ಚೆನ್ನೈ: ಫಿಸಿಯೋಥೆರಪಿಸ್ಟ್ ಆಗಿರುವ 49 ವರ್ಷದ ಅಮ್ಮ ಹಾಗೂ ಆಕೆಯ ಮಗಳು, ಇಬ್ಬರೂ ಒಟ್ಟಿಗೆ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ನಲ್ಲಿ ತೇರ್ಗಡೆಯಾಗಿರುವ ಅಪರೂಪದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.ತಾಯಿ ಅಮುತವಲ್ಲಿ ಮಣಿವಣ್ಣನ್ 147 ಹಾಗೂ ಮಗಳು ಎಂ. ಸಂಯುಕ್ತಾ 450 ಅಂಕಗಳನ್ನು ಪಡೆದು ಈ ಸಾಧ’ ಮಾಡಿದ್ದಾರೆ. ತಾಯಿಗೆ ಅಂಗವೈಕಲ್ಯ ಮೀಸಲಾತಿಯ ತಮ್ಮದೇ ಜಿಲ್ಲೆಯ ವಿರುಧನಗರ ವೈದ್ಯಕೀಯ ಕಾಲೇಜಿನಲಿ ಸೀಟ್ ದೊರಕಿದೆ. ಅವರ ಶಾಲಾ ಶಿಕ್ಷಣ ಪೂರ್ಣಗೊಂಡು ದಶಕಗಳಾಗಿವೆ. ಆಗ ವೈದ್ಯಕೀಯ ಕೋರ್ಸ್‌ಗೆ ಸೀಟು ಸಿಗದೆ. ಕಾರಣ ಫಿಸಿಯೋಥೆರಪಿಸ್ಟ್ ಆಗಿದ್ದರು.
‘ನನ್ನ ಶಾಲಾ ದಿನಗಳ ಪಠ್ಯಕ್ಕೂ ಈಗಿನ ಪಠ್ಯಕ್ಕೂ ಬಹಳ ವ್ಯತ್ಯಾಸವಿದೆ. ಈಗಿನದು ಬಹಳ ಕಠಿಣ. ನನ್ನ ಮಗಳು ನೀಟ್‌ಗೆ ತಯಾರಿ ನಡೆಸುವುದನ್ನು ನೋಡಿದ ನಂತರ ನನ್ನ ಮಹತ್ವಾಕಾಂಕ್ಷೆ ಮತ್ತೆ ಚಿಗುರಿತು. ಅವಳೇ ನನಗೆ ಸ್ಫೂರ್ತಿಯಾದಳು. ಅವಳ ಪುಸ್ತಕವನ್ನು ಪಡೆದು ಓದಲು ಪ್ರಾರಂಭಿಸಿದೆ’ ಎಂದು ಅಮುತವಲ್ಲಿ ಹೇಳಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



