ಬಿಗ್ ಬಾಸ್ ಹೊಸ ಸೀಸನ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಎಂದು ಖ್ಯಾತಿ ಪಡೆದಿದೆ. ಈ ಬಾರಿ ಬಿಗ್ ಬಾಸ್ ಹಿಂದಿ ಸೀಸನ್ 19 ಪ್ರಸಾರವಾಗಲಿದ್ದು, ಇದರ ಬಗ್ಗೆ ಕಳೆದ ಕೆಲವು ಸಮಯದಿಂದ ಚರ್ಚೆಗಳು ನಡೆಯುತ್ತಿವೆ.
ಬಿಗ್ ಬಾಸ್ 19ಗೆ ಸೇರುವ ಸ್ಪರ್ಧಿಗಳ ಬಗ್ಗೆ ಪ್ರತಿದಿನ ಹೊಸ ಹೆಸರುಗಳು ಹೊರಬರುತ್ತಿವೆ. ಈಗ ಈ ವಿವಾದಾತ್ಮಕ ಚೆಲುವೆ ಬಿಗ್ ಬಾಸ್ ಸೀಸನ್ 19 ಗೆ ಪ್ರವೇಶಿಸಲು ಸಿದ್ಧವಾಗಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ.
ವರದಿಗಳ ಪ್ರಕಾರ, ದಿ ರೆಬೆಲ್ ಕಿಡ್ ಅಂದರೆ ಅಪೂರ್ವ ಮುಖಿಜಾ ಸಲ್ಮಾನ್ ಖಾನ್ ಅವರ ರಿಯಾಲಿಟಿ ಶೋ ಬಿಗ್ ಬಾಸ್ 19 ಮನೆಗೆ ಹೋಗಬಹುದು ಎಂದು ಹೇಳಲಾಗುತ್ತಿದೆ. ಇನ್ನೂ ಅಧಿಕೃತ ಆಗಿಲ್ಲ. ಅಪೂರ್ವ ಅವರ ಹೆಸರು ಹಿಂದೆ ಸಾಕಷ್ಟು ವಿವಾದಗಳಲ್ಲಿತ್ತು. ಇದರಿಂದಾಗಿ ಅವರು ಬಿಗ್ ಬಾಸ್ ಸೀಸನ್ 19 ಗೆ ಸೇರುವ ಸಾಧ್ಯತೆಗಳು ತುಂಬಾ ಹೆಚ್ಚಿವೆ.
ಬಿಗ್ ಬಾಸ್ 19 ಕ್ಕಿಂತ ಮೊದಲು, ಅಪೂರ್ವ ಮುಖಿಜಾ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರ ಇತ್ತೀಚಿನ ರಿಯಾಲಿಟಿ OTT ಶೋ ದಿ ಟ್ರೇಟರ್ಸ್‌ನಲ್ಲಿ ಕಾಣಿಸಿಕೊಂಡಿದ್ದರು. ವಾಸ್ತವವಾಗಿ ಅಪೂರ್ವ ಮುಖಿಜಾ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿದ್ದು, ಅವರು ತಮ್ಮ ನೇರ ಮಾತಿನ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಸ್ಟ್ಯಾಂಡ್ ಅಪ್ ಹಾಸ್ಯನಟ ಸಮಯ್ ರೈನಾ ಅವರ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಾಗ ಹೆಚ್ಚು ಚರ್ಚೆಗೆ ಒಳಗಾಯಿತು. ಈ ಸಮಯದಲ್ಲಿ, ಅವರು ಅಶ್ಲೀಲ ಪದಗಳನ್ನು ಬಳಸಿದರು, ಇದರಿಂದಾಗಿ ಅಪೂರ್ವ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಉತ್ತರ ಭಾರತದಲ್ಲಿ ದಿ ರೆಬಲ್ ಕಿಡ್
ಅಪೂರ್ವ ಮುಖಿಜಾ ಉತ್ತರ ಭಾರತದಲ್ಲಿ ದಿ ರೆಬಲ್ ಕಿಡ್ ಎಂದೇ ಖ್ಯಾತಿ ಪಡೆದಿದ್ದಾರೆ. ಅಪೂರ್ವ ಮುಖಿಜಾ ಹಿಂದೊಮ್ಮೆ “ಬದುಕಲು ಬೆಂಗಳೂರು ಯೋಗ್ಯವಾದ ಊರಲ್ಲ” ಎಂದು ಹೇಳಿದ್ದರು. ಅಪೂರ್ವ ಮುಖಿಜಾ ಬೆಂಗಳೂರಿನಲ್ಲಿ ಒಂದಿಷ್ಟು ಕಾಲ ವಾಸವಿದ್ದರು. ಬೆಂಗಳೂರಿನಲ್ಲಿ ಡೆಲ್ ಕಂಪನಿಯಲ್ಲಿ ಅಪೂರ್ವ ಮುಖಿಜಾ ಕೆಲಸ ಮಾಡುತ್ತಿದ್ದರು.
ಬೆಂಗಳೂರಿಗೆ ಆತ್ಮ ಇಲ್ಲ.. ಕನ್ನಡ ಗೊತ್ತಿಲ್ಲ ಎಂದು ಆಟೋ ಚಾಲಕ ನನ್ನ ಜೊತೆ ಮಾತನಾಡಲಿಲ್ಲ. ಬೆಂಗಳೂರನ್ನು ನಾನು ಯಾವತ್ತು ಇಷ್ಟ ಪಡುವುದಿಲ್ಲ” ಎಂದು ಅಪೂರ್ವ ಮುಖಿಜಾ ಹೇಳಿಕೆ ನೀಡಿದ್ದರು. ಅಪೂರ್ವ ಮುಖಿಜಾ ಅವರ ಈ ಹೇಳಿಕೆ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿತ್ತು.
ಈ ಅಪೂರ್ವ ಮುಖಿಜಾ ಈ ಬಾರಿಯ ಹಿಂದಿ ಬಿಗ್ ಬಾಸ್ ಗೆ ಹೋಗಲಿದ್ದಾರೆ ಎನ್ನುವ ವದಂತಿ ಶುರುವಾಗಿದೆ. ಸಂದರ್ಶನದಲ್ಲಿ ಮಾತನಾಡಿರುವ ಅಪೂರ್ವ ಮುಖಿಜಾ, ಬಿಗ್ ಬಾಸ್‌ದಿಂದ ಆಫರ್ ಬಂದಿದ್ದು ನಿಜಾ ಆದರೆ ಆ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಸುಲಭದ ಮಾತಲ್ಲ ತುಂಬಾ ಸ್ಟ್ರಾಂಗ್ ಆಗಿರಬೇಕು ಎಂದು ಹೇಳಿದ್ದಾರೆ. ಬಂದಿರುವ ಅವಕಾಶವನ್ನು ಕೂಡ ನಿರಾಕರಿಸಿಲ್ಲ. ನಾನು ತುಂಬಾ ಯೋಚನೆ ಮಾಡುತ್ತೇನೆ. ಹಣ ಎಲ್ಲದಕ್ಕಿಂತ ಮುಖ್ಯ. ಹೆಚ್ಚಿನ ಹಣ ನನಗೆ ಕೊಡಲು ಸಿದ್ಧರಿದ್ದರೆ ನಾನು ಭಾಗವಹಿಸಲು ಸಿದ್ದ ಎಂದು ಹೇಳಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



