ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಹಬ್ಬಗಳಿಗೆ ತನ್ನದೇ ಆದಂತಹ ವೈಶಿಷ್ಟ್ಯತೆಗಳಿವೆ. ಅದೇ ರೀತಿಯಾಗಿ ನಾಗರ ಪಂಚಮಿ ಹಬ್ಬಕ್ಕೂ ತನ್ನದೇ ಆದ ಅರ್ಥ ಹೊಂದಿದೆ. ಈ ಹಬ್ಬವನ್ನು ಭಾರತೀಯ ಹೆಣ್ಣು ಮಕ್ಕಳು ಸೇರಿದಂತೆ ಸಕುಟುಂಬ ಸಮೇತವಾಗಿ ನಾಗರ ಪಂಚಮಿ ಹಬ್ಬವನ್ನು ಭಕ್ತಿಯ ಜೊತೆ ಸಡಗರದಿಂದ ಆಚರಿಸಲಾಗುತ್ತದೆ. ಶ್ರಾವಣ ಮಾಸದ ಶುಕ್ಲ ಪಂಚಮಿಯಂದು ನಾಗರ ಹಬ್ಬವನ್ನು ಆಚರಿಸಲಾಗುತ್ತದೆ. ಹಬ್ಬದ ದಿನದಂದು, ಹೆಣ್ಣುಮಕ್ಕಳು ಸಹೋದರನ ಒಳಿತಿಗಾಗಿ ನಾಗ ದೇವತೆಯನ್ನು ಪೂಜಿಸುತ್ತಾರೆ ಮತ್ತು ಹುತ್ತಗಳಿಗೆ ಹಾಲು ಎರೆಯುವ ಪದ್ಧತಿ ರೂಢಿಯಲ್ಲಿದೆ.
ನಾಗರ ಪಂಚಮಿ ಹಬ್ಬ ಆಚರಣೆಯ ಬಗ್ಗೆ ಕೆಲವು ಮಾಹಿತಿ ನೋಡುವುದಾದರೆ
ನಾಗರ ಪಂಚಮಿಯ ದಿನ ನಾಗ ದೇವತೆಯನ್ನು ಪೂಜಿಸಲಾಗುತ್ತದೆ. ಹೆಣ್ಣುಮಕ್ಕಳು ಹುತ್ತಗಳಿಗೆ ಹಾಲು ತುಪ್ಪ ಎರೆದು ನಾಗ ದೇವತೆ ಎಲ್ಲರಿಗೂ ಒಳಿತು ಮಾಡುವಂತೆ ಪ್ರಾರ್ಥಿಸುತ್ತಾರೆ ಮತ್ತು ಸಹೋದರನ ಒಳಿತಿಗಾಗಿ ಪ್ರಾರ್ಥಿಸುತ್ತಾರೆ. ಇನ್ನು ಪೂಜೆ ಬಳಿಕ ತಾವು ಸಾಗುವ ದಾರಿಯುದ್ದಕ್ಕೂ ಸಕ್ಕರೆ ಅಥವಾ ಸಿಹಿಯಾದ ಅಳ್ಳುಗಳನ್ನೂ ಚೆಲ್ಲುತ್ತಾ ಹೋಗುತ್ತಾರೆ. ಕಾರಣ ಆ ಸಿಹಿಗೆ ಇರುವೆಗಳು ಸೇರಿದಂತೆ ಚಿಕ್ಕ ಕೀಟಗಳಿಗೆ ಆಹಾರ ತಿನ್ನಿಸಿದ ಭಾವನೆ ಬರುತ್ತದೆ ಎಂಬ ನಂಬಿಕೆ. ಅಂದು ಕೆಲ ಹೆಣ್ಣು ಮಕ್ಕಳಿಗೆ ಗಂಡನ ಮನೆಯಿಂದ ತವರು ಮನೆಗೆ ಕರೆದೊಯ್ಯಲು ಸಹೋದರ ಬರುವ ದಾರಿಗಾಗಿ ಕಾಯುವಿಕೆಯ ಬಗ್ಗೆ ನಮ್ಮ ಹಳ್ಳಿಯ ಜಾನಪದರು ತಮ್ಮದೇ ಶೈಲಿಯಲ್ಲಿ ಹಾಡಿ ಹೊಗಳಿದ್ದಾರೆ. ಹಬ್ಬದ ದಿನ ಇಡೀ ಊರಿನ ಮನೆಗಳಲ್ಲಿ ಸಿಹಿ ಊಟ ಮಾಡಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.
ಪ್ರಾಮುಖ್ಯತೆ
ನಾಗರ ಪಂಚಮಿಯು ಅಣ್ಣ, ತಂಗಿಯರ ಪ್ರೀತಿ ಮತ್ತು ಬಾಂಧವ್ಯವನ್ನು ಸೂಚಿಸುತ್ತದೆ. ನಾಗ ದೇವತೆಯ ಆರಾಧನೆಯಿಂದ ಸರ್ಪಭಯ ನಿವಾರಣೆಯಾಗುತ್ತದೆ ಎಂಬ ನಂಬಿಕೆಯೂ ಇದೆ.
ಆಚರಣೆ ವಿಧಾನ
ಈ ಹಬ್ಬದ ದಿನದಂದು, ನಾಗ ದೇವಸ್ಥಾನಗಳಿಗೆ ಭೇಟಿ ನೀಡಿ, ಹಾಲಿನ ನೈವೇದ್ಯವನ್ನು ಅರ್ಪಿಸಲಾಗುತ್ತದೆ. ಅಲ್ಲದೆ, ಹೆಣ್ಣುಮಕ್ಕಳು ಹೊಸ ಬಟ್ಟೆಗಳನ್ನು ಧರಿಸಿ, ಅಲಂಕಾರ ಮಾಡಿಕೊಂಡು ಸಡಗರ ಸಂಭ್ರಮದ ಜೊತೆಗೆ ಭಕ್ತಿಯಿಂದ ಹಬ್ಬವನ್ನು ಆಚರಿಸುತ್ತಾರೆ. ಜೊತೆಗೆ ಕೆಲವರು ಹಾವು ಹಾಲು ಕುಡಿಯುವುದಿಲ್ಲ ಎಂಬ ವಾದ ಒಂದೆಡೆಯಾದರೆ, ಮತ್ತೊಂದೆಡೆ ನಾಗದೇವತೆಗೆ ಹಾಲು ಎರೆಯುವುದು ಭಕ್ತಿಯ ಪ್ರತೀಕ ಹಾಗೂ ವಿಷದಿಂದ ಕೂಡಿದ ನಾಗರ ಹಾಲು ಕುಡಿದು ವಿಷ ಕಡಿಮೆಯಾಗಲಿ ಎಂಬ ಒಂದು ನಂಬಿಕೆಯಿದೆ ಎನ್ನುತ್ತಾರೆ ಹಿರಿಯರು.
ಶ್ರಾವಣ ಮಾಸ
ನಾಗರ ಪಂಚಮಿಯು ಶ್ರಾವಣ ಮಾಸದ ಹಬ್ಬಗಳಲ್ಲಿ ಬರುವ ಮೊದಲ ಹಬ್ಬವಾಗಿದೆ . ಈ ಮಾಸದಲ್ಲಿ ಬರುವ ಹಬ್ಬಗಳು ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವನ್ನು ಹೊಂದಿವೆ. ಎಲ್ಲಾ ಕಡೆ ಆಚರಿಸುವಂತೆ ನಾಗರ ಪಂಚಮಿಯನ್ನು ಕೋಟೆ ನಾಡು ಚಿತ್ರದುರ್ಗದಲ್ಲಿ ಸಹ ಸಂಪ್ರದಾಯದಂತೆ ವಿಜೃಂಭಣೆಯಿಂದ ಆಚರಿಸಲಾಗುವುದು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



