ ಅಥವಾ ದೇಹದ ತೂಕ ಹೆಚ್ಚಾಗಬಹುದು.ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಾದ ಮೊಡವೆ, ಎಸ್ಜಿಮಾ ಮತ್ತು ಸೋರಿಯಾಸಿಸ್‌ನಂತಹ ಕೆಲವು ಚರ್ಮದ ಸಮಸ್ಯೆಗಳು ಉಲ್ಬಣವಾಗಬಹುದು.
ಮಹಿಳೆಯರಲ್ಲಿ ಕರುಳಿನ ಸಮಸ್ಯೆ ಬರಲು ಕಾರಣ
ಮಹಿಳೆಯರ ಜೀರ್ಣಾಂಗವ್ಯೂಹದ ಸ್ನಾಯುಗಳು ಪುರುಷರಿಗಿಂತ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತವೆ. ಅಲ್ಲದೆ ಆಹಾರ ಜೀರ್ಣವಾಗಲು ಕೆಲವೊಮ್ಮೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದು ಹೊಟ್ಟೆಉಬ್ಬರಕ್ಕೆ ಕಾರಣವಾಗುತ್ತದೆ.ಜೊತೆಗೆ. ಆಗಾಗ ಹೊಟ್ಟೆಯಲ್ಲಿ ಉರಿಯೂತ ಕಾಣಸಿಕೊಳ್ಳುವಂತೆ ಮಾಡುತ್ತದೆ. ಅದರೊಂದಿಗೆ ಮುಖ್ಯವಾಗಿ ಹಾರ್ಮೋನುಗಳು ವ್ಯತ್ಯಾಸದಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಅನಾರೋಗ್ಯ ಕಾಣಿಸಿಕೊಳ್ಳಬಹುದು.ಇನ್ನು ಗರ್ಭಾವಸ್ಥೆಯು ಜೀರ್ಣಕಾರಿ ಸಮಸ್ಯೆಗಳನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ. ಇದರಿಂದ ಮಹಿಳೆಯರಲ್ಲಿ ವಾಕರಿಕೆ, ಮಲಬದ್ಧತೆ ಮತ್ತು ಎದೆಯುರಿ ಹೆಚ್ಚಾಗಬಹುದು.
ಕರುಳಿನ ಸಮಸ್ಯೆ ಪತ್ತೆ ಮಾಡುವುದು ಕಷ್ಡ
ಸಾಮಾನ್ಯವಾಗಿ ಸಣ್ಣ ಪ್ರಮಾಣದ ಹೊಟ್ಟೆ ನೋವು ಅಥವಾ ಇತರ ಅನಾರೋಗ್ಯದ ಲಕ್ಷಣಗಳನ್ನು ಮಹಿಳೆಯರು ಕಡೆಗಣಿಸುತ್ತಾರೆ. ವೈದ್ಯರ ಬಳಿಯಾಗಲೀ, ಕುಟುಂಬದವರ ಹತ್ತಿರವಾಗಲೀ ಹಂಚಿಕೊಳ್ಳುವುದಿಲ್ಲ. ಇದರಿಂದ ಸಣ್ಣ ಸಮಸ್ಯೆ ನಿರ್ಲಕ್ಷ್ಯದಿಂದ ಗಂಭೀರತೆಗೆ ತಿರುಗುತ್ತದೆ.
ಕರುಳಿನ ಅಸ್ವಸ್ಥತೆಗಳನ್ನು ಸರಿಯಾಗಿ ಪತ್ತೆಹಚ್ಚಲು ವೈದ್ಯರು ಕೆಲವೊಮ್ಮೆ ವಿಫಲರಾಗಬಹುದು. ಆಟೋಇಮ್ಯೂನ್ ಕಾಯಿಲೆಗಳನ್ನು ಹೊಂದಿರುವ 75 ಪ್ರತಿಶತದಷ್ಟು ಜನರಲ್ಲಿ ರೋಗವನ್ನು ಪತ್ತೆ ಮಾಡಲು ಸರಾಸರಿ ಐದು ವರ್ಷಗಳು ಬೇಕಾಗುತ್ತದೆ.
ಕೆಲವು ಕರುಳಿನ ಸಮಸ್ಯೆಗಳನ್ನು ಭೌತಿಕವಾಗಿ ಪತ್ತೆಹಚ್ಚಲು ಸಾಧ್ಯವಿಲ್ಲದ ಕಾರಣ ರೋಗಲಕ್ಷಣಗಳ ಆಧಾರದ ಮೇಲೆ ಅವುಗಳನ್ನು ರೋಗನಿರ್ಣಯ ಮಾಡಲಾಗುತ್ತದೆ. ಇದು ಸರಿಯಾದ ರೋಗವನ್ನು ಗುರುತಿಸುವುದು ಕಷ್ಟ. ಹೀಗಾಗಿ ವೈದ್ಯರಿಗೂ ಕಷ್ಟವಾಗುತ್ತದೆ.
ಕರುಳಿನ ಆರೋಗ್ಯ ಏಕೆ ಮುಖ್ಯ?
ಪ್ರತಿರಕ್ಷಣಾ ವ್ಯವಸ್ಥೆಯು 70 ಪ್ರತಿಶತದಷ್ಟು ಕರುಳಿನಲ್ಲಿ ಕಂಡುಬರುತ್ತದೆ. ಮಹಿಳೆಯರಿಗೆ ವಿಶೇಷವಾಗಿ, ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ ಏಕೆಂದರೆ ಜೀರ್ಣಕ್ರಿಯೆ ಮತ್ತು ಒಟ್ಟಾರೆ ಆರೋಗ್ಯವನ್ನು ಉತ್ತಮವಾಗಿಡುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ.
ಕರುಳಿನ ಆರೋಗ್ಯ ಕಾಪಾಡಿಕೊಳ್ಳಲು ಹೀಗೆ ಮಾಡಿ
ಕರುಳಿನ ಸಮಸ್ಯೆಗಳನ್ನು ಸರಿಪಡಿಸಲು ಮೊದಲು ಮೂಲ ಕಾರಣವನ್ನು ಕಂಡುಹಿಡಿಯಬೇಕು.ಮುಖ್ಯವಾಗಿ ಆಹಾರವನ್ನು ನಿಧಾನವಾಗಿ ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ. ಜೊತೆಗೆ ಹೆಚ್ಚು ಮಸಾಲೆ ಪದಾರ್ಥಗಳು ಮತ್ತು ಸಂಸ್ಕರಿಸಿದ ಆಹಾರವನ್ನು ಸೇವನೆ ಮಾಡಬೇಡಿ.ಅದರ ಬದಲು ಪ್ರೋಬಯಾಟಿಕ್‌ಗಳು, ತರಕಾರಿ, ಹಣ್ಣು, ದ್ರವ ಪದಾರ್ಥಗಳನ್ನು ಸೇವಿಸುವುದು ಹೆಚ್ಚು ಉತ್ತಮವಾಗಿದೆ.ನೆನಪಿಡಿ ಕರುಳಿಗೆ ಸಂಬಂಧಿಸಿದ ಸಣ್ಣ ಅಲಕ್ಷ್ಯವೂ ಇಡೀ ಶರೀರದ ಆರೋಗ್ಯ ವ್ಯವಸ್ಥೆಯನ್ನು ಹದಗೆಡಿಸಬಹುದು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



