ಚಿತ್ರದುರ್ಗ: ನಗರದ ಧರ್ಮ ಶಾಲಾ ರಸ್ತೆಯಲ್ಲಿನ ಪಾರ್ಶ್ವನಾಥ ವಿದ್ಯಾಸಂಸ್ಥೆಯ ವತಿಯಿಂದ ಶನಿವಾರ ಪ್ಲೇಹೊಂ, ಎಲ್.ಕೆ.ಜಿ. ಮತ್ತು ಯು.ಕೆ.ಜಿ. ವಿದ್ಯಾರ್ಥಿಗಳಿಂದ ಕೃಷ್ಣಜನ್ಮಾಷ್ಠಮಿ ಹಬ್ಬದ ಪ್ರಯುಕ್ತ ಕೃಷ್ಣ, ರಾಧೆಯರ ವೇಷ ಭೂಷಣ ಹಾಕುವ ಮೂಲಕಕೃಷ್ಣ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.ಈ ಸಂದರ್ಭದಲ್ಲಿ ಶಾಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಮಕ್ಕಳು ಕೃಷ್ಣ ರಾಧೆಯವರ ವೇಷಭೂಷಣವನ್ನು ಹಾಕುವುದರ ಮೂಲಕಜನ್ಮಾಷ್ಠಮಿಗೆ ಮೆರಗನ್ನು ನೀಡಿದರು.ಈ ಸಮಯದಲ್ಲಿ ಶಾಲೆಯ ಅಧ್ಯಕ್ಷರಾದ ಬಾಬುಲಾಜಿ ಕಾರ್ಯದರ್ಶಿ ಸುರೇಶ್ ಕುಮಾರ್ ಸಿಸೋಡಿಯ ಮುಖ್ಯೋಪಾಧ್ಯಯರು,ಭೋಧಕ ಹಾಗೂ ಭೋದಕೇತರ ಸಿಬ್ಬಂದಿಗಳು. ಪೋಷಕರು ಹಾಗೂ ತೀರ್ಪುಗಾರರಾದ ಬಿಜೆಎಸ್ ಸಂಸ್ಥೆಯ ಮಹಿಳಾ ಘಟಕದಅಧ್ಯಕ್ಷರಾದ ಜಯಶ್ರೀ ಷಾ, ಕಾರ್ಯದರ್ಶಿ ಸುಮಿತ್ರಾ ಭಾಗವಹಿಸಿದ್ದರು. ಈ ವೇಷ ಭೂಷಣದಲ್ಲಿ ಭಾಗವಹಿಸಿದ್ದ ಉತ್ತಮವಾದ ಮಕ್ಕಳಿಗೆ ಬಹುಮಾನವನ್ನು ವಿತರಣೆ ಮಾಡಲಾಯಿತು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







