ಚಿತ್ರದುರ್ಗ : ರಾಜಕಾರಣಿಗಳ ಉದ್ದಟತನ, ಅಧಿಕಾರಿಗಳ ಕಮಿಷನ್ ದಂಧೆಯಿಂದ ಎಗ್ಗಿಲ್ಲದೆ ನಡೆಯುತ್ತಿರುವ ಗಣಿ ಮಾಫಿಯ ನಿಲ್ಲಿಸಿ ಪರಿಸರ ರಕ್ಷಿಸಿ ಗಣಿ ಬಾದಿತ ಪರಿಸರ ಮತ್ತು ಜನ ಬದುಕಿನ ಪುನಶ್ಚೇತನ ಹೋರಾಟದಿಂದ ಆ.16 ರ ಬೆಳಿಗ್ಗೆ 10 ರಿಂದ ಬಳ್ಳಾರಿಯಲ್ಲಿರಾಜ್ಯ ಸಮಾವೇಶ ನಡೆಯಲಿದೆ ಎಂದು ಜನಾಂದೋಲನಗಳ ಮಹಾ ಮೈತ್ರಿ ಮತ್ತು ಜನ ಸಂಗ್ರಾಮ ಪರಿಷತ್‍ನ ಸ್ಥಾಪಕ ಅಧ್ಯಕ್ಷಎಸ್.ಆರ್.ಹಿರೇಮಠ್ ತಿಳಿಸಿದರು.ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಗಾಲಿ ಜನಾರ್ಧನರೆಡ್ಡಿರವರ ಉದ್ದಟತನದಿಂದಬಳ್ಳಾರಿ, ವಿಜಯಪುರ, ಚಿತ್ರದುರ್ಗ, ತುಮಕೂರಿನಲ್ಲಿ ಗಣಿ ಮಾಫಿಯ ತಲೆ ಎತ್ತಿದೆ. ಇದರಿಂದ ಬಡವರು ಗೌರವಯುತವಾಗಿ ಜೀವನನಡೆಸಲು ಆಗುತ್ತಿಲ್ಲ. ಪರಿಸರ ಹಾಳಾಗಿದೆ. ನಿರಂತರ ಅಕ್ರಮ ಗಣಿಗಾರಿಕೆಯಿಂದ ಪ್ರಕೃತಿ ಪರಿಸರದ ಮೇಲುಂಟಾಗುವದುಷ್ಪರಿಣಾಮಗಳ ಬಗ್ಗೆ ಸಲ್ಲಿಕೆಯಾಗಿರುವ ವರದಿಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಸೆಂಟ್ರಲ್ ಎಂಪವರ್‍ಮೆಂಟ್ ಕಮಿಟಿಯನ್ನುನೇಮಿಸಿತು. ಅಕ್ರಮ ಗಣಿಗಾರಿಕೆ ಪರಿಣಾಮ ಅಗಾಧತೆ ಹಾಗೂ ಗಂಭೀರತೆಯನ್ನು ಅರ್ಥಮಾಡಿಕೊಂಡು ಗಣಿ ಬಾಧಿತ ಪ್ರದೇಶದಪರಿಸರ ಪುನಶ್ಚೇತನ ಯೋಜನೆ ಅನ್ವಯ ವಿಶೇಷ ಆದ್ಯತೆಯ ನಿಧಿ ಸ್ಥಾಪಿಸುವಂತೆ ಸಿಇಸಿ. ಶಿಫಾರಸ್ಸು ಮಾಡಿತು. 2013 ರಲ್ಲಿಸುಪ್ರೀಂಕೋರ್ಟ್ ಇದನ್ನು ಸಮ್ಮತಿಸಿ ತೀರ್ಪು ನೀಡಿತ್ತು ಎಂದು ಹೇಳಿದರು.
ಹೊಸದಾಗಿ ಕುದುರೆಮುಖ, ಭದ್ರಾವತಿ ಉಕ್ಕು ಕಾರ್ಖಾನೆ, ಜಿಂದಾಲ್, ವೇದಾಂತ ಇನ್ನಿತರೆ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದಕಂಪನಿಗಳಿಗೆ ಗಣಿಗಾರಿಕೆ ಪರವಾನಗಿ ನೀಡಬಾರದು. ಸಂಡೂರಿನ ದೇವದಾರಿ, ರಾಮಘಡ ಮತ್ತು ತುಮಕೂರಿನ ಸಾರಂಗಪಾಣಿಹಾಗು ಇನ್ನಿತರೆ ಕಡೆ ಲಕ್ಷಾಂತರ ಮರಗಳನ್ನು ಕಡಿದು ಎಬಿಸಿ. ವರ್ಗದ 18 ಗಣಿಗಳನ್ನು ಒಟ್ಟುಗೂಡಿಸಿ 3 ಗಣಿ ಬ್ಲಾಕ್ಲ್‍ಗಳನ್ನಾಗಿಮಾಡಿ ವಿತರಿಸುವುದನ್ನು ನಿಲ್ಲಿಸಬೇಕು. ಸುಪ್ರೀಂಕೋರ್ಟ್ ನಿರ್ದೇಶನದಂತೆ ಖನಿಜ ಸಂಪನ್ಮೂಲಗಳು ಮುಂದಿನ ಪೀಳಿಗೆಗೆಸಂರಕ್ಷಣೆ ಮಾಡುವ ಹಿನ್ನೆಲೆಯಲ್ಲಿ ಗಣಿಗಾರಿಕೆಯನ್ನು ವಾರ್ಷಿಕ 20 ಮಿಲಿಯನ್ ಮೆ.ಟನ್‍ಗೆ ಮಿತಿಗೊಳಿಸಬೇಕು. ಗಣಿಭಾಧಿತಜಿಲ್ಲೆಗಳ ಅಭಿವೃದ್ದಿ ಹಾಗೂ ಜನ ಬದುಕಿನ ಪುನಶ್ಚೇತನಕ್ಕೆ ಗ್ರಾಮ ಸಭೆಗಳನ್ನು ನಡೆಸಿ ಜನರ ಅಹವಾಲುಗಳನ್ನು ಆಲಿಸಿ ವೈಜ್ಞಾನಿಕನೀಲಿ ನಕಾಶೆಯನ್ನು ತಯಾರಿಸಬೇಕೆಂದು ಒತ್ತಾಯಿಸಿದರು.
ಎಲೆಕ್ಟ್ರೋಲ್ ಬಾಂಡ್‍ನಿಂದ ಬಿಜೆಪಿ.ಗೆ ಆರು ಸಾವಿರ ಕೋಟಿ ರೂ.ಗಳುಬಂದಿದೆ.ಗಾಲಿಜನಾರ್ಧನರೆಡ್ಡಿ,ಬಿ.ಎಸ್.ಯಡಿಯೂರಪ್ಪ,ಕರುಣಾಕರರೆಡ್ಡಿ,ಶ್ರೀರಾಮುಲು ಇವರುಗಳು ಅಧಿಕಾರ ಕಳೆದುಕೊಂಡರು. ಮುಂದೆ ಪ್ರಧಾನಿ ಮೋದಿ, ನಿರ್ಮಲ ಸೀತಾರಾಮನ್ಇವರುಗಳು ಅಧಿಕಾರ ಕಳೆದುಕೊಳ್ಳಲಿದ್ದಾರೆ. ನಾನು ಮತ್ತು ಪ್ರಶಾಂತ್ ಭೂಷಣ್ ಸೇರಿಕೊಂಡು ಅಕ್ರಮ ಗಣಿಗಾರಿಕೆ ನಿಲ್ಲುವತನಕಬಿಡಲ್ಲ. ಸಂಸತ್‍ನಲ್ಲಿ ಶೇ.20 ರಷ್ಟು ಕ್ರಿಮಿನಲ್‍ಗಳಿದ್ದರು. ಈಗ ಅದು ಶೇ.40 ಕ್ಕೆ ಏರಿದೆ. ಚಿತ್ರದುರ್ಗದಲ್ಲಿ ಸಮಿತಿ ನಿಶ್ಯಕ್ತವಾಗಿದೆ.ಮುಂದಿನ ದಿನಗಳಲ್ಲಿ ಬಲಪಡಿಸಲಾಗುವುದೆಂದರು.
ಕೆ.ವಿ.ಭಟ್, ಸರ್ವೋದಯ ಕರ್ನಾಟಕ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ, ಅಭಿರುಚಿ ಗಣೇಶ್, ರೈತ ಮುಖಂಡರುಗಳಾದ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



