ಕೊಯಮತ್ತೂರು: ಸಾಲು ಸಾಲು ಮೆದುಳಿನ ಶಸ್ತ್ರಚಿಕಿತ್ಸೆಗೊಳಗಾಗಿದ್ದರೂ ಒಂದೂವರೆ ವರ್ಷದ ಬಳಿಕ ಸದ್ಗುರು ಜಗ್ಗಿ ವಾಸುದೇವ್ ಅವರು ಬೈಕ್ನಲ್ಲಿ ಕೈಲಾಸ ಯಾತ್ರೆಯನ್ನು (Kailash Yatra) ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಶನಿವಾರ ಕೊಯಮತ್ತೂರಿನ ಇಶಾ ಯೋಗ ಕೇಂದ್ರಕ್ಕೆ ಆಗಮಿಸಿದ ಅವರನ್ನು ಭಕ್ತರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪವಿತ್ರ ಯಾತ್ರೆಗಳಲ್ಲಿ ಕೈಲಾಸ ಯಾತ್ರೆ ಕೂಡ ಒಂದೆಂದು ಪರಿಗಣಿಸಲಾಗುತ್ತದೆ. ಈ ಯಾತ್ರೆಯನ್ನು ಪೂರ್ಣಗೊಳಿಸುವವರನ್ನು ಅತ್ಯಂತ ಗೌರವದಿಂದ ಕಾಣಲಾಗುತ್ತದೆ. ಅದರಂತೆ ನಿನ್ನೆ ಆಗಮಿಸಿದ ಸದ್ಗುರು ಅವರನ್ನು ಸ್ವಾಗತಿಸಲು ಸಾವಿರಾರು ಜನರು ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದರು.
ಇದು ಯೋಗಕ್ಕಿರುವ ಶಕ್ತಿ: ಸದ್ಗುರು
ಮೆದುಳಿನ ಎರಡೆರಡು ಶಸ್ತ್ರಚಿಕಿತ್ಸೆ ಮತ್ತು ವೃದ್ಧಾಪ್ಯದ ಹೊರತಾಗಿಯೂ ಬೈಕ್ನಲ್ಲಿ ಕೈಲಾಸ ಯಾತ್ರೆಯನ್ನು ಮಾಡುವ ಮೂಲಕ ಸದ್ಗುರು ಅವರು ಮಹತ್ವದ ಸಾಧನೆ ಮಾಡಿದ್ದಾರೆ. ಈ ವಿಚಾರವಾಗಿ ಅವರು ಕೊಯಮತ್ತೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದು, ‘ವೈದ್ಯರ ಪ್ರಕಾರ, ನಾನು ಬೈಕ್ ಸವಾರಿ ಮಾಡಬಾರದಿತ್ತು, ಆದರೂ ನಾನು ಸಮುದ್ರ ಮಟ್ಟದಿಂದ 18 ಸಾವಿರ ಅಡಿ ಎತ್ತರಕ್ಕೆ ಹೋಗಿದ್ದೇನೆ. ಇದು ಯೋಗಕ್ಕಿರುವ ಶಕ್ತಿ’ ಎಂದು ಅವರು ಹೇಳಿದ್ದಾರೆ.‘ಯೋಗ ಎಂದರೆ ನಮ್ಮೆಲ್ಲರೊಳಗಿರುವ ಸೃಷ್ಟಿಯ ಮೂಲದೊಂದಿಗೆ ಒಂದಾಗುವುದು. ಅದು ಪ್ರತಿಯೊಬ್ಬರೊಳಗಿರುತ್ತದೆ. ಆದ್ದರಿಂದ ನೀವು ಸೃಷ್ಟಿಯ ಮೂಲದೊಂದಿಗೆ ಸಂಪರ್ಕದಲ್ಲಿರುವಾಗ, ಇದು ಒಂದು ಸವಾಲಲ್ಲ. ಈ ಯಾತ್ರೆಯನ್ನು ನಾನು ಸಲೀಸಾಗಿ ಮಾಡಿದ್ದೇನೆ’ ಎಂದಿದ್ದಾರೆ.ಆಗಸ್ಟ್ 9 ರಂದು ಉತ್ತರ ಪ್ರದೇಶದ ಗೋರಖ್ಪುರದಿಂದ ಸದ್ಗುರು ಬೈಕ್ನಲ್ಲಿ ತಮ್ಮ ಯಾತ್ರೆಯನ್ನು ಪ್ರಾರಂಭಿಸಿದರು. ಅಲ್ಲಿಂದ ಅವರು ಕಠ್ಮಂಡು, ಭಕ್ತಪುರ ಮತ್ತು ನೇಪಾಳದ ತುಲಿಕೇಲ್ ಮೂಲಕ ಪ್ರಯಾಣಿಸಿ ಟಿಬೆಟ್ ಗಡಿಯನ್ನು ತಲುಪಿದರು.ನಂತರ ಅವರು ಟಿಬೆಟ್ನ ಜಾಂಗ್ಮು, ನ್ಯಾಲಂ ಮತ್ತು ಸಾಗಾ ಮೂಲಕ ಮಾನಸ ಸರೋವರವನ್ನು ತಲುಪಿದರು. ಅಲ್ಲಿಂದ ಅವರು ಕೈಲಾಸ ಪರ್ವತದ ದರ್ಶನ ಪಡೆಯಲು ಪಾದಯಾತ್ರೆ ಕೈಗೊಂಡಿದ್ದರು. 15 ರಿಂದ 20 ಸಾವಿರ ಅಡಿ ಎತ್ತರದ ಪ್ರದೇಶವಾಗಿದ್ದು, ಈ ಮಾರ್ಗದಲ್ಲಿ ಭೂಕುಸಿತ, ನಿರಂತರ ಮಳೆ, ಒರಟಾದ ಭೂಪ್ರದೇಶವಾಗಿತ್ತು. ಇನ್ನು ಈ ಯಾತ್ರೆ ವೇಳೆ ಸದ್ಗುರುಗಳನ್ನು ಸ್ವಾಗತಿಸಲು ಸ್ಥಳೀಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







