ಮೈಸೂರು: ದಸರಾಗೆ ತಯಾರಿ ನಡೆಯುತ್ತಿದೆ. ಆದರೆ ನಾಡಹಬ್ಬಕ್ಕೆ ಉದ್ಘಾಟಕರ ಆಯ್ಕೆ ವಿಷಯ ಮಾತ್ರ ಕಿಚ್ಚು ಹೊತ್ತಿಸಿದೆ. ಬೂಕರ್ ಪ್ರಶಸ್ತಿ ವಿಜೇತೆ, ಮುಸ್ಲಿಂ ಸಮುದಾಯದ ಬಾನು ಮುಷ್ತಾಕ್ರ ಆಯ್ಕೆ ಖಂಡಿಸಿ ಬಿಜೆಪಿ ಸೇರಿ ಕೆಲ ಹಿಂದೂಪರ ಸಂಘಟನೆಗಳು ಕಿಡಿಕಾರುತ್ತಿವೆ. ಈ ಮಧ್ಯೆ ಚಾಮುಂಡಿಬೆಟ್ಟ ಹಿಂದೂಗಳ ಆಸ್ತಿ ಏನಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ನೀಡಿದ್ದ ಹೇಳಿಕೆ ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ಈ ಕುರಿತಾಗಿ ಮಾತನಾಡಿರುವ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಚಾಮುಂಡಿ ಬೆಟ್ಟ ಹಿಂದೂಗಳಿಗೆ ಸೇರಿದ್ದು ಎಂದು ಹೇಳಿದ್ದಾರೆ.
ಚಾಮುಂಡಿ ಹಿಂದೂ ಮತ್ತು ಯದುವಂಶದ ಮನೆ ದೇವರು
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಏನು ಹೇಳಬೇಕೋ ಎಲ್ಲವನ್ನೂ ನಾನು ಪತ್ರದಲ್ಲೇ ಹೇಳಿದ್ದೇನೆ. ಚಾಮುಂಡಿಬೆಟ್ಟ ಹಿಂದೂಗಳಿಗೆ ಸೇರಿದ್ದು ಎಂದು ಪತ್ರದಲ್ಲಿ ಹೇಳಿದ್ದೇನೆ. ದೇವಸ್ಥಾನ ಹಿಂದೂ ಧಾರ್ಮಿಕ ಆಚರಣೆಯಲ್ಲೇ ನಡೆಯುತ್ತಿದೆ. ಚಾಮುಂಡಿ ಹಿಂದೂ ದೇವರು, ಯದುವಂಶದ ಮನೆ ದೇವರು. ಯದುವಂಶಕ್ಕೆ ಚಾಮುಂಡಿದೇವಿ ಧಾರ್ಮಿಕ ತಾಯಿ ಇದ್ದಂತೆ. ರಾಜಕಾರಣಿಗಳ ಏನೂ ಬೇಕಾದರು ಹೇಳಲಿ. ರಾಜಕಾರಣಿಗಳು ಹೇಳಿದ ತಕ್ಷಣ ಎಲ್ಲವೂ ಆಗಲ್ಲ ಎಂದು ಅವರು ಕಿಡಿಕಾರಿದ್ದಾರೆ.ದೇವಸ್ಥಾನ ವಿಚಾರದಲ್ಲಿ ಕೋರ್ಟ್ನಲ್ಲಿ ಹೋರಾಟ ನಡೆಯುತ್ತಿದೆ. ಪ್ರಾಧಿಕಾರ ರಚನೆ ಆದರೂ ಅದು ಅಧಿಕೃತ ಅಲ್ಲ. ಕೋರ್ಟ್ ಆದೇಶ ಬಂದ ಮೇಲೆ ಅಷ್ಟೆ ಎಲ್ಲವೂ ಸ್ಪಷ್ಟ ಆಗುವುದು. 70 ವರ್ಷಗಳಿಂದ ಈ ಹೋರಾಟ ನ್ಯಾಯಾಲಯದಲ್ಲಿ ಇದೆ. ದೇವಸ್ಥಾನವನ್ನು ರಾಜಕೀಯಕ್ಕೆ ಬಳಸಿ ಕೊಂಡಿದ್ದಕ್ಕೆ ಬೇಸರವಿದೆ ಎಂದು ಅವರು ಹೇಳಿದ್ದಾರೆ.
ಇಲ್ಲಿಯವರೆಗೆ ಆದ ರಾಜಕೀಯವೇ ಸಾಕು
ದಸರಾ ಉದ್ಘಾಟಕರ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಇದರಲ್ಲಿ ನನ್ನ ಅಭಿಪ್ರಾಯ ಇಲ್ಲ. ಆಹ್ವಾನಿಸಿದವರು, ಕರೆಸಿಕೊಂಡವರಿಗಷ್ಟೇ ಅದು ಗೊತ್ತು. ದಸರಾ ವಿಚಾರದಲ್ಲಿ ಇಲ್ಲಿಯವರೆಗೆ ಆದ ರಾಜಕೀಯವೇ ಸಾಕು ಆ ವಿಚಾರವನ್ನು ಮುಂದುವರಿಸುವುದು ಬೇಡ ಎಂದಿದ್ದಾರೆ.ಸರ್ಕಾರದ ದಸರಾ ನಮ್ಮ ಪರಂಪರೆ ಭಾಗವಲ್ಲ. ನಮ್ಮ ದಸರಾ ಖಾಸಗಿಯಾಗಿಯೇ ನಡೆಯುತ್ತದೆ. ಸರ್ಕಾರ ಅವರಿಗೆ ಬೇಕಾದ ರೀತಿಯಲ್ಲೇ ದಸರಾ ಮಾಡುತ್ತಾರೆ. ಅಂಬಾರಿ ಕಡೆ ಗಮನ ಕೊಡುವ ಕಾರಣ ನಾನು ಅಲ್ಲಿಗೆ ಹೋಗಲ್ಲ. ನಮ್ಮ ಮನೆಯ ಒಬ್ಬರು ಹೋಗುತ್ತಾರೆ ಅಷ್ಟೇ ಎಂದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







