ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟಕರಾಗಿ ಬೂಕರ್ ಪ್ರಶಸ್ತಿ ವಿಜೇತೆ ಕನ್ನಡಿಗ ಲೇಖಕಿ ಬಾನು ಮುಷ್ತಾಕ್ಅವರನ್ನು ಆಯ್ಕೆ ಮಾಡಿರುವುದನ್ನು ಬಿಜೆಪಿ ಸಂಸದ ಪ್ರತಾಪ್ ಸಿಂಹ ಪ್ರಶ್ನಸಿದ್ದಾರೆ. 2023ರ ಜನ ಸಾಹಿತ್ಯ ಸಮ್ಮೇಳನದಲ್ಲಿ ಮುಷ್ತಾಕ್ ಮಾತನಾಡಿದ್ದ ವಿಡಿಯೋವನ್ನು ಹಂಚಿಕೊಂಡ ಪ್ರತಾಪ್ ಸಿಂಹ, ‘ಕನ್ನಡವನ್ನು ಭುವನೇಶ್ವರಿಯಾಗಿ ಒಪ್ಪದ ಈಕೆ, ತಾಯಿ ಚಾಮುಂಡೇಶ್ವರಿಯನ್ನು ನಾಡದೇವತೆಯಾಗಿ ಒಪ್ಪಿಕೊಂಡು ಪುಷ್ಪಾರ್ಚನೆ ಮಾಡಿಯಾರೆ ಬೂಕರ್ ಬಾನು’ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ತಿರುಗೇಟು ನೀಡಿದ್ದು, ಮಹಾರಾಜರ ಅನುಪಸ್ಥಿತಿಯಲ್ಲಿ ಹೈದರಾಲಿ, ಟಿಪ್ಪು ಸುಲ್ತಾನ್ 18 ವರ್ಷಗಳ ಕಾಲ ದಸರಾವನ್ನು ಮುನ್ನಡೆಸಿಕೊಂಡು ಹೋಗಿದ್ದರು ಎಂದಿದ್ದಾರೆ.ಮೈಸೂರಿನಲ್ಲಿ ಮಾತನಾಡಿದ ತನ್ವೀರ್ ಸೇಠ್, ವಿಜಯನಗರ ಸಾಮ್ರಾಜ್ಯ ಇದ್ದಾಗ ದಸರಾ ಶುರು ಮಾಡಲಾಗಿತ್ತು. ತದನಂತರ ನಮ್ಮಲ್ಲಿ ಮಹಾರಾಜರ ಪಟ್ಟಾಭಿಷೇಕ ಆಗದೇ ಇದ್ದಂತಹ ಸಂದರ್ಭದಲ್ಲಿ ಸುಮಾರು 18ಕ್ಕೂ ವರ್ಷಗಳ ಕಾಲ ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ದಸರಾ ಮುಂದುವರಿಸಿಕೊಂಡು ಹೋದರು ಎಂಬ ಒಂದು ಇತಿಹಾಸ ಇದೆ. ತದನಂತರ 1974ರ ನಂತರ ಸರ್ಕಾರ ಜವಾಬ್ದಾರಿ ವಹಿಸಿಕೊಂಡಂತಹ ಸಂದರ್ಭದಿಂದ ಅನೇಕ ಮಹಾನ್ ವ್ಯಕ್ತಿಗಳು, ಸಾಹಿತಿಗಳು, ಸಮಾಜದ ಮುಖ್ಯವಾದಂತಹ ವ್ಯಕ್ತಿಗಳು ಉದ್ಘಾಟನೆ ಮಾಡಿದ್ದಾರೆ ಎಂದು ಹೇಳಿದರು.
ನಿಸಾರ್ ಅಹ್ಮದ್ ಅವರಿಂದ ಹಿಡಿದು ಸಾಮಾನ್ಯ ಒಬ್ಬ ರೈತನು ಕೂಡ ದಸರಾ ಉದ್ಘಾಟನೆ ಮಾಡಿದಂತಹ ಸಂದರ್ಭಗಳಿವೆ. ನಾಸ್ತಿಕರಾಗಿರುವ ಬರಗೂರು ರಾಮಚಂದ್ರಪ್ಪ ಅವರು, ‘ನಾನು ಪೂಜೆ ಮಾಡಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದರು. ಅದರು ಸರಿಯೋ ತಪ್ಪೋ ಎಂಬುದು ಬೇರೆ, ಆ ಸಂದರ್ಭದಲ್ಲಿ ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ ಎಂದು ಸೇಠ್ ನೆನಪಿಸಿಕೊಂಡರು.ದಸರಾ ಉದ್ಘಾಟನೆಗೆ ಸರ್ಕಾರ ಆಹ್ವಾನ ಮಾಡುವುದು ನಮ್ಮ ಕಾರ್ಯಕ್ರಮಗಳ ಚಾಲನೆ ಕೊಡುವುದಕ್ಕೆ. ಪೂಜೆ ಪುರಸ್ಕಾರಗಳು ಮತ್ತು ಇದರ ಸಂಪೂರ್ಣವಾದಂತ ಹೊಣೆಗಾರಿಕೆ ಸರ್ಕಾರ ನಡೆಸಿಕೊಂಡು ಬಂದಿದೆ. ಇದರಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಇವತ್ತು ವ್ಯಕ್ತಿ ಗಳಿಸಿರುವಂತಹ ಆ ಸ್ಥಾನಮಾನಗಳನ್ನು ಗೌರವಿಸಿ ನಾವು ಉದ್ಘಾಟಕರಾಗಿ ಕರೆಯುತ್ತೇವೆ. ಇದರಲ್ಲಿ ಜಾತಿ ಮತ್ತು ಧರ್ಮ ಇಲ್ಲ. ಇಲ್ಲಿ ಬೇಕಾಗಿರುವಂತಹದ್ದು ಸಾಹಿತ್ಯ ಲೋಕದಲ್ಲಿ ಅವರು ಏನು ಸಾಧನೆ ಮಾಡಿದ್ದಾರೆ ಎಂಬುದಷ್ಟೇ ಎಂದು ತನ್ವೀರ್ ಸೇಠ್ ಹೇಳಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







