ರಾಮನಗರ ಜಿಲ್ಲಾ ಪ್ರಧಾನ ನ್ಯಾಯಾಧೀಶರಾದ ಅವಿನಾಶ್ ಅವರು ಯಶೋದಮ್ಮ ಎಂಬ ಮಹಿಳೆಯ ಪಾಡು ನೋಡಲಾರದೆ ಆಕೆ ಇದ್ದಲ್ಲಿಗೆ ಬಂದು ವಿಚಾರಣೆ ನಡೆಸಿ ನ್ಯಾಯ ಒದಗಿಸಿದ ಅಪರೂಪದ ಮಾನವೀಯತೆ ಘಟನೆ ರಾಮನಗರದಲ್ಲಿ ನಡೆದಿದೆ. ಯಶೋದಮ್ಮ ಎಂಬ ಮಹಿಳೆಯ ತಂದೆ ಅಪಘಾತದಲ್ಲಿ ಮೃತಪಡಿಸಿದ್ದರು. ಅದೇ ಪ್ರಕರಣದಲ್ಲಿ ಪರಿಹಾರ ಪಡೆಯಲು ನ್ಯಾಯಾಲಯಕ್ಕೆ ಬಂದಾಗ, ನ್ಯಾಯಾಲಯದ ಒಳಗಡೆ ಮೆಟ್ಟಿಲು ಹತ್ತಿಕೊಂಡು ಹೋಗಲು ಅವರು ಅನುಭವಿಸುತ್ತಿದ್ದ ಕಾಲಿನ ನೋವಿನ ತೀವ್ರ ಬಾಧೆ ಅನುವು ಮಾಡಿಕೊಡಲಿಲ್ಲ. ಆದ್ದರಿಂದ ಅವರು ನೋಟರಿ ಕಾರ್ಯಾಲಯದ ಹೊರಗೆ ಕುಳಿತುಕೊಂಡಿರುವ ವಿಚಾರ ತಿಳಿದ ನ್ಯಾಯಾಧೀಶರು, ನ್ಯಾಯಾಲಯದಿಂದ ಹೊರಗಡೆ ಬಂದು ಆಕೆ ಕುಳಿತಲ್ಲೇ ಮಾತನಾಡಿಸಿ, ಅಲ್ಲಿಯೇ ವಿಚಾರಣೆ ನಡೆಸಿ, ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಆಕೆಗೆ ಬರಬೇಕಾಗಿದ್ದ ₹ 10 ಲಕ್ಷ ಗಳನ್ನು ಬಿಡುಗಡೆ ಮಾಡಲು ಆದೇಶ ನೀಡಿದ್ದಾರೆ. ನ್ಯಾಯಾಧೀಶರ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



