ತುಮಕೂರು: ಅಕ್ಟೋಬರ್ ನಲ್ಲಿ ಕ್ರಾಂತಿ ಆಗುತ್ತೆ ಎಂದು ಹೇಳಿಕೆ ನೀಡುವ ಮೂಲಕ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಸಚಿವ ಕೆ.ಎನ್ ರಾಜಣ್ಣ ಈಗ ಮತ್ತೆ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ. ಹೌದು ನಿನ್ನೆ ತುಮಕೂರಿನಲ್ಲಿ ಮಾತನಾಡಿದ ರಾಜಣ್ಣ ಮುಂದೆ ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆ ಆಗ್ತಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಸತೀಶ್ ಜಾರಕಿಹೊಳಿ ಪಕ್ಷದಲ್ಲಿ ಹಿರಿಯ ಹಾಗೂ ಅನುಭವಿ ರಾಜಕಾರಣಿ ಪಕ್ಷದ ಅಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ಇನ್ನಷ್ಟು ಬಲ ತರುವ ಶಕ್ತಿ ಅವರಿಗಿದೆ ಎಂದು ಸತೀಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಇನ್ನು ನಾನು ಕ್ರಾಂತಿ ಆಗುತ್ತದೆ ಎಂದು ಹೇಳಿದ್ದೇನೆ. ಅದನ್ನು ಎಲ್ಲರೂ ಬೇರೆಯದೇ ಅರ್ಥ ಮಾಡಿಕೊಂಡಿದ್ದಾರೆ. ಕ್ರಾಂತಿ ಎಂದರೆ ಏನು, ದೇಶದಲ್ಲಿ ಎಷ್ಟೆಲ್ಲ ಕ್ರಾಂತಿಗಳು ಆಗಿವೆ. ಹಸಿರು ಕ್ರಾಂತಿ ಆಗಿಲ್ವ, ಅದೇ ರೀತಿ ರಾಜಕೀಯ ಕ್ರಾಂತಿ ಸಹ ಆಗುತ್ತದೆ. ಅದು ಬಿಜೆಪಿ ಪಕ್ಷದಲ್ಲಿ ಕ್ರಾಂತಿ ಆಗಬಹುದು. ಬಿಜೆಪಿ ಪಕ್ಷದಲ್ಲಿ 75 ವರ್ಷ ದಾಟಿದವರು ಪಕ್ಷದ ಅಧಿಕಾರದಲ್ಲಿ ಇರಲು ಒಪ್ಪುವುದಿಲ್ಲ. ಅದರಂತೆ ಅಡ್ವಾಣಿ ಅವರನ್ನ ಕೆಳಗಿಳಿಸಿದರು.
ಅದೇ ರೀತಿ ಹಿರಿಯ ಬಿಜೆಪಿ ನಾಯಕರನ್ನು ಕೆಳಗಿಳಿಸುವ ಮೂಲಕ ಕ್ರಾಂತಿ ಆಗಬಹುದು ಎಂದು ಹೇಳಿದ್ದೇನೆ ಎಂದು ಹೇಳಿದರು. ಇನ್ನು ಪಕ್ಷದಲ್ಲಿ ಸಚಿವ ಸಂಪುಟ ಬದಲಾವಣೆ, ಸಿಎಂ ಬದಲಾವಣೆ ಅಂತೆಲ್ಲ ಹೇಳ್ತಿದ್ದಾರೆ. ಅದೆಲ್ಲ ಈಗ ಸದ್ಯಕ್ಕೆ ಆಗಲ್ಲ, ಆದರೂ ಸಣ್ಣ ಪುಟ್ಟ ಬದಲಾವಣೆ ಆಗುತ್ತದೆ ಎಂದು ತಮ್ಮ ಕ್ರಾಂತಿ ಹೇಳಿಕೆಗೆ ಸ್ಪಷ್ಟನೆ ನೀಡಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



