ಚಿತ್ರದುರ್ಗ ಜು. 5 ಗುರುಸಿದ್ದಪ್ಪರವರು ತಮ್ಮ ಜೀವನ ಹಾಗೂ ರಾಜಕೀಯದಲ್ಲೂ ಯಾವುದೇ ರೀತಿಯ ಕಪ್ಪು ಚುಕ್ಕೆ ಇಲ್ಲದೆ ಹಣ, ಅಧಿಕಾರಕ್ಕೆಅಸೆಪಡೆದ ತಮ್ಮ ಪಾಲಿನ ಕೆಲಸವನ್ನು ಮಾಡಿಕೊಂಡು ಮಾರ್ಗದರ್ಶಿಗಳಾಗಿದ್ದರು ಎಂದು ಕರ್ನಾಟಕ ಪ್ರದೇಶ ಜನತಾದಳದಪ್ರಧಾನ ಕಾರ್ಯದರ್ಶಿ ಮತ್ತು ಚಿತ್ರದುರ್ಗ ನಗರಸಭೆ ಮಾಜಿ ಅಧ್ಯಕ್ಷರಾದ ಬಿ. ಕಾಂತರಾಜ್ ತಿಳಿಸಿದರು.
ಚಿತ್ರದುರ್ಗ ನಗರದ ಜಿಲ್ಲಾ ಜೆ.ಡಿ.ಎಸ್ ಘಟಕದ ಜೆ.ಪಿ.ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಕ್ಷದ ಹಿರಿಯ ಉಪಾಧ್ಯಕ್ಷರಾಗಿದ್ದಜೆ.ಎನ್.ಕೋಟೆ ಗುರುಸಿದ್ದಪ್ಪನವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಗುರುಸಿದ್ದಪ್ಪರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿಮಾತನಾಡಿದ ಅವರು. ಗುರುಸಿದ್ದಪ್ಪರವರು ಯಾವಾಗಲೂ ಬೇರೆಯವರಿಗೆ ಒಳ್ಳೇಯದ್ದನೆ ಬಯಸುತ್ತಿದ್ದರು, ಅಲ್ಲದೆ ತಾವು ಸಹಾಬೇರೆಯವರಿಗೆ ಕೆಟ್ಟದನ್ನು ಮಾಡಿಲ್ಲ, ತಮ್ಮ ಬದುಕಿನಲ್ಲಿ ಹೆಚ್ಚಿನ ಸಮಯವನ್ನು ರಾಜಕೀಯಕ್ಕೆ ನೀಡಿ ಕುಟುಂಬಕ್ಕೆ ಕಡಿಮೆಸಮಯವನ್ನು ನೀಡಿದ್ದರು, 50 ವರ್ಷದಿಂದ ರಾಜಕಾರಣ ಮಾಡಿದ್ದಾರೆ ಯಾವುದೇ ರೀತಿಯ ಆಸ್ತಿ, ಹಣ, ಮಾಡಿಲ್ಲ ಯಾವುದೇಶಿಫಾರಸ್ಸ್‍ನ್ನು ಶಾಸಕರು, ಮಂತ್ರಿಗಳತ್ತ ತೆಗೆದುಕೊಂಡು ಹೋಗಿಲ್ಲ ಬೇರೆಯವರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡಿದ್ದಾರೆಎಂದರು.
ಇತ್ತಿಚಿನ ದಿನಮಾನದಲ್ಲಿ ರಾಜಕೀಯ ಎಂದತರೆ ಹಣ ಮಾಡುವ ಸಂಸ್ಥೆ ಎಂದು ಹಲವಾರು ಜನತೆ ತಿಳಿದಿದ್ದಾರೆ ಆದರೆ ಇದಕ್ಕೆಅಪವಾದ ಎನ್ನುವಂತೆ ಗುರುಸಿದ್ದಪ್ಪರವರು ತಾವು ಇರುವಷ್ಟು ದಿವಸವೂ ಸಹಾ ಹಣ ಮಾಡದೇ ಮತ್ತು ಅಧಿಕಾರವನ್ನು ಬಳಸದೇಸಿದಾ-ಸದಾವಾಗಿದ್ದರು. ಇಂದಿನ ದಿನಮಾನದಲ್ಲಿ ಇಂತಹ ಜನತೆ ಸಿಗುವುದು ಕಷ್ಟವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದಬೆಳವಣಿಗೆಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿದ್ದರು, ಪಕ್ಷದಿಂದ ಎಲ್ಲೆ ಕಾರ್ಯಕ್ರಮವಾದರೂ ಸಹಾ ಅಲ್ಲಿ ಬಾಗಿಯಾಗುವುದರಮೂಲಕ ಪಕ್ಷದ ಸಂಘಟನೆಯಲ್ಲಿ ಪಾಲ್ಗೊಂಡಿದ್ದರು. ಪಕ್ಷಕ್ಕೆ ನಿಷ್ಠೆಯಿಂದ ಇರುವುದರ ಮೂಲಕ ಮಿತ ಭಾಷಿಗಳಾಗಿ ಉತ್ತಮವಾದಉಡುಪನ್ನು ಧರಿಸುವುದರ ಮೂಲಕ ಬೇರೆಯವರನ್ನು ತಮ್ಮತ್ತ ಸೆಳೆಯುತ್ತಿದ್ದರು ಎಂದು ಕಾಂತರಾಜು ತಿಳಿಸಿದರು.
ಜೆ.ಡಿ.ಎಸ್ ಘಟಕದ ಮಾಜಿ ಜಿಲ್ಲಾ ಅಧ್ಯಕ್ಷರಾದ ಡಿ.ಯಶೋಧರ ಮಾತನಾಡಿ, ಗುರುಸಿದ್ದಪ್ಪರವರು ಹಣ ಮತ್ತು ಅಧಿಕಾರಕ್ಕೆ
ಅಸೆಯನ್ನು ಪಡುವಂತಿದ್ದರೆ ನಮ್ಮ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದಾಗ ಬೇರೆ ಪಕ್ಷಕ್ಕೆ ಹೋಗಬಹುದಾಗಿತ್ತು ಅಲ್ಲದೆ ಅ ಸಮಯದಲ್ಲಿಅವರಿಗೆ ಆಫರ್‍ಗಳು ಸಹಾ ಬಂದಿದ್ದವು ಅವುಗಳನ್ನು ತಿರಸ್ಕಾರ ಮಾಡಿ ಜೆಡಿಎಸ್‍ನಲ್ಲಿಯೇ ತಮ್ಮ ಶಕ್ತಿಯನ್ನು ಪ್ರದರ್ಶಿಸುವುದರಮೂಲಕ ಕೊನೆಯವರೆಗೂ ಇದರಲ್ಲಿ ಇದ್ದರು, ಅವರ ಆರೋಗ್ಯ, ಚಟುವಟಿಕೆ ನೋಡಿದರೆ ಇನ್ನೂ ಹಲವಾರು ವರ್ಷ ಬದುಕಿರುತ್ತಾರೆಎಂದು ನಮಗೆ ಅನಿಸಿತ್ತು ಆದರೆ ಭಗವಂತ ಇಚ್ಚೆಂತೆ ಅವರು ನಮ್ಮನ್ನೆಲ್ಲ ಬಿಟ್ಟು ಆಗಲಿದ್ದಾರೆ. ಆವರು ಭೌತಿಕವಾಗಿ ನಮ್ಮಜೊತೆಯಲ್ಲಿ ಇಲ್ಲ ಆದರೆ ಮಾನಸಿಕವಾಗಿ ನಮ್ಮಲ್ಲಿಯೇ ಇದ್ದಾರೆ. ಅವರ ನಿಧನ ನಮ್ಮ ಪಕ್ಷ, ಅಭಿಮಾನಿಗಳಿಗೆ ಹಾಗೂಅವೆರಕುಟುಂಬಕ್ಕೆ ಆಪಾರವಾದ ನಷ್ಠವಾಗಿದೆ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಜೆ.ಡಿ.ಎಸ್ ಘಟಕದ ಅಧ್ಯಕ್ಷರಾದ ಎಂ ಜಯಣ್ಣ
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಜೆ.ಡಿ.ಎಸ್ ಘಟಕದ ಅಧ್ಯಕ್ಷರಾದ ಎಂ ಜಯಣ್ಣ ಮಾತನಾಡಿ, ಜಿಲ್ಲೆಯಲ್ಲಿಗುರುಸಿದ್ದಪ್ಪರವರನ್ನು ದ್ವೇಷ ಮಾಡುವವರು ಯಾರೂ ಇಲ್ಲ, ಎಲ್ಲರನ್ನು ಪ್ರೀತಿ, ವಿಶ್ವಾಸದಿಂದ ಕಾಣುತ್ತಿದ್ದ ಅವರುಮಾರ್ಗದರ್ಶಿಗಳಾಗಿದ್ದರು, ಅವರ ರಾಜಕೀಯ ಕಾಲದಲ್ಲಿ ಹಲವಾರು ಜನರನ್ನು ಶಾಸಕರನ್ನಾಗಿ ಮಾಡಿದ್ದಾರೆ ಆದರೆ ಅವರಿಂದಯಾವುದೇ ಸಹಾಯವನ್ನು ಬಯಸಿಲ್ಲ, ಅವರು ನಿಧನದಿಂದ ನಮ್ಮ ಪಕ್ಷಕ್ಕೆ ಮಾರ್ಗದರ್ಶಕರು ಇಲ್ಲದಂತಾಗಿದೆ. ಅವರ ನಡೆದದಾರಿಯಲ್ಲಿ ನಾವುಗಳು ನಡೆಯಬೇಕಿದೆ. ಇದರಿಂದ ಅವರ ಆತ್ಮಕ್ಕ ಶಾಂತಿ ಸಿಗುತ್ತದೆ. ನಾವು ನಿಧನವಾದ ಮೇಲೆ ನಾವು ಗಳಿಸಿದಹಣ ಆಂತಸ್ತು ಬರುವುದಿಲ್ಲ, ನಮ್ಮ ಜೊತೆಗೆ ನಾವುಗಳಿಸಿದ ವಿಶ್ವಾಸ ಬರುತ್ತದೆ ಎಂದರು.
ಗುರುಸಿದ್ದಪ್ಪರವರ ಅಧಿಕಾರಕ್ಕಾಗಿ ಎಂದು ಸಹಾ ಆಸೆಯನ್ನು ಪಟ್ಟವರಲ್ಲ, ಅವರು ಕೊನೆಯವರೆವಿಗೂ ಸಹಾ ಜೆಡಿಎಸ್‍ನಲ್ಲಿಇರುವುದರ ಮೂಲಕ ತಮ್ಮ ನಿಲುವನ್ನು ಪ್ರದರ್ಶಿಸಿದರು. ಅವರು ನಾಲ್ಕು ಜನರಿಂದ ಹೋಗಲಿಶುವಂತ ಕಾರ್ಯವನ್ನು ಮಾಡಿದ್ದಾರೆಹೊರೆತು ತೆಗಳಿಸುವಂತ ಕಾರ್ಯವನ್ನು ಮಾಡಿಲ್ಲ ಗುರುಸಿದ್ದಪ್ಪರವರು ರಾಜಕೀಯವಾಗಿ ಇಷ್ಟು ಬೆಳೆಯಲು ಅವರ ಪತ್ನಿಯವರಸಹಕಾರ ಹೆಚ್ಚಾಗಿದೆ, ಅವರು ಸಹಕಾರ ನೀಡದಿದ್ದರೆ ಇಷ್ಟ ಮಟ್ಟಿಗೆ ಅವರು ಬೆಳೆಯುತ್ತಿರಲಿಲ್ಲ ಎಂದರು.ಜಿಲ್ಲಾ ಜೆ ಡಿ ಎಸ್ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಡಿ. ಗೋಪಾಲಸ್ವಾಮಿ ನಾಯಕ ಮಾತನಾಡಿ, ನಮ್ಮ ಚಿತ್ರದುರ್ಗ ಜಿಲ್ಲೆಗೆಜೆಡಿಎಸ್‍ನ ರಾಜ್ಯ ಮಟ್ಟದ ನಾಯಕರು ಭೇಟಿ ನೀಡಿದಾಗ ಅವರನ್ನು ಗುರುಸಿದ್ದಪ್ಪರವರ ಮನೆಗೆ ಕರೆದುಕೊಂಡು ಹೋಗುವಕಾರ್ಯವನ್ನು ಜಿಲ್ಲಾ ಮಟ್ಟದ ಪದಾಧಿಕಾರಿಗಳು ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಭಾಗವಹಿಸಿದ್ದ ಜಿಲ್ಲಾ ಕಾರ್ಯಧ್ಯಕ್ಷರಾದ ಜಿ.ಬಿ. ಶೇಖರ್. ಚಿತ್ರದುರ್ಗ ತಾಲ್ಲೂಕು ಘಟಕದ ಅಧ್ಯಕ್ಷರಾದ
ಸಣ್ಣತಿಮ್ಮಪ್ಪ, ಪೈಲ್ವಾನ್ ತಿಪ್ಪೇಸ್ವಾಮಿ, ಹೂಳಲ್ಕೆರೆ ತಾಲೂಕು ಘಟಕದ ಅಧ್ಯಕ್ಷರಾದ ಪರಮೇಶ್ವರಪ್ಪ, ವಿದ್ಯಾರ್ಥಿ ಘಟಕದ
ಅಧ್ಯಕ್ಷರಾದ ಪ್ರತಾಪ್ ಜೋಗಿ,ರುದ್ರಪ್ಪ, ಚಂದ್ರಣ್ಣ, ಚಂದ್ರಶೇಖರ್, ಮಾತನಾಡಿದರು, ರಾಘವೇಂದ್ರರವರು ಗುರುಸಿದ್ದಪ್ಪರವರ ಬಗ್ಗೆಕವನ ವಾಚನ ಮಾಡಿದರು.ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಂ.ಕೆ.ಹಟ್ಟಿಯ ಈರಣ್ಣ, ಮೊಳಕಾಲ್ಮೂರು ಅಧ್ಯಕ್ಷರಾದ ಕರಿಬಸಪ್ಪ, ನೇಕಾರಘಟಕದ ಅಧ್ಯಕ್ಷರಾದ ಲಿಂಗರಾಜು, ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಗೀತಾ, ರಾಜ್ಯ ಎಸ್.ಸಿ.ಘಟಕದ ಕಾರ್ಯದರ್ಶಿರಮೇಶ್, ರಾಜ್ಯ ಯುವ ಘಟಕದ ಕಾರ್ಯದರ್ಶಿ ಹನುಮಂತರಾಯಪ್ಪ, ಗುರುಸಿದ್ದಪ್ಪರವರ ಪತ್ನಿ ಸಾಕಮ್ಮ, ಮಗ ಸಿದ್ದೇಶ್,ಹಿರಿಯೂರು ತಾಲ್ಲೂಕಿನ ಘಟಕದ ಅಧ್ಯಕ್ಷರಾದ ಹನುಮಂತ ರಾಯಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



