ಗ್ರಹಣ ಹಿಡಿದ ಭದ್ರಾ ಮೇಲ್ದಂಡೆಗೆ ಚಂದ್ರ ದರ್ಶನ
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಸುದೀರ್ಘ ಕಾಲ ಹಿಡಿದಿದ್ದ ಗ್ರಹಣವನ್ನು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯಿಂದ ನಿವಾರಣೆಯಾಗಿದೆ. ಶುಕ್ರವಾರ ದೆಹಲಿಯಲ್ಲಿ ನಡೆದ ತಾಂತ್ರಿಕ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಭದ್ರಾ ಮೇಲ್ದಂಡೆ ಪರಿಷ್ಕೃತ ಪ್ರಸ್ತಾವನೆಗೆ ಒಪ್ಪಿಗೆ ದೊರೆತಿದೆ.
ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವ ಸಂಕಲ್ಪ ಹೊತ್ತ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಯುಗಾದಿ ಹಬ್ಬವನ್ನು ಲೆಕ್ಕಿಸದೆ ಹಬ್ಬದ ಸಂದರ್ಭದಲ್ಲಿ 2ದಿನ ಮುಂಚಿತವಾಗಿ ದೆಹಲಿಗೆ ತೆರಳಿ ಸಂಬಂಧಪಟ್ಟ ಹಲವಾರು ರಾಷ್ಟ್ರೀಯ ನಾಯಕರು, ಕೇಂದ್ರ ಸಚಿವರುಗಳೊಂದಿಗೆ ಎಡಬಿಡದೆ ರಾಜ್ಯದ ಅನೇಕ ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ ಪರಿಣಾಮ ಭದ್ರಾ ಮೇಲ್ದಂಡೆ ಯೋಜನೆ ಪರಿಷ್ಕೃತ ಪ್ರಸ್ತಾವನೆಗೆ ತಾಂತ್ರಿಕ ನೀರಾವರಿ ಸಲಹಾ ಸಮಿತಿಯಲ್ಲಿ ಅನುಮೋದನೆ ದೊರತಿದೆ.
ಇನ್ನೂ 2 ಹಂತದಲ್ಲಿ ಅಂದರೆ ಪಬ್ಲಿಕ್ ಇನ್ವೆಸ್ಟ್ ಮೆಂಟ್ ಬೋರ್ಡ್ ( PIB) ಹಾಗೂ ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆಯಬೇಕಾಗಿದೆ. ಈ 2 ಹಂತಗಳಲ್ಲೂ ಸಹ ಸ್ವಾಮೀಜಿ ಕೇಂದ್ರ ಸರ್ಕಾರದ ಮೇಲೆ ಪ್ರಭಾವ ಬೀರಿ ತೀರ್ಮಾನ ಮಾಡಿಸುತ್ತಾರೆ ಎಂಬ ಭರವಸೆ ಇದೆ.
ಇನ್ನೂ ಯೋಜನಾ ವೆಚ್ಚದ ಶೇ.60 ಭಾಗ ಕೇಂದ್ರ ಸರ್ಕಾರ, ಶೇ.40 ಭಾಗ ರಾಜ್ಯ ಸರ್ಕಾರ ಕೊಡುವುದರಿಂದ ಶೀಘ್ರದಲ್ಲೇ ಈ ಯೋಜನೆ ಪೂರ್ಣಗೊಳ್ಳಲಿದೆ.
ಭದ್ರಾ ಮೇಲ್ದಂಡೆ ಭಾಗದ ರೈತರ ಹಲವು ವರ್ಷಗಳ ಕನಸನ್ನ ಪೂಜ್ಯ ಜಗದ್ಗುರುಗಳು ನನಸಾಗಿಸಿದ್ದಾರೆ.
ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ.
ರಾಜ್ಯಾಧ್ಯಕ್ಷ ಹೆಚ್.ಆರ್ ಬಸವರಾಜಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಗೆ ಸುದೀರ್ಘ ಕಾಲ ಹಿಡಿದಿದ್ದ ಗ್ರಹಣ ಇಂದಿಗೆ ನಿವಾರಣೆಯಾಗಿದೆ. Technical Advisory Committee ಷರಿಷ್ಕೃತ ಪ್ರಸ್ತಾವನೆಗೆ ತನ್ನ ಒಪ್ಪಿಗೆಯನ್ನು ನೀಡಿದೆ.
ತರಳಬಾಳು ಶ್ರೀ
+++
