ಕೊಪ್ಪಳ ಹಣ್ಣು ಮೇಳದಲ್ಲಿ ಕೇಜಿಗೆ ₹15 ಲಕ್ಷದ ಅಣಬೆ ಪ್ರದರ್ಶನ
ಕೊಪ್ಪಳ: ಇದು, ಅಂತಿಂಥ ಅಣಬೆಯಲ್ಲ, ಜಗತ್ತಿನ ದುಬಾರಿ ಅಣಬೆಯಾಗಿದೆ. ಯರ್ಸಗುಂಬಾ (yarsagumba) ಎಂದು ಕರೆಯಲ್ಪಡುವ ಈ ಅಣಬೆ ಕೆಜಿಗೆ ಬರೋಬ್ಬರಿ ₹15 ಲಕ್ಷ. ಇಂಥ ಅಣಬೆ ಕೊಪ್ಪಳ ನಗರದ ತೋಟಗಾರಿಕಾ ‘ಇಲಾಖೆಯ ಆವರಣದಲ್ಲಿ ಹಮ್ಮಿಕೊಂಡಿರುವ ಹಣ್ಣು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಇಡಲಾಗಿದ್ದು, ಜನರ ಗಮನ ಸೆಳೆಯುತ್ತಿದೆ.
ಏನು ವಿಶೇಷ?: ಹಿಮಾಲಯ ಪರ್ವತ ಹಾಗೂ
ನೇಪಾಳದಲ್ಲಿ ಮಾತ್ರ ಬೆಳೆಯುವ ಅಣಬೆ ಇದು. ಇದು ದೇಹದ ಶಕ್ತಿ, ರೋಗ ನಿರೋಧಕ ಶಕ್ತಿ ಮತ್ತು ಮೆದುಳಿನ ಕಾರ್ಯಚಟುವಟಿಕೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಕ್ಯಾನ್ಸರ್‌ಗಡ್ಡೆಯ ಬೆಳವಣಿಗೆ ತಡೆಯುತ್ತದೆ. ಔಷಧಿಯ ಗುಣ ಹೊಂದಿರುವುದು ಅಲ್ಲದೆ ಹಿಮಾಲಯದ ವಯಾಗ್ರ ಎಂದೇ ಇದನ್ನು ಕರೆಯಲಾಗುತ್ತದೆ.
