‘ಕೆಜಿಎಫ್’ ಸಿನಿಮಾ ಮೂಲಕ ಬೇರೆಯದೇ ಹಂತಕ್ಕೆ ಹೋದವರು ರವಿ ಬಸ್ರೂರು ಅವರು. ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಮಾಸ್ ಸಿನಿಮಾಗಳು ಎಂದಾದಾಗ ಅವರಿಗೆ ಆಫರ್ ಹೋಗೋದು ಹೆಚ್ಚು. ಅವರು ನಿರ್ದೇಶನ ಮಾಡಿದ ‘ವೀರಚಂದ್ರಹಾಸ’ ಸಿನಿಮಾ ಸೆಪ್ಟೆಂಬರ್ 19ರಂದು ತೆಲುಗಿನಲ್ಲಿ ರಿಲೀಸ್ ಆಗುತ್ತಿದೆ. ಈ ವೇಳೆ ಅವರು ತೆಲುಗು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಆಗ ಹಲವು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.‘ಉಗ್ರಂ’, ‘ಕೆಜಿಎಫ್’, ಸಲಾರ್ ರೀತಿಯ ಸಿನಿಮಾಗಳಿಗೆ ರವಿ ಬಸ್ರೂರು ಅವರು ಸಂಗೀತ ಸಂಯೋಜನೆ ಮಾಡಿದರು. ಈ ಸಿನಿಮಾಗಳ ಹಿನ್ನೆಲೆ ಸಂಗೀತ ಸಾಕಷ್ಟು ಗಮನ ಸೆಳೆಯಿತು. ಈ ಕಾರಣ ಅವರು ಸಾಕಷ್ಟು ಜನಪ್ರಿಯತೆ ಪಡೆದರು. ‘ಸಲಾರ್’ ಚಿತ್ರದಿಂದ ಅವರಿಗೆ ಸಾಕಷ್ಟು ಆಫರ್ಗಳು ಬಂದವಂತೆ.‘ಸಲಾರ್’ ಸಿನಿಮಾದ ಹಿನ್ನೆಲೆ ಸಂಗೀತ ಕೆಲವರಿಗೆ ಇಷ್ಟ ಆಗಿಲ್ಲ. ‘ಕೆಜಿಎಫ್’ ಚಿತ್ರದ ಪವರ್ ಫುಲ್ ಆಗಿಲ್ಲ ಎಂದು ಅನೇಕರು ಹೇಳಿದ್ದು ಇದೆ. ಆದರೆ, ರವಿ ಬಸ್ರೂರು ಜೀವನದಲ್ಲಿ ಈ ಚಿತ್ರ ಬದಲಾವಣೆ ತಂದಿತ್ತು. ‘ಸಲಾರ್ ಸಿನಿಮಾ ರಿಲೀಸ್ ಆದ ಬಳಿಕ ನನಗೆ ಅಮೆರಿಕ ಪ್ರೊಡಕ್ಷನ್ ಹೌಸ್ಗಳಿಂದ 3-4 ಫೋನ್ಗಳು ಬಂದವು ಎಂದು ಅವರು ಹೇಳಿದ್ದಾರೆ.ರವಿ ಬಸ್ರೂರು ಅವರು ಸದ್ಯ ಸಾಕಷ್ಟು ಆಫರ್ ಪಡೆಯುತ್ತಿದ್ದಾರೆ. ಆದರೆ, ಮೊದಲಿನಷ್ಟು ಸಿನಿಮಾ ಹಿಟ್ ಆಗುತ್ತಿಲ್ಲ. ಈಗ ಅವರು ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್ಟಿಆರ್ ಸಿನಿಮಾ ಜೊತೆ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಅವರು 3-4 ವರ್ಷನ್ಗಳ ಮ್ಯೂಸಿಕ್ನ ಕಂಪೋಸ್ ಮಾಡಿಯಾಗಿದೆ. ಅವರು ಈ ಬಾರಿ ನಿರೀಕ್ಷೆಯನ್ನು ಮೀರುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.ರವಿ ಬಸ್ರೂರು ಅವರು ಸಿನಿಮಾ ನಿರ್ಮಾಣ, ನಿರ್ದೇಶನದಲ್ಲೂ ತೊಡಗಿಕೊಂಡಿದ್ದಾರೆ. ಪ್ರಯೋಗಾತ್ಮಕ ಸಿನಿಮಾಗಳನ್ನು ಅವರು ನಿರ್ದೇಶನ ಮಾಡುತ್ತಾರೆ. ಈ ಮೊದಲು ಸಣ್ಣ ಮಕ್ಕಳ ಸಿನಿಮಾ ನಿರ್ದೇಶನ ಮಾಡಿದ್ದರು. ಈ ಪಾತ್ರಧಾರಿಗಳಿಗೆ ಯಶ್, ರಾಧಿಕಾ ಪಂಡಿತ್ ಮೊದಲಾದವರಿಂದ ವಾಯ್ಸ್ ಕೊಡಿಸಿದ್ದರು. ಆದರೆ, ಈ ಪ್ರಯತ್ನ ಯಶಸ್ಸು ಕಂಡಿರಲಿಲ್ಲ. ಈಗ ವೀರಚಂದ್ರಹಾಸ ಯಕ್ಷಗಾನ ಆಧರಿಸಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







