ನವದೆಹಲಿ: ಕೆಲಸವಿಲ್ಲದೆ ಅನುಭವ ಇಲ್ಲ, ಅನುಭವ ಇಲ್ಲದೆ ಕೆಲಸ ಇಲ್ಲ ಎನ್ನುವಂತೆ ಮೊದಲ ಬಾರಿ ಸಾಲಕ್ಕೆ ಅರ್ಜಿ ಸಲ್ಲಿಸುವವರದ್ದು ವ್ಯಥೆ. ಯಾವತ್ತೂ ಸಾಲ ಮಾಡದವರು ಮತ್ತು ಕ್ರೆಡಿಟ್ ಕಾರ್ಡ್ ಬಳಕೆ ಮಾಡದವರಿಗೆ ಸಿಬಿಲ್ ಅಥವಾ ಕ್ರೆಡಿಟ್ ಸ್ಕೋರ್ಇರುವುದೇ ಇಲ್ಲ. ಇಂಥವರು ಸಾಲಕ್ಕೆ ಅರ್ಜಿ ಹಾಕಿದಾಗ ಬ್ಯಾಂಕುಗಳು ಇವರಿಗೆ ಉತ್ತಮ ಸಿಬಿಲ್ ಸ್ಕೋರ್ ಇಲ್ಲವೆಂದು ಸಾಲ ನೀಡಲು ನಿರಾಕರಿಸುವ ಸಾಧ್ಯತೆ ಇದೆ. ಹಣಕಾಸು ಸಚಿವಾಲಯವು ಈ ವಿಚಾರದಲ್ಲಿ ಸ್ಪಷ್ಟನೆ ನೀಡಿದ್ದು, ಮೊದಲ ಬಾರಿ ಸಾಲ ಪಡೆಯುತ್ತಿರುವವರಿಗೆ ಅವರ ಸಿಬಿಲ್ ಸ್ಕೋರ್ ಪರಿಶೀಲಿಸುವುದು ಕಡ್ಡಾಯವೇನಿಲ್ಲ ಎಂದು ಹೇಳಿದೆ.ಕೇಂದ್ರ ಸಚಿವ ಪಂಕಜ್ ಚೌಧರಿ ಅವರು ಲೋಕಸಭೆಯಲ್ಲಿ ಮಾತನಾಡುತ್ತಾ ಈ ವಿಷಯ ತಿಳಿಸಿದ್ದಾರೆ. ಸಾಲ ಮಂಜೂರಾತಿ ಮಾಡಲು ಆರ್ಬಿಐ ನಿರ್ದಿಷ್ಟ ಕ್ರೆಡಿಟ್ ಸ್ಕೋರ್ ಇರಬೇಕೆಂದು ನಿಯಮ ಮಾಡಿಲ್ಲ ಎಂದಿದ್ದಾರೆ.ಮೊದಲ ಬಾರಿ ಸಾಲಕ್ಕೆ ಅರ್ಜಿ ಸಲ್ಲಿಸುತ್ತಿರುವ ವ್ಯಕ್ತಿಗೆ ಯಾವುದೇ ಕ್ರೆಡಿಟ್ ಹಿಸ್ಟರಿ ಇಲ್ಲವೆಂಬ ಕಾರಣಕ್ಕೆ ಸಾಲ ತಿರಸ್ಕಾರ ಮಾಡಬಾರದು ಎಂದು 2025ರ ಜನವರಿ 6ರಂದು ಆರ್ಬಿಐ ಸಲಹೆ ನೀಡಿರುವ ವಿಚಾರವನ್ನು ಸಚಿವ ಚೌಧರಿ ಉಲ್ಲೇಖಿಸಿದ್ದಾರೆ.‘ಸಾಲ ಮಂಜೂರು ಮಾಡುವಾಗ ಕ್ರೆಡಿಟ್ ಸ್ಕೋರ್ ಕನಿಷ್ಠ ಇಷ್ಟು ಇರಬೇಕು ಎನ್ನುವ ಮಾನದಂಡವನ್ನು ಆರ್ಬಿಐ ನಿಗದಿ ಮಾಡಿಲ್ಲ. ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳು ವಾಣಿಜ್ಯಾತ್ಮಕವಾಗಿ ಅವಲೋಕಿಸುವುದೋ, ಮಂಡಳಿ ಅನುಮೋದನೆ ಪಡೆದೋ ಅಥವಾ ರೆಗ್ಯುಲೇಟರಿ ಮಾರ್ಗಸೂಚಿ ಪ್ರಕಾರವೋ ನಿರ್ಧಾರ ತೆಗೆದುಕೊಳ್ಳಬೇಕು. ಸಾಲ ಪಡೆಯುವವರ ಕ್ರೆಡಿಟ್ ರಿಪೋರ್ಟ್ ಹಲವು ಅಂಶಗಳಲ್ಲಿ ಒಂದಷ್ಟೇ’ ಎಂದು ಪಂಕಜ್ ಚೌಧರಿ ಹೇಳಿದ್ದಾರೆ.
ಕ್ರೆಡಿಟ್ ಸ್ಕೋರ್ ಎಂಬುದು ಸಿಬಿಲ್ ಇತ್ಯಾದಿ ನಾಲ್ಕೈದು ಏಜೆನ್ಸಿಗಳು ಗ್ರಾಹಕರಿಗೆ ನೀಡುವ 300ರಿಂದ 900ವರೆಗಿನ ಅಂಕವಾಗಿದೆ. ಸಾಲ ಪಡೆದು ಸರಿಯಾಗಿ ತೀರಿಸಿದರೆ ಉತ್ತಮ ಕ್ರೆಡಿಟ್ ಸ್ಕೋರ್ ಇರುತ್ತದೆ. ಸಾಲದ ಇಎಂಐ ಸರಿಯಾಗಿ ಕಟ್ಟದೇ ಇದ್ದರೆ ಮತ್ತು ಕ್ರೆಡಿಟ್ ಕಾರ್ಡ್ ಬಿಲ್ಗಳನ್ನು ಸರಿಯಾಗಿ ಕಟ್ಟದೇ ಇದ್ದರೆ ಸ್ಕೋರ್ ಕಡಿಮೆ ಆಗುತ್ತದೆ. 300 ಅಂಕ ಎಂದರೆ ಕನಿಷ್ಠ ಸ್ಕೋರ್ ಮಟ್ಟ. 900 ಗರಿಷ್ಠ ಅಂಕ.ಭಾರತದಲ್ಲಿ ನಾಲ್ಕು ಏಜೆನ್ಸಿಗಳು ಕ್ರೆಡಿಟ್ ಸ್ಕೋರ್ ನೀಡುತ್ತವೆ. ಸಿಬಿಲ್, ಈಕ್ವಿಫ್ಯಾಕ್ಸ್, ಸಿಆರ್ಐಎಫ್ ಮತ್ತು ಎಕ್ಪೀರಿಯನ್. ಬ್ಯಾಂಕುಗಳು ಈ ಏಜೆನ್ಸಿಗಳ ನೆರವಿನಿಂದ ಗ್ರಾಹಕರ ಕ್ರೆಡಿಟ್ ಸ್ಕೋರ್ ಮತ್ತು ಕ್ರೆಡಿಟ್ ರಿಪೋರ್ಟ್ ಪಡೆಯುತ್ತವೆ.ಕ್ರೆಡಿಟ್ ರಿಪೋರ್ಟ್ನಲ್ಲಿ ಗ್ರಾಹಕರ ಪೂರ್ಣ ಸಾಲದ ಇತಿಹಾಸವೇ ದಾಖಲಾಗಿರುತ್ತದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







