ಬದಲಾದ ಜೀವನಶೈಲಿ, ಆಹಾರದಲ್ಲಿ ವ್ಯತ್ಯಾಸ, ಅತಿಯಾದ ಮಾನಸಿಕ ಒತ್ತಡ ಸೇರಿದಂತೆ ಆರೋಗ್ಯದಲ್ಲಿ ಏರುಪೇರಾದಾಗ ನರಗಳ ಮೇಲೆ ಪರಿಣಾಮ ಬೀರುವ ಮೂಲಕ ಮೈಗ್ರೇನ್ ಕಾಣಿಸಿಕೊಳ್ಳುತ್ತದೆ.ಅರ್ಧ ತಲೆನೋವಿನಿಂದ ಕಾಟ ಕೊಡುವ ಮೈಗ್ರೇನ್ಗೆ ಶಾಶ್ವತ ಪರಿಹಾರವಿಲ್ಲ. ಆದರೆ ಮನೆಮದ್ದಿನ ಮೂಲಕ ಅದನ್ನು ನಿಯಂತ್ರಿಸಬಹುದು. ಆ ಬಗ್ಗೆ ಇಲ್ಲಿದೆ ನೋಡಿ ಸಲಹೆ.
ಶುಂಠಿಯ ಬಳಕೆ
ಮೈಗ್ರೇನ್ ಸೇರಿದಂತೆ ಹಲವು ಪರಿಸ್ಥಿತಿಗಳಿಂದ ಉಂಟಾಗುವ ವಾಕರಿಕೆಯನ್ನು ಶುಂಠಿ ಶಮನ ಮಾಡುತ್ತದೆ. ಅಧ್ಯಯನಗಳೂ ಕೂಡ ಇದನ್ನು ಸಾಬೀತುಪಡಿಸಿದೆ. ಹೀಗಾಗಿ ಶುಂಠಿ ನಿಮ್ಮ ಅರ್ಧ ತಲೆನೋವಿನ ನಿವಾರಣೆಗೆ ಬೆಸ್ಟ್ ಮನೆಮದ್ದಾಗಿದೆ.ಶುಂಠಿಯ ರಸ ಅಥವಾ ಶುಂಠಿ ಟೀಯನ್ನು ಮಾಡಿ ಸೇವನೆ ಮಾಡಿದರೆ ಬಹಳ ಬೇಗ ಮೈಗ್ರೇನ್ ತಲೆನೋವು ಕಡಿಮೆಯಾಗುತ್ತದೆ.
ನಿದ್ದೆ ಮಾಡಿ
ನಿದ್ದೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿದೆ. ಮೈಗ್ರೇನ್ ಒಂದು ನರಕ್ಕೆ ಸಂಬಂಧಿಸಿದ ಸಮಸ್ಯೆಯಾಗಿರುವುದರಿಂದ ನಿದ್ದೆ ಅದಕ್ಕೆ ಅತ್ಯುತ್ತಮ ಪರಿಹಾರವಾಗಿದೆ.ಮೈಗ್ರೇನ್ ತಲೆನೋವು ಬಂದ ಸಂದರ್ಭದಲ್ಲಿ ಕಡಿಮೆ ಬೆಳಕಿರುವ ಜಾಗದಲ್ಲಿ ಮಲಗಿ ನಿದ್ದೆ ಮಾಡಿ. ಇದರಿಂದ ನರಗಳು ಶಾಂತವಾಗಿ ತಲೆನೋವು ಶಮನವಾಗುತ್ತದೆ.
ಮಸಾಜ್ ಮಾಡಿಕೊಳ್ಳಿ
ತಲೆನೋವಿನ ಸಮಯದಲ್ಲಿ ಮೃದುವಾದ ಮಸಾಜ್ ಹೆಚ್ಚು ರಿಲೀಫ್ ಸಿಗುತ್ತದೆ. ಹೀಗಾಗಿ ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ. ಹೆಚ್ಚು ಸುವಾಸನೆ ಇರದ ಎಣ್ಣೆಯನ್ನು ತಲೆಗೆ ಹಾಕಿಕೊಳ್ಳಿ. ಇದರಿಂದ ನರಗಳು ಕೂಲ್ ಆಗುತ್ತವೆ.ಇದರಿಂದ ತಲೆನೋವು ಸುಲಭವಾಗಿ ನಿಧಾನವಾಗುತ್ತದೆ. ಆದ್ದರಿಂದ ಮಸಾಜ್ ಮಾಡಿಕೊಳ್ಳುವುದು ಸರಳ ಮನೆಮದ್ದಾಗಿದೆ.
ಹೀಗೆ ಮಾಡಿ…
ಮೈಗ್ರೇನ್ ತಲೆನೋವು ಬಂದಾಗ ದೇಹ ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ. ಆದಷ್ಟು ನೀರನ್ನು ಸೇವಿಸಿ. ಮಾನಸಿಕವಾಗಿ ಒತ್ತಡವಾಗದಂತೆ ನೋಡಿಕೊಳ್ಳಿ. ಇದರಿಂದ ತಲೆನೋವು ಬೇಗನೆ ನಿವಾರಣೆಯಾಗುತ್ತದೆ.ಇನ್ನು ಸೊಪ್ಪು, ತರಕಾರಿಗಳನ್ನು ಸೇವಿಸಿ. ಇದರಿಂದ ನರಗಳ ಆರೋಗ್ಯ ಉತ್ತಮವಾಗಿರುತ್ತದೆ. ಅಲ್ಲದೆ ಆಂಟಿಆಕ್ಸಿಡೆಂಟ್ಗಳು ದೊರೆಯುವುದರಿಂದ ರಕ್ತ ಸಂಚಾರ ಉತ್ತಮವಾಗಿ ತಲೆನೋವು ನಿವಾರಣೆಯಾಗುತ್ತದೆ.ಅದರ ಜೊತೆಗೆ ಪ್ರತಿದಿನ ನೆನೆಸಿದ ಬಾದಾಮಿ, ಒಣದ್ರಾಕ್ಷಿಯನ್ನು ಸೇವನೆ ಮಾಡುತ್ತಿರಿ. ಇದು ಆರಂಭಿಕ ಹಂತದಲ್ಲಿ ಮೈಗ್ರೇನ್ ಇದ್ದರೆ ಶಮನವಾಗುತ್ತದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







