ಬೆಂಗಳೂರು: ನವರಾತ್ರಿಯ ಸಂಭ್ರಮ, ಸಡಗರ ಎಲ್ಲೆಡೆ ಮನೆಮಾಡಿದೆ. ಬೆಂಗಳೂರಿನ ಗಲ್ಲಿಗಲ್ಲಿಗಳೂ ಹಬ್ಬದ ವಾತಾವರಣದಿಂದ ಕಂಗೊಳಿಸುತ್ತಿವೆ. ಸೆಪ್ಟೆಂಬರ್ 27 ರಿಂದ ಪ್ರಾರಂಭವಾಗಿರುವ ದುರ್ಗಾ ಪೂಜೆಯ ಕೊನೆಯ ದಿನವೂ ಹತ್ತಿರವಾಗುತ್ತಿದೆ. ಈ ಸಂಭ್ರಮಕ್ಕೆ ಇನ್ನಷ್ಟು ಮೆರಗು ನೀಡುವಂತಹ ದಾಂಡಿಯಾ ನೃತ್ಯಕ್ಕಾಗಿ ಎಲ್ಲಾ ವಯೋಮಾನದವರೂ ಕಾದು ಕುಳಿತಿರುತ್ತಾರೆ. ನೀವೇನಾದರೂ ಬೆಂಗಳೂರಿನಲ್ಲಿರುವ ದುರ್ಗಾ ಪೆಂಡಾಲ್ಗಳನ್ನು ಹುಡುಕುತ್ತಿದ್ದರೆ, ನೀವು ಭೇಟಿ ನೀಡಲೇ ಬೇಕಾದ ಸ್ಥಳಗಳು ಇಲ್ಲಿವೆ.
ಬೆಂಗಳೂರಿನಲ್ಲಿರುವ ದುರ್ಗಾ ಪೆಂಡಾಲ್ಗಳು
1. ಬಿಡಿಪಿಸಿ, ಅರಮನೆ ಮೈದಾನ: ಅರಮನೆ ಮೈದಾನದಲ್ಲಿ ನಡೆಯುವ ಈ ಭವ್ಯ ಉತ್ಸವವು ಬೆಂಗಳೂರಿನ ಅತಿ ದೊಡ್ಡ ಸಭೆಗಳಲ್ಲಿ ಒಂದಾಗಿದೆ. ನೀವು ಹೆಚ್ಚಿನ ಪ್ರಮಾಣದ ಜನ ಸಮೂಹ ಮತ್ತು ರೋಮಾಂಚಕ ಅನುಭವಗಳನ್ನು ಬಯಸುವುದಾದರೆ ಈ ಆಯ್ಕೆ ನಿಮಗೆ ಸೂಕ್ತವಾಗಿದೆ.
2. SUC ದುರ್ಗಾ ಪೂಜೆ, ಬಿಲೆಕಹಳ್ಳಿ( ಶ್ರೀನಿವಾಸ್ ಕಲ್ಯಾಣ ಮಂಟಪ): ನೀವು ಶಾಂತವಾದ ಹಬ್ಬದ ವಾತಾವರಣವನ್ನು ಬಯಸುವುದಾದರೆ ಈ ಜಾಗ ನಿಮಗೆ ಹೇಳಿ ಮಾಡಿಸಿದಂತದ್ದು. ಇಲ್ಲಿ ನೀವು ಆರಾಮದಾಯಕವಾಗಿ ಪೂಜೆಯ ಅನುಭವವನ್ನು ಪಡೆಯಬಹುದು.
3. ಬರ್ಷಾ ಬೆಂಗಾಲಿ ಅಸೋಸಿಯೇಷನ್, HSR/ಸರ್ಜಾಪುರ: ಇದು ಎಲ್ಲಾ ದಾಂಡಿಯಾ ಪ್ರಿಯರ ನೆಚ್ಚಿನ ತಾಣವಾಗಿದೆ. ಆಹಾರ ಮಳಿಗೆಗಳೊಂದಿಗೆ ಒಳ್ಳೆಯ ವಾತಾವರಣವಿದ್ದು ನಿಮಗೆ ಸೂಕ್ತವಾಗಿದೆ.
4. ಸಾರಥಿ ಸೋಷಿಯೋ-ಕಲ್ಚರಲ್ ಟ್ರಸ್ಟ್, ಕೋರಮಂಗಲ: ಇಲ್ಲಿ ಕೇವಲ ದುರ್ಗಾ ಪೂಜೆಯ ಆಚರಣೆಯೊಂದೇ ಅಲ್ಲದೇ ಸಾಂಸ್ಕೃತಿಕ ಕಾರ್ಯಕ್ರಮಗಳು,ಹಾಡು-ಕುಣಿತವೂ ಇದ್ದು, ಮೈನವಿರೇಳಿಸುವ ಸಂಜೆಯನ್ನು ನಿಮಗೆ ನೀಡುತ್ತದೆ.
5. ಅಮದೆರ್ ಪೂಜೊ, ಕನಕಪುರ ರೋಡ್/ ಜೆಪಿ ನಗರ: ಎರಡು ಸ್ಥಳಗಳಲ್ಲಿ ನೆಲೆಯಾಗಿರುವ ಈ ಪುಜೆಯು ಕುಟುಂಬದೊಂದಿಗೆ ಭೇಟಿ ನೀಡಲು ಸೂಕ್ತವಾಗಿದೆ.
6. ಜಯಮಹಲ್ ದುರ್ಗಾ ಪೂಜೆ: ನಗರದ ಹೃದಯ ಭಾಗದಲ್ಲಿರುವ ಈ ಜಾಗ, ಹೆಚ್ಚಿನ ಸಾಂಸ್ಕೃತಿಕತೆಯೊಂದಿಗೆ ಕೂಡಿದೆ.
7. ಬೆಂಗಾಲಿ ಅಸೋಸಿಯೇಷನ್ , ಉಲ್ಸೂರು: ನಗರದ ಈ ಜಾಗ ಹೆಚ್ಚಿನ ಜನಸಮೂಹವನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಮೊದಲಿನಿಂದಲೂ ಹೆಸರು ಮಾಡಿದೆ. ಇಲ್ಲಿ ಊಟೋಪಚಾರದ ಜೊತೆಗೆ ನವಮಿಯ ರಾತ್ರಿಯಂದು ದಾಂಡಿಯಾ ನೃತ್ಯಕ್ಕಾಗಿ ಹೆಸರುವಾಸಿಯಾಗಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







