ಚಿತ್ರದುರ್ಗ : ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಮೂರು ದಿನಗಳ ಕಾಲ ನಡೆದ 25 ವರ್ಷದೊಳಗಿನ ರಾಜ್ಯ ಮಟ್ಟದಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನವನ್ನು ಎಸ್.ಬಿ.ಐ. ಲೈಫ್ ತಂಡ ಪಡೆದುಕೊಂಡಿತು.ಕೆಳಗೋಟೆ ಕಿಂಗ್ಸ್ ಎರಡನೆ ಬಹುಮಾನಕ್ಕೆ ತೃಪ್ತಿಪಟ್ಟುಕೊಂಡರೆರಾಯಲ್ ಸೇನಾ ಮೂರನೆ ಬಹುಮಾನ ಧಕ್ಕಿಸಿಕೊಂಡಿತು.ಕೆಳಗೋಟೆ ಕಿಂಗ್ಸ್ ತಂಡದ ಧನುಶ್ ಬೆಸ್ಟ್ ರೈಡರ್, ಎಸ್.ಬಿ.ಐ. ಲೈಫ್‍ನ ಆಕಾಶ್‍ಗೌಡ ಬೆಸ್ಟ್ ಕ್ಯಾಚರ್, ಎಸ್.ಬಿ.ಐ. ನ ಕಿರಣ್‍ಗೌಡಬೆಸ್ಟ್ ಆಲ್ ರೌಂಡರ್ ಆಗಿ ಪಂದ್ಯಾವಳಿಯಲ್ಲಿ ಹೊರಹೊಮ್ಮಿದರು.ಜಯಶಾಲಿಗಳಿಗೆ ಆಕರ್ಷಕ ಕಪ್ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



