ಚಿತ್ರದುರ್ಗ: ಇಸ್ರೇಲ್ ಹಾಗೂ ಇರಾನ್ ನಡುವೆ ಯುದ್ಧ ನಡೆಯುತ್ತಿದ್ದು, ಎರಡು ದೇಶಗಳಲ್ಲಿ ಸಿಲುಕಿರುವ ವಿವಿಧ ದೇಶಗಳ ಪ್ರಜೆಗಳು ಅಲ್ಲಿಂದ ಹೊರಗೆ ಬರಲು ಹರಸಾಹಸ ಪಡುತ್ತಿದ್ದಾರೆ.
ಅದೇ ರೀತಿ ಭಾರತದ ಪ್ರಜೆಗಳು ಕೂಡಾ ಅಲ್ಲಿ ಸಿಲುಕಿಕೊಂಡಿದ್ದು, ಕೇಂದ್ರ ಸರ್ಕಾರ ನಿರಂತರವಾಗಿ ಅವರನ್ನು ಅಲ್ಲಿಂದ ಸುರಕ್ಷಿತವಾಗಿ ವಾಪಾಸು ಕರೆತರುವಲ್ಲಿ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.
ಚಿತ್ರದುರ್ಗದ ಯುವಕ ಜಬಿವುಲ್ಲಾ ಎಂಎಸ್ಸಿ ಪರಿಸರ ಸೂಕ್ಷ್ಮ ಅಧ್ಯಯನಕ್ಕಾಗಿ ಇಸ್ರೇಲ್‌ಗೆ ತೆರಳಿದ್ದು, ಸದ್ಯ ಅಲ್ಲಿನ ಯುದ್ಧದ ಅಪಾಯದಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ.
ಚಿತ್ರದುರ್ಗದ ಜಬೀವುಲ್ಲಾ ಎಂ.ಎ ಇಸ್ರೇಲ್‌ನಲ್ಲಿ ಸಿಲುಕಿದ್ದರು. ಈ ವಿಚಾರವನ್ನು ಆತನ ಕುಟುಂಬದವರು ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಗಮನಕ್ಕೆ ತಂದಿದ್ದು, ಶಾಸಕರು ದೆಹಲಿಯಲ್ಲಿನ ಅಧಿಕಾರಿಗಳನ್ನು ಸಂಪರ್ಕಿಸಿ ಜಬೀವುಲ್ಲಾ ಸುರಕ್ಷಿತವಾಗಿ ಮರಳಲು ನೆರವಾಗಿದ್ದಾರೆ. ಇಸ್ರೇಲ್‌ನಲ್ಲಿ ಎಂಎಸ್ಸಿ ಅಧ್ಯಯನಕ್ಕೆ ತೆರಳಿದ್ದ ಜಬಿವುಲ್ಲಾ ಅವರ ಜೊತೆಗೆ ಶಾಸಕ ಕೆ.ಸಿ.ವೀರೇಂದ್ರ ಪೋನ್ ಮೂಲಕ ಮಾತನಾಡಿದ್ದು, ಕೇಂದ್ರ ಸರ್ಕಾರ ಅಲ್ಲಿದ್ದ ಭಾರತೀಯ ಪ್ರಜೆಗಳನ್ನು ಕರೆತಂದಿರುವ ವಿಚಾರ ತಿಳಿದಿದೆ. ಆದರೆ, ದೆಹಲಿಯ ಕರ್ನಾಟಕ ಭವನದಲ್ಲಿದ್ದ ಜಬೀವುಲ್ಲಾ ಅವರ ಬಳಿ ಕರ್ನಾಟಕಕ್ಕೆ ಮರಳಲು ಹಣದ ಸಮಸ್ಯೆ ಎದುರಾಗಿದ್ದು, ಶಾಸಕರು, ವಿಮಾನದ ಟಿಕೇಟ್ ಬುಕ್ ಮಾಡಿಸಿ, ಅಲ್ಲಿಂದ ಚಿತ್ರದುರ್ಗಕ್ಕೆ ಕರೆತರಲು ನೆರವಾಗಿದ್ದಾರೆ ಎಂದು ಜಬೀವುಲ್ಲಾ ಸ್ಮರಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



