ಮೊಳಕಾಲ್ಮುರು: ತಾಲೂಕಿನಲ್ಲಿ ಕಾಂಗ್ರೆಸ್ ಮುಖಂಡರ ಫ್ಲೆಕ್ಸ್ ರಾಜಕೀಯ ತಾರಾಕ್ಕೆರಿದ್ದು ಪಕ್ಷದ ಒಳಮುನಿಸು ತಿಕ್ಕಾಟ ಬೀದಿಗೆ ಬಂದು ನಿಂತಿದೆ. ನಿನ್ನೆಯಷ್ಟೇ ದ್ರಾಕ್ಷಿ ರಸ ಮಂಡಳಿಯ ನಿಗಮ ಅಧ್ಯಕ್ಷ ಡಾ. ಯೋಗೇಶ್ ಬಾಬು ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.ಅವರ ಹುಟ್ಟುಹಬ್ಬದ ಹಿನ್ನೆಯಲ್ಲಿ ಅವರ ಬೆಂಬಲಿಗರು ಪಟ್ಟಣದ ಮುಖ್ಯರಸ್ತೆಯಲ್ಲಿ ಸ್ಥಳೀಯ ಪಪಂನಿಂದ ಪರವಾನಿಗೆ ಪಡೆದು ಹುಟ್ಟುಹಬ್ಬದ ಶುಭ ಕೋರುವ ಫ್ಲೆಕ್ಸ್ ಹಾಕಿಸಿದ್ದರು.ಆದ್ರೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಫ್ಲೆಕ್ಸ್ ಗಳನ್ನು ಇಂದು ರಾತ್ರಿಯೇ ತೆರವುಗೊಳಿಸಿದ್ದಾರೆ, ಇದರಿಂದ ಆಕ್ರೋಶಗೊಂಡ ಡಾ.ಯೋಗೇಶ್ ಬಾಬು ತಮ್ಮ ಬೆಂಬಲಿಗರ ಸಮೇತವಾಗಿ ಆಗಮಿಸಿ ಪಟ್ಟಣ ಪಂಚಾಯಿತಿ ಮುಂದೆ ಅಹೋರಾತ್ರಿ ಧರಣಿ ನಡೆಸಿದ್ದಾರೆ.
ಪಪಂ ಅಧಿಕಾರಿಗಳು ಪುನ್ಹ ತೆರವುಗೊಳಿಸಿದ್ದ ಫ್ಲೆಕ್ಸ್ ಗಳನ್ನ ಕಟ್ಟಿಸಿ ಕ್ಷಮೆ ಕೇಳಿದ ನಂತರವೇ ಡಾ. ಯೋಗೇಶ್ ಬಾಬು ಪ್ರತಿಭಟನೆಯಿಂದ ಹಿಂದೆ ಸರಿದರು.ಒಟ್ಟಿನಲ್ಲಿ ಫ್ಲೆಕ್ಸ್ ನಲ್ಲಿ ಶಾಸಕರನ್ನು ಕಡೆಗಣಿಸಲಾಗಿದೆ ಎಂದು ದೂರುವ ಕೈ ಕಾರ್ಯಕರ್ತರು ಒಂದೆಡೆಯಾದರೆ ನಿಗಮ ಮಂಡಳಿ ಅಧ್ಯಕ್ಷರನ್ನು ಕಡೆಗಣಿಸಲಾಗಿದೆ ಎಂದು ದೂರುವ ಗುಂಪು ಇನ್ನೊಂದೆಡೆ, ಇದರ ಮಧ್ಯೆ ಯಾವ ಸಹವಾಸವೆ ಬೇಡವೆಂದು ತಟಸ್ತವಾಗಿರುವ ಕೈ ಪಾಳೆಯದ ಕಾರ್ಯಕರ್ತರು ಮಾತ್ರ ಅತಂತ್ರ ಸ್ಥಿತಿಯಲ್ಲಿದ್ದಾರೆ. ಕ್ಷೇತದಲ್ಲಿ ಶಾಸಕರು ಮತ್ತೆ ನಿಗಮ ಮಂಡಳಿ ಅಧ್ಯಕ್ಷರ ಮಧ್ಯೆ ಇರುವ ವೈಮನಸ್ಸು ಭಿನ್ನಮತ ಸ್ವತಃ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ತಲೆ ತರಿಸಿರುವುದಂತು ಸುಳ್ಳಲ್ಲ,
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



