ಚಳ್ಳಕೆರೆ: ಜಾಮಿಯಾ ಮಸೀದಿ ಆಡಳಿತ ಮಂಡಳಿ ಚುನಾವಣೆಯಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಸ್ಪರ್ಧೆಯಲ್ಲಿ ಆಟೋ ಪ್ಯಾನೆಲ್ ಭರ್ಜರಿ ಜಯ ಗಳಿಸಿದೆ. ಮಾಜಿ ಅಧ್ಯಕ್ಷ ಅತಿಕ್ ಉರ್ ರೆಹಮಾನ್ ನೇತೃತ್ವದ ಟ್ರಕ್ ಲಾರಿ ಗುಂಪನ್ನು ಸೋಲಿಸುವ ಮೂಲಕ ಆಟೋ ಪ್ಯಾನೆಲ್ ಅಧಿಕಾರ ಗದ್ದುಗೆ ಏರಿದೆ.ಚುನಾವಣೆಯಲ್ಲಿ ಎರಡು ಪ್ರಮುಖ ಪ್ಯಾನೆಲ್ಗಳು ಸ್ಪರ್ಧಿಸಿದ್ದವು ಆಟೋ ಪ್ಯಾನೆಲ್ ಮತ್ತು ಟ್ರಕ್ ಲಾರಿ ಪ್ಯಾನೆಲ್. ಒಟ್ಟು ಸುಮಾರು 25ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅಂತಿಮವಾಗಿ, ಅತಿಕ್ ಉರ್ ರೆಹಮಾನ್ ಅವರ ನೇತೃತ್ವದ ಟ್ರಕ್ ಗುಂಪು ಹೀನಾಯ ಸೋಲು ಅನುಭವಿಸಿದೆ. ಸ್ವತಃ ಅತಿಕ್ ಉರ್ ರೆಹಮಾನ್ ಅವರೇ ಠೇವಣಿ ಕಳೆದುಕೊಂಡು ಗಮನಾರ್ಹ. ಪರಾಭವಗೊಂಡಿರುವುದುಈ ಪ್ರಚಂಡ ಗೆಲುವಿನೊಂದಿಗೆ ಆಟೋ ಪ್ಯಾನೆಲ್ ಜಾಮಿಯಾ ಮಸೀದಿಯ ಆಡಳಿತವನ್ನು ವಹಿಸಿಕೊಂಡಿದೆ. ಈ ಫಲಿತಾಂಶ ಚಳ್ಳಕೆರೆ ಸಮುದಾಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



