ನವದೆಹಲಿ: 35 ಅತ್ಯಗತ್ಯ ಔಷಧಿಗಳ ಬೆಲೆಯನ್ನು ಕಡಿಮೆಗೊಳಿಸಿರುವುದಾಗಿ ರಾಸಾಯನಿಕ ಸಚಿವಾಲಯ ಘೋಷಿ ಸಿದೆ. ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರ ಹೊರಡಿಸಿದ ಬೆಲೆ ನಿಗದಿ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು, ಇದರಿಂದ ಅನಾರೋಗ್ಯದಿಂದ ಲುತ್ತಿರುವವರಿಗೆ ಅನುಕೂಲ ವಾಗಲಿದೆ. ಬಳ
ಯಾವ್ಯಾವ ಔಷಧಿಗಳಿಗೆ ಅನ್ವಯ..?
ಸಾಮಾನ್ಯ ಆರೋಗ್ಯ ಸಮಸ್ಯೆಗಳಾದ ಉರಿ ಯೂತ, ಹೃದ್ರೋಗ, ಮಧುಮೇಹ ಮತ್ತು ಮಾನಸಿಕ ರೋಗಗಳಿಂದ ಬಳಲು ತ್ತಿರುವವರು ನಿಯಮಿತವಾಗಿ ಸೇವಿಸುವ ಔಷಧಿ ಬೆಲೆ ಇಳಿಕೆ ಮಾಡಲಾಗಿದೆ.
ಕ್ಲೋಫೆನಾಕ್, ಪಾರಸಿಟಮಾಲ್ ಮತ್ತು ಟ್ರಿಪ್ಲಿನ್ ಕೈಮೊಟ್ರಿಪ್ಪಿನ್ ಅಂಶಗಳುಳ್ಳ, ಕುಮ್ಸ್ ಡ್ರಗ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ತಯಾರಿಸಿ ಡಾ. ರೆಡೀಸ್ ಲ್ಯಾಬೋರೇಟರೀಸ್ ಮಾರಾಟ ಮಾಡುವ ಔಷಧಿಗೆ 13 2. ಕ್ಯಾಡಿಲಾ ಫಾರ್ಮಾಸ್ಯುಟಿಕಲ್ಸ್‌ನ ಅದೇ 15.01 2. ನಿಗದಿಪಡಿಸಲಾಗಿದೆ.ಹೃದಯ ಸಂಬಂಧಿ ಕಾಯಿಲೆಗಳಿಗೆ ಬಳಸುವ ಅಟೋರ್ವಾಸ್ಟಾಟಿನ್ (40 ಮಿಗ್ರಾಂ) ಮತ್ತು ಕ್ಲೋಪಿಡೋಗ್ರೆಲ್ (75 ಮಿಗ್ರಾಂ)ಗೆ 25.61 ರು. ಆಗಿದೆ. ಮಕ್ಕಳಿಗೆ ಕೊಡುವ ದ್ರವ ರೂಪದ ಮದ್ದುಗಳು, ವಿಟಮಿನ್-ಡಿ ಕೊರತೆ ನೀಗಿಸುವ ಔಷಧಿಗಳಿಗೆ ಪ್ರತಿ ಮಿಲಿಗೆ 31.77 ರು. ಆಗಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



