ಚಿತ್ರದುರ್ಗ: ಭಾರತ ದೇಶ ಇಂದು ಆಹಾರದಲ್ಲಿ ಸ್ವಾವಲಂಭನೆಯನ್ನು ಸಾಧಿಸಿ, ಬೇರೆ ದೇಶಗಳಿಗೆ ರಫ್ತು ಮಾಡುತ್ತಿದೆ ಎಂದರೆ ಅದಕ್ಕೆ ಬಾಬುಜಗಜೀವನರಾಂರವರ ದೂರದೃಷ್ಟಿ ಕಾರಣವಾಗಿದೆ ಎಂದು ಚಿತ್ರದುರ್ಗ ನಗರಾಭೀವೃದ್ದಿ ಪ್ರಾಧಿಕಾರ ಹಾಗೂ ಚಿತ್ರದುರ್ಗ ಜಿಲ್ಲಾಪ್ರದೇಶ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷರಾದ ಎಂ.ಕೆ.ತಾಜ್ ಪೀರ್ ತಿಳಿಸಿದರು.
ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬಾಬು ಜಗಜೀವನರಾಂ 39ನೇ ಪುಣ್ಯ ಸ್ಮರಣೆಯ ಕಾರ್ಯಕ್ರಮದಲ್ಲಿ ಅವರ ಭಾವ ಚಿತ್ರಕ್ಕೆ ಪುಷ್ಪ ನಮನಸಲ್ಲಿ ಮಾತನಾಡಿದ ಅವರು, ಭಾರತ ದೇಶ ಬಿಟ್ರಿಷರಿಂದ ಸ್ವಾತಂತ್ರ್ಯವನ್ನುಪಡೆದಾಗ 40 ಕೋಟಿ ಜನರಿದ್ದರು ಅವರ ಹಸಿವನ್ನು ನೀಗಿಸಲುವುದು ಸರ್ಕಾರದ ಕೆಲಸವಾಗಿತ್ತು ಈ ಸಮಯದಲ್ಲಿ ಅಮೇರಿಕಾದಿಂದ ಕೆಂಪು ಜೋಳವನ್ನು ತರಿಸಿ ಜನರಿಗೆ ನೀಡಲಾಗಿತ್ತು ಇದನ್ನು ಕಮಡ ಅಂದಿನ ಕೃಷಿ ಸಚಿವರಾದ ಬಾಬು ಜಗಜೀವನರಾಂ ರವರುನಮ್ಮ ದೇಶದಲ್ಲಿಯೇ ಆಹಾರವನ್ನು ಉತ್ಪಾದನೆಯನ್ನು ಮಾಡುವ ಬಗ್ಗೆ ಆಲೋಚನೆಯನ್ನು ನಡೆಸಿ ಕೃಷಿಯಲ್ಲಿಹಸಿರುಕ್ರಾಂತಿಯನ್ನು ನಡೆಸಿ ನಮ್ಮ ದೇಶದಲ್ಲಿಯೇ ಆಹಾರವನ್ನು ಉತ್ಪಾದನೆಯನ್ನು ಮಾಡುವಂತೆ ಮಾಡಿ ರೈತರಿಗೆಪ್ರೋತ್ಸಾಹವನ್ನು ನೀಡಿದ್ದರ ಫಲವಾಗಿ ಜನತೆ ದಿನ ನಿತ್ಯ ಆಹಾರವನ್ನು ಸೇವನೆ ಮಾಡುತ್ತೆ ಆಗಿದೆ ಎಂದರು.
ಬಾಬು ಜಗಜೀವನರಾಂರವರು ತಮ್ಮ ಅಧಿಕಾರದ ಅವಧಿಯಲ್ಲಿ ಮಾಡಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಇಂದಿನ ಯುವಪೀಳಿಗೆಗೆ ತಿಳಿಸುವಂತ ಕಾರ್ಯವನ್ನು ಮಾಡಬೇಕಿದೆ, ದೇಶ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರ ಸಮಯದಲ್ಲಿ ಇವರುಮಾಡಿದ ಕಾರ್ಯ ಅನ್ಯನವಾಗಿದೆ ದೇಶವನ್ನು ಬ್ರಟಿಷರಿಂದ ಮುಕ್ತಗೊಳಿಸಲು ಹಾಗೂ ನಂತರ ದೇಶದ ಆಹಾರ ಸಮಸ್ಯೆಯಿಂದದೂರವಾಗಲು ನೆರವಾಗಿದ್ದಾರೆ. ದೇಶದ ಉಪ ಪ್ರಧಾನ ಮಂತ್ರಿಗಳಾಗಿದ್ದ ಇವರು ಪ್ರಧಾನ ಮಂತ್ರಿಯಾಗುವ ಎಲ್ಲಾ ರೀತಿಯಅರ್ಹತೆಯನ್ನು ಹೊಂದಿದ್ದರು ಸಹಾ ರಾಜಕೀಯ ಹಾಗೂ ಕುಟುಂಬದ ಕಾರಣದಿಂದ ಪ್ರಧಾನಿ ಸ್ಥಾನದಿಂದ ವಂಚಿತರಾದದರು.ದೇಶದಲ್ಲಿ ಅಂದು ಇದ್ದ ಆಹಾರ ಸಮಸ್ಯೆಯನ್ನು ನಿವಾರಣೆ ಮಾಡಲು ನೀರಾವರಿ ಯೋಜನೆಯಗಳನ್ನು ಜಾರಿ ಮಾಡಿ ಆಹಾರದಲ್ಲಿಹಸಿರು ಕ್ರಾಂತಿಯನ್ನು ಮಾಡಿದರು. ಇಂದು ನಮ್ಮ ದೇಶದ 140 ಕೋಟಿ ಜನರಿಗೆ ಅನ್ನವನ್ನು ನೀಡುತ್ತಾ ಬೇರೆ ದೇಶಗಳಿಗೆ ರಫ್ತುಮಾಡಲಾಗುತ್ತಿದೆ ಎಂದರೆ ಅದಕ್ಕೆ ಬಾಬು ಜಗ ಜೀವನರಾಂರವರು ಕಾರಣರಾಗಿದ್ದಾರೆ ಎಂದು ತಾಜ್‍ಪೀರ್ ತಿಳಿಸಿದರು.
ಕಾಂಗ್ರೆಸ್‍ನ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷರಾದ ಜಯ್ಯಣ್ಣ ಮಾತನಾಡಿ, ಬಾಬು ಜಗಜೀವನರಾಂ ರವರು ತಮ್ಮ
ಜೀವಿತಾವಧಿಯಲ್ಲಿ ಕಷ್ಠಗಳನ್ನು ಅನುಭವಿಸಿ ಬೇರೆಯವರು ಕಷ್ಠಗಳನ್ನು ಅನುಭವಿಸಬಾರದೆಂದು ಯೋಜನೆಗಳನ್ನು ರೂಪಿಸಿ ಜಾರಿಮಾಡಿದರು. ಅವರು ವಹಿಸಿಕೊಂಡು ಎಲ್ಲಾ ಸಚಿವ ಸ್ಥಾನಗಳಿಗೂ ಸಹಾ ನ್ಯಾಯವನ್ನು ನೀಡುವುದರ ಮೂಲಕ ಜನರಿಗೆಯೋಜನೆಯನ್ನು ಜಾರಿ ಮಾಡಿದರು. ಬಾಬು ರವರ ನಮ್ಮ ಕಾಂಗ್ರೆಸ್ ನವರು ಎನ್ನುವುದು ಹೆಮ್ಮೆಯಾಗಿದೆ. ಅವರು ಚುನಾವಣೆಯಸಮಯದಲ್ಲಿ ಚಿತ್ರದುರ್ಗಕ್ಕೆ ಸಹಾ ಬೇಟಿಯನ್ನು ನೀಡಿದ್ದರು. ಸಮಾಜಕ್ಕೆ ಉತ್ತಮವಾದ ಕಾರ್ಯವನ್ನು ಮಾಡಿದವರನ್ನುನೆನಪಿಸಿಕೊಳ್ಳುವುದರ ನಮ್ಮ ಕರ್ತವ್ಯವಾಗಿದೆ. ಎಂದ ಅವರು ನಮ್ಮ ಕಾಂಗ್ರೆಸ್ ವಿವಿಧ ಘಟಕಗಳಲ್ಲಿ ಪದಾಧಿಕಾರಿಗಳನ್ನು ನೇಮಕಮಾಡಲಾಗಿದೆ ಆದರೆ ಅವರು ಇಂತಹ ಕಾರ್ಯಕ್ರಮಗಳಿಗೆ ಬಾರದೆ ಮನೆಯಲ್ಲಿ ಇರುತ್ತಾರೆ ಇಂತಹರನ್ನು ಬದಲಾವಣೆ ಮಾಡಲುಅವಕಾಶವನ್ನು ನೀಡುವಂತೆ ಅಧ್ಯಕ್ಷರಲ್ಲಿ ಮನವಿ ಮಾಡಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



