Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ರಾಷ್ಟ್ರಮಟ್ಟಕ್ಕೆ ಆರ್‌.ವೈಷ್ಣವಿ ಆಯ್ಕೆ

ಕರಿಯಪ್ಪ ಮಾಳಿಗೆ ನೆಲದ ಮಗ ; ಸಂಶೋಧನೆಯ ಹಾದಿಯಲ್ಲಿ ಮಣ್ಣಿನ ಗುಣ ಹುಡುಕಿದ ಚಿಂತಕ

ರೈತ ಸಮೃದ್ಧಿಯಾಗಿದ್ದರೆ ದೇಶವು ಕೂಡ ಸಮೃದ್ಧಿ: ಶಾಸಕ ಕೆ.ಸಿ ವೀರೇಂದ್ರ ಪಪ್ಪಿ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ರಾಜ್ಯ»ರೈತ ಸಮೃದ್ಧಿಯಾಗಿದ್ದರೆ ದೇಶವು ಕೂಡ ಸಮೃದ್ಧಿ: ಶಾಸಕ ಕೆ.ಸಿ ವೀರೇಂದ್ರ ಪಪ್ಪಿ
ರಾಜ್ಯ

ರೈತ ಸಮೃದ್ಧಿಯಾಗಿದ್ದರೆ ದೇಶವು ಕೂಡ ಸಮೃದ್ಧಿ: ಶಾಸಕ ಕೆ.ಸಿ ವೀರೇಂದ್ರ ಪಪ್ಪಿ

ಮೃತ್ಯುಂಜಯಾಚಾರ್ ಬಿBy ಮೃತ್ಯುಂಜಯಾಚಾರ್ ಬಿMarch 29, 2026Updated:March 29, 2026No Comments3 Mins Read
Share WhatsApp Facebook Twitter Threads Telegram
Follow Us
Facebook Instagram
Share
WhatsApp Twitter Facebook Telegram

ರೈತ ಸಮೃದ್ಧಿಯಾಗಿದ್ದರೆ ದೇಶವು ಕೂಡ ಸಮೃದ್ಧಿ: ಶಾಸಕ ಕೆ.ಸಿ ವೀರೇಂದ್ರ ಪಪ್ಪಿ

ಚಿತ್ರದುರ್ಗ: ರೈತ ಸಮೃದ್ಧಿಯಾಗಿದ್ದರೆ ದೇಶವು ಕೂಡ ಸಮೃದ್ಧಿಯಾಗಿರುತ್ತದೆ. ಹಸಿವು ನೀಗಿಸುವ ಕೆಲಸವನ್ನು ರೈತ ಬಿಟ್ಟು ಇನ್ಯಾರು ಕೂಡ ಮಾಡಲಾಗದು ಹಾಗಾಗಿ ನಾನು ರೈತರ ಪರವಾಗಿ ಯಾವಾಗಲೂ ಇರುತ್ತೇನೆ ಎಂದು ಶಾಸಕ ಕೆ.ಸಿ ವೀರೇಂದ್ರ (ಪಪ್ಪಿ) ಅವರು ತಿಳಿಸಿದರು.

ತಾಲೂಕಿನ ಭೀಮಸಮುದ್ರ ಗ್ರಾಮದಲ್ಲಿ ಭಾನುವಾರ ಕರ್ನಾಟಕ ರಾಜ್ಯ ರೈತ ಸಂಘದ ಶಾಖೆ ಉದ್ಘಾಟಿಸಿ ಮಾತನಾಡಿದರು.

ರೈತರು ಕಷ್ಟ ಬಿದ್ದು ಭೂಮಿಯನ್ನು ಹದ ಮಾಡಿ ಫಸಲನ್ನು ತೆಗೆಯಲು ಸಾಕಷ್ಟು ಸಮಸ್ಯೆಗಳನ್ನ ಹೆದರಿಸಿ ನಿಲ್ಲುತ್ತಾನೆ ಆದರೆ ಸರಿಯಾದ ಬೆಲೆ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲ್ಕುತಿದ್ದಾರೆ ಈ ವಿಚಾರವನ್ನು ನಾನು ಗಂಭೀರವಾಗಿ ಅರಿತಿದ್ದೇನೆ, ಆದ್ದರಿಂದ ರೈತರಿಗೆ ಅನುಕೂಲವಾಗುವಂತಹ ಕೃಷಿ ಯೋಜನೆಗಳು ರೈತರಿಗೆ ತಲುಪಿಸುವಂತಹ ಕೆಲಸವನ್ನ ನಾನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ ಎಂದು ತಿಳಿಸಿದರು.

 

ರೈತ ಬಾಂಧವರು ಒಂದಾದರೆ ಇಡೀ ದೇಶದ ಚಿತ್ರಣವೇ ಬದಲಾಗುತ್ತದೆ ಎಂಬುವುದನ್ನು ನಾನು ಅರಿತಿದ್ದೇನೆ ಆದ್ದರಿಂದ ಭೀಮಸಮುದ್ರ ಗ್ರಾಮದ ಸುತ್ತಮುತ್ತಲಿನ ರೈತಪಿ ವರ್ಗದವರು ಈಗಾಗಲೇ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೀರಾ ಇವುಗಳಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಸದಾ ನಿಮ್ಮೊಂದಿಗೆ ನಾನಿರುತ್ತೇನೆ ಹೋರಾಟದ ಜೊತೆ ಜೊತೆಗೆ ಪೂರಕವಾಗಿ ನಾನು ಸಾಕಾರವನ್ನು ನೀಡುತ್ತೇನೆ ಎಂದು ತಿಳಿಸಿದರು.

 

ಶಾಸಕ ಪುಟ್ಟಣ್ಣಯ್ಯ ಮಾತನಾಡಿ ರೈತನ ಬೆಳೆಯುವ ಬೆಳೆಗಳಿಗೆ ಸರಿಯಾಗಿ ಮಾರುಕಟ್ಟೆಗಳಲ್ಲಿ ಬೆಲೆ ಸಿಗದ ರೈತ ಸಾಲಗಾರನಾಗಿದ್ದಾನೆ, ರೈತರಿಗೆ ಮಾರುಕಟ್ಟೆಯಲ್ಲಿ ದೊರೆಯುವಂತಹ ಬೆಲೆಯು ಶ್ರೀಮಂತಿಕೆಯನ್ನು ತಂದು ಕೊಡುವುದಿಲ್ಲ, ಬೆಳೆ ಬೆಳೆಯುವ ಖರ್ಚು ವೆಚ್ಚಗಳಿಗೆ ಸರಿಯಾಗುತ್ತದೆ ಆದರೆ ಮಾರುಕಟ್ಟೆಯಿಂದ ನಂತರ ವ್ಯವಹರಿಕರಣವಾಗುವಾಗ ಬೆಳೆಯು ಮಧ್ಯವರ್ತಿಗಳಿಗೆ ಸಾಕಷ್ಟು ಲಾಭವಾಗುತ್ತದೆ ಇದರಿಂದ ರೈತನಿಗೆ ಮತ್ತಷ್ಟು ನಷ್ಟವಾಗುತ್ತದೆ ಎಂದು ತಿಳಿಸಿದರು.

 

ಭೀಮಸಮುದ್ರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗಣಿ ಬಾಧಿತ ನಡೆಯುತ್ತಿರುವುದರಿಂದ ಬೆಳೆಗಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ, ಉತ್ಕೃಷ್ಟವಾದ ಬೆಳೆಯನ್ನ ಬೆಳೆಯಲು ರೈತ ಸಾಲಗಾರನಾಗುತ್ತಿದ್ದಾನೆ ಬೆಳೆಗಳ ಮೇಲೆ ಗಣಿಯ ಧೂಳು ಕುಳಿತುಕೊಂಡು ಫಸಲು ಬರದಂತಾಗುತ್ತಿದೆ, ಇಲ್ಲಿನ ಧೂಳಿನಿಂದಾಗಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ವಿಪರೀತ ಬದಲಾವಣೆಗಳು ಕಂಡುಬರುತ್ತವೆ ಹಾಗಾಗಿ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಹೋರಾಟವನ್ನ ಗಣಿಗಾರಿಕೆಗಳ ವಿರುದ್ಧವಾಗಿ ನಾವೆಲ್ಲರೂ ಒಗ್ಗಟ್ಟಾಗಿ ಮಾಡಬೇಕಿದೆ ಎಂದು ತಿಳಿಸಿದರು.

 

ವಿಜಾಪುರ ಸಂಚಾರಿ ಪೀಠದ ಶ್ರೀ ಪ್ರವೀಣ್ ಗುರೂಜಿ ಮಾತನಾಡಿ ರೈತ ಮತ್ತು ಪರಿಸರ ಇವೆರಡು ಒಂದೇ ಮುಖದ ಎರಡು ನಾಣ್ಯಗಳು ಇದ್ದಂತೆ ಪರಿಸರಕ್ಕೆ ಮಾನವ ಅವಲಂಬಿತವಾಗಿ ಬದುಕುತ್ತಿದ್ದಾನೆ. ಪರಿಸರ ಉತ್ತಮವಾಗಿದ್ದರೆ ಉತ್ತಮವಾದ ಮಳೆಯಿಂದಾಗಿ ಬೆಳೆಯಾಗುತ್ತದೆ ಪರಿಸರವೇ ವಿನಾಶವಾದರೆ ರೈತ ಈನ್ನೆಲೆ ಬದುಕುತ್ತಾನೆ ಹಾಗಾಗಿ ಪರಿಸರ ಕಾಪಾಡುವುದು ರೈತನ ಜವಾಬ್ದಾರಿಯ ಜೊತೆಜೊತೆಗೆ ಪ್ರತಿಯೊಬ್ಬರ ನಾಗರಿಕನ ಕರ್ತವ್ಯವಾಗಿದೆ ಎಂದು ತಿಳಿಸಿದರು.

 

ಗಣಿ ಬಾಧಿತ ಪ್ರದೇಶಗಳಲ್ಲಿ ರೈತ ಸಾಲ ಮಾಡಿ ಉತ್ತಮ ಬೆಳೆ ಬೆಳೆಯಲು ವಿಫಲನಾಗುತ್ತಿದ್ದಾನೆ ಅಂತರ್ಜಲ ಮಟ್ಟವು ಕೂಡ ಕಡಿಮೆಯಾಗುತ್ತಿದೆ ಗಣಿ ಬಾಧಿತ ಪ್ರದೇಶಕ್ಕೆ ಪ್ರತ್ಯೇಕವಾಗಿ ನಿಗಮಗಳನ್ನ ತೆರೆದು ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತ ವಿವಿಧ ಯೋಜನೆಗಳನ್ನು ರೂಪಿಸಿ ಗಣಿ ಬಾಧಿತ ಹಣವನ್ನ ಸದುಪಯೋಗ ಪಡೆದುಕೊಳ್ಳುವುದು ಗಣಿ ಬಾಧಿತ ಪ್ರದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ತಿಳಿಸಿದರು.

 

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಪಡಗಲಪುರ ನಾಗೇಂದ್ರ ಅವರು ಮಾತನಾಡಿ ಉದ್ಯೋಗಗಳನ್ನು ಸೃಷ್ಟಿ ಮಾಡುವುದು ಕೃಷಿ ಕಾಯಕ ಮೊದಲಿಗ ಬರುತ್ತದೆ, ಈ ದೇಶದಲ್ಲಿ ಯಾರೂ ಕೂಡ ಉಪವಾಸವಾಗಿ ಇರಬಾರದು ಎನ್ನುವ ನಿಟ್ಟಿನಲ್ಲಿ ರೈತ ಕಷ್ಟ ಬಿದ್ದು ಹೊಲವನ್ನು ಅಸನ್ನು ಮಾಡಿ ಬಿತ್ತಿ ಬೆಳೆಯಲು ಮುಂದಾಗುತ್ತಾನೆ ಆದರೆ ಸರ್ಕಾರ ತರುವ ಯೋಜನೆಗಳು ಹಾಗೂ ಪರಿಸರವಾಡುವ ಆಟಗಳಿಂದ ರೈತ ಮತ್ತೆ ಸಾಲದ ಸುಳಿಯಲ್ಲಿ ಸಿಲುಕಿ ರೈತ ಪ್ರಾಣವನ್ನು ಬಿಡುತ್ತಿದ್ದಾರೆ ಎಂದು ತಿಳಿಸಿದರು.

 

ರೈತರ ಬದುಕಿಗೆ ಯಾವುದೇ ಸರ್ಕಾರಗಳಾಗಲಿ ಉತ್ತೇಜನವನ್ನು ನೀಡಬೇಕು ವಿನಹ ರೈತರಿಗೆ ಸಂಕಷ್ಟಗಳನ್ನು ನೀಡಬಾರದು ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಪಂಪ್ಸೆಟ್ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡುತ್ತಿರುವುದನ್ನು ನಾವು ಗಂಭೀರವಾಗಿ ವಿರೋಧಿಸುತ್ತೇವೆ ಎಂದು ತಿಳಿಸಿದರು.

 

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯತ ಕಾರ್ಯದರ್ಶಿಗಳಾದ ಚಾಮರಸ ಮಾಲಿಪಾಟೀಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ವಸಂತ್ ಕುಮಾರ್, ಉಪಾಧ್ಯಕ್ಷರಾದ ಕೆ.ಪಿ ಭೂತಯ್ಯ, ಬಸ್ತಿಹಳ್ಳಿ ಸುರೇಶ್ ಬಾಬು,ಅರುಣ್ ಕುಮಾರ್, ಕುರುಡಿ ಕೆ.ಸಿ ಹೊರ್ಕೆರಪ್ಪ, ಚಿತ್ರದುರ್ಗ ಜಿಲ್ಲಾಧ್ಯಕ್ಷ ಧನಂಜಯ್, ಜಿಲ್ಲಾ ಉಪಾಧ್ಯಕ್ಷ ಚಿಕ್ಕಪ್ಪನಳ್ಳಿ ರುದ್ರಸ್ವಾಮಿ, ತಾಲೂಕು ಪ್ರಧಾನ ಕಾರ್ಯದರ್ಶಿ ಕಾಂತರಾಜ್ ಹುಣ್ಸೆಕಟ್ಟೆ, ಗಣಿ ಬಾವಿತ ಪ್ರದೇಶ ಹೋರಾಟಗಾರ ಸಮಿತಿ ಸಂಚಾಲಕ ರಮೇಶ್ ಬಿ.ದುರ್ಗ, ಜಿಲ್ಲಾಟ್ರಸಿಟಿ ಸಮಿತಿ ಸದಸ್ಯ ಸಿ.ಎಲ್ ಅವಿನಾಶ್, ಭೀಮ ಸಮುದ್ರ ಘಟಕದ ಗೌರವಾಧ್ಯಕ್ಷರಾದ ಜಯಣ್ಣ, ಅಧ್ಯಕ್ಷರಾದ ಶಂಕರ್ ಮೂರ್ತಿ, ಪ್ರಧಾನ ಕಾರ್ಯದರ್ಶಿ ಕೆ ರಾಘವೇಂದ್ರ ಖಜಾಂಚಿ ಶಿವಕುಮಾರ್, ಸಂಘಟನ ಕಾರ್ಯದರ್ಶಿ ಈರಣ್ಣ ಸಂಚಾಲಕ ಬಸವರಾಜ್, ಹಾಗೂ ಸಂಘದ ಪದಾಧಿಕಾರಿಗಳಾದ ಪ್ರಸನ್ನ ಕುಮಾರ್, ನಿರಂಜನ್, ಗಂಗಾಧರಪ್ಪ, ವೆಂಕಟೇಶ್, ರಾಜು, ಅಶೋಕ್, ನಾಗರಾಜ್, ಮಂಜು, ಸುರೇಶಣ್ಣ, ಮುತ್ತಣ್ಣ, ಪ್ರಬಣ್ಣ, ಗಿರೀಶ್, ಪ್ರವೀಣ್ ನಾಯಕ್, ರಂಗೇಶ್, ನಾಗರಾಜ್, ಸಿದ್ದೇಶ್, ರಮೇಶ್, ಸತೀಶ್ ನಾಯಕ್, ಶಂಕರ್ ಮೂರ್ತಿ, ನಿಂಗಪ್ಪ, ಭರತಣ್ಣ, ಕುಮಾರಣ್ಣ, ಕೆಂಚಪ್ಪ, ರಮೇಶ್, ಬಸವರಾಜಪ್ಪ, ಮಂಜುನಾಥ್, ನಾಗರಾಜ್, ರಂಗಸ್ವಾಮಿ, ರಾಜಪ್ಪ, ಬಾನಪ್ಪ, ಹನುಮಂತಪ್ಪ, ಅಭಿಲಾಶ್, ಸಿದ್ದೇಶ್, ರಮೇಶ್, ಗೋಪಾಲ, ತಿಪ್ಪೇಸ್ವಾಮಿ, ಶ್ರೀಧರ್ ಹಾಗೂ ಇತರರು ಇದ್ದರು.

Follow on Facebook Follow on Instagram
Share. Facebook Twitter WhatsApp Telegram
Previous Articleಕರುನಾಡಿನ ಜಲಋಷಿ – ರಾಜಸ್ಥಾನದ ಜಲರಕ್ಷಕ: ದೆಹಲಿಯಲ್ಲಿ ಜಲ ಸಂರಕ್ಷಣೆಯ ಮಹಾ ಸಂವಾದ
Next Article ಕರಿಯಪ್ಪ ಮಾಳಿಗೆ ನೆಲದ ಮಗ ; ಸಂಶೋಧನೆಯ ಹಾದಿಯಲ್ಲಿ ಮಣ್ಣಿನ ಗುಣ ಹುಡುಕಿದ ಚಿಂತಕ
ಮೃತ್ಯುಂಜಯಾಚಾರ್ ಬಿ
  • Website

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

Related Posts

ಕರುನಾಡಿನ ಜಲಋಷಿ – ರಾಜಸ್ಥಾನದ ಜಲರಕ್ಷಕ: ದೆಹಲಿಯಲ್ಲಿ ಜಲ ಸಂರಕ್ಷಣೆಯ ಮಹಾ ಸಂವಾದ

March 29, 2026

ನ್ಯಾಯದಲ್ಲಿ ರಾಜಿ ಬೇಡ: ಪೊಲೀಸರಿಗೆ ಸಿಎಂ ಕಟ್ಟುನಿಟ್ಟಿನ ಸೂಚನೆ

March 29, 2026

ನಿಮಗೆ ನಿವೇಶನ ಬೇಕೆ? ಕೂಡಲೇ ಅರ್ಜಿ ಸಲ್ಲಿಸಿ

March 28, 2026
Add A Comment
Leave A Reply Cancel Reply

Advertisement
Latest Posts

ರಾಷ್ಟ್ರಮಟ್ಟಕ್ಕೆ ಆರ್‌.ವೈಷ್ಣವಿ ಆಯ್ಕೆ

ಕರಿಯಪ್ಪ ಮಾಳಿಗೆ ನೆಲದ ಮಗ ; ಸಂಶೋಧನೆಯ ಹಾದಿಯಲ್ಲಿ ಮಣ್ಣಿನ ಗುಣ ಹುಡುಕಿದ ಚಿಂತಕ

ರೈತ ಸಮೃದ್ಧಿಯಾಗಿದ್ದರೆ ದೇಶವು ಕೂಡ ಸಮೃದ್ಧಿ: ಶಾಸಕ ಕೆ.ಸಿ ವೀರೇಂದ್ರ ಪಪ್ಪಿ

ಕರುನಾಡಿನ ಜಲಋಷಿ – ರಾಜಸ್ಥಾನದ ಜಲರಕ್ಷಕ: ದೆಹಲಿಯಲ್ಲಿ ಜಲ ಸಂರಕ್ಷಣೆಯ ಮಹಾ ಸಂವಾದ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.