ಹೊಳಲ್ಕೆರೆ : ಯಾವ ಊರಿಗೆ ಏನು ಕೆಲಸ ಮಾಡಿದರೆ ಜನರಿಗೆ ಒಳ್ಳೆಯದಾಗುತ್ತದೆನ್ನುವ ಅರಿವಿಟ್ಟುಕೊಂಡು ಕ್ಷೇತ್ರದ ಅಭಿವೃದ್ದಿಗೆಹಗಲು-ರಾತ್ರಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ಮಳೆ ಬಾರದ ಹಿನ್ನಲೆ ತಾಳಿಕಟ್ಟೆ ಗ್ರಾಮದಲ್ಲಿ ಶನಿವಾರ ಗಂಗೆ ಪೂಜೆ ನೆರವೇರಿಸಿ ಮಾತನಾಡಿ,ನ್ಯಾಯ, ನೀತಿ, ಧರ್ಮ ರಾಜಕಾರಣಿಗಳಿಗಿರಬೇಕು. ಸಾರ್ವಜನಿಕರ ಬದುಕನ್ನು ಸ್ವಂತ ಬದುಕೆಂದು ತಿಳಿದು ಕೆಲಸ ಮಾಡಬೇಕು ಎಂದರು.
ಎಂಟತ್ತು ಲಕ್ಷ ರೂ.ವೆಚ್ಚದಲ್ಲಿ ಬೀರಪ್ಪನಗುಡಿ ಕಟ್ಟಿಸಿದ್ದೇನೆ. ಹತ್ತು ಕೋಟಿ ರೂ.ವೆಚ್ಚದಲ್ಲಿ ರಸ್ತೆ ಮಾಡಿಸಿದ್ದೇನೆ. ಎರಡುವರೆ ಮೂರುಕೋಟಿ ರೂ.ಗಳಲ್ಲಿ ಆಸ್ಪತ್ರೆ ಕಟ್ಟಿಸಿದ್ದೇನೆ. ಗಂಗಸಮುದ್ರದಲ್ಲಿ ಸಮಸ್ಯೆಯಿದೆ ಅದನ್ನು ಕೂಡ ಬಗೆಹರಿಸುವ ಭರವಸೆ ನೀಡಿದರು.
ಡಿಸೆಂಬರ್ ಒಳಗೆ ತಾಲ್ಲೂಕಿನಾದ್ಯಂತ ಇರುವ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಆಸೆಯಿಟ್ಟುಕೊಂಡಿದ್ದೇನೆ. ರಾಮಗಿರಿ,
ಎನ್.ಜಿ.ಹಳ್ಳಿ, ಮಲ್ಲಾಡಿಹಳ್ಳಿ, ತಾಳ್ಯ, ತೇಕಲವಟ್ಟಿ, ಅರಿಶಿನಘಟ್ಟ ಗ್ರಾಮಗಳಲ್ಲಿ ವಿದ್ಯುತ್ ಪವರ್ ಸ್ಟೇಷನ್ ಕಟ್ಟಿಸಿದ್ದೇನೆ. ಇಷ್ಟಕ್ಕೆಸುಮ್ಮನಾಗಿಲ್ಲ. ಚಿಕ್ಕಜಾಜೂರಿನ ಕೋಟೆಹಾಳ್ ಬಳಿ ಐದುನೂರು ಕೋಟಿ ರೂ.ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ಕಟ್ಟಿಸುತ್ತಿದ್ದು,ಜೋಗ್‍ಫಾಲ್ಸ್‍ನಿಂದ ನೇರವಾಗಿ ಇಲ್ಲಿಗೆ ವಿದ್ಯುತ್ ಪೂರೈಕೆಯಾಗಲಿದೆ ಎಂದರು.
ಸಮುದಾಯ ಭವನ ಕಾಮಗಾರಿ ಮುಗಿದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕರೆಸಿ ಉದ್ಗಾಟನೆ ಮಾಡಿಸುತ್ತೇನೆ.
ಎಂಟು ಶಾಲೆಗಳನ್ನು ಈ ಗ್ರಾಮದಲ್ಲಿ ಕಟ್ಟಿಸಿದ್ದೇನೆ. ತಾಲ್ಲೂಕಿನಾದ್ಯಂತ 450 ರಿಂದ 500 ಕೆರೆ ಕಟ್ಟೆ, ಚೆಕ್‍ಡ್ಯಾಂಗಳನ್ನು ಕಟ್ಟಿಸಿದ್ದೇನೆ.
ಸಿ.ಸಿ.ರಸ್ತೆಯಾಗಿದೆ. ಯಾವುದೇ ಗದ್ದಲ ಗಲಾಟೆಯಿಲ್ಲದೆ ತೋಪು ಜಾತ್ರೆ ಮುಗಿದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೊಸದುರ್ಗ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡುತ್ತ ವಿನಾ ಕಾರಣ ರಾಜಕೀಯ
ಮಾಡುವುದು ಬೇಡ. ಅಭಿವೃದ್ದಿ, ಗ್ರಾಮನೀರಿನ ವಿಚಾರ ಬಂದಾಗ ಗ್ರಾಮಸ್ಥರೆಲ್ಲಾ ಒಂದಾಗಿ. ಶಾಸಕ ಎಂ.ಚಂದ್ರಪ್ಪನವರನ್ನು ಬಳಸಿಕೊಳ್ಳಿ. ಗ್ರಾಮಕ್ಕೆ ಏನು ಕೇಳಿದರೂ ಇಲ್ಲ
ಎನ್ನುವುದಿಲ್ಲ. ಅವರೊಬ್ಬ ಅಪರೂಪದ ಶಾಸಕ ಎಂದು ಶ್ಲಾಘಿಸಿದರು.
ಕೆರೆಗಳಿಗೆ ನೀರು ತುಂಬಿದರೆ ರೈತರು ಕೃಷಿ ಮಾಡಿ ಬದುಕು ಕಟ್ಟಿಕೊಳ್ಳುತ್ತಾರೆ. ತಾಳಿಕಟ್ಟೆ ಗ್ರಾಮದವರಿಗೆ ನೀರು ಸಿಕ್ಕರೆ ಏನು
ಬೇಕಾದರೂ ಬೆಳೆಯುವಷ್ಟು ಸಮರ್ಥರಿದ್ದಾರೆ. ಎಂಟು ಹೊಸ ಶಾಲಾ ಕೊಠಡಿಗಳನ್ನು ಕಟ್ಟಿಸಿದ್ದಾರೆ. ಈ ಗ್ರಾಮದ ಸರ್ಕಾರಿ
ಶಾಲೆಯಲ್ಲಿಯೇ ನಾನು ಓದಿದ್ದು, ಪ್ರೌಢಶಾಲೆ, ಪ್ರಾಥಮಿಕ ಶಾಲೆಗಳು ಅವ್ಯವಸ್ಥೆಯಲ್ಲಿವೆ. ಅಭಿವೃದ್ದಿಯಾಗಬೇಕು. ತಾಳಿಕಟ್ಟೆ
ಗ್ರಾಮಕ್ಕೆ ಪಿ.ಯು.ಕಾಲೇಜಿನ ಅವಶ್ಯಕತೆಯಿದೆ ಎಂದು ಶಾಸಕ ಡಾ.ಎಂ.ಚಂದ್ರಪ್ಪನವರ ಗಮನ ಸೆಳೆದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜಪ್ಪ, ಸದಸ್ಯರುಗಳಾದ ನೇತ್ರಮ್ಮ, ಆಶಾ, ಅನುಸೂಯಮ್ಮ, ಚಿತ್ತಮ್ಮ, ಶಿವಕುಮಾರ್,
ಕೆಂಚಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗಂಗಾಧರ್, ನಾಗರಾಜಪ್ಪ, ಚಿತ್ತಪ್ಪ, ರುದ್ರಸ್ವಾಮಿ, ರೇವಣ್ಣಯ್ಯ ಒಡೆಯರ್,ಕೆಂಚಪ್ಪ, ಚಂದ್ರಪ್ಪ, ನುಲೇನೂರು ಶೇಖರ್, ಚಿಕ್ಕಣ್ಣ, ಗೋವಿಂದಪ್ಪ, ಕೃಷ್ಣಮೂರ್ತಿ, ಚಂದ್ರಮೌಳಿ, ಹಳ್ಳಪ್ಪ ಹಾಗೂ ಗ್ರಾಮದಮುಖಂಡರುಗಳು ಈ ಸಂದರ್ಭದಲ್ಲಿ ಹಾಜರಿದ್ದರು
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



