ಮೈಸೂರು: ನಾಡಹಬ್ಬ ದಸರಾ ಮಹೋತ್ಸವ (Dasara Festival) ಹಿನ್ನೆಲೆ ಸೋಮವಾರ (ಆ.25) ದಸರಾ ಗಜಪಡೆಯ ಎರಡನೇ ತಂಡ ಮೈಸೂರಿಗೆ (Mysuru) ಬಂದಿವೆ. ಮೊದಲ ದಿನದ ತಾಲೀಮಿಗೂ ಮುನ್ನ ಅರಮನೆ ಅಂಗಳಕ್ಕೆ ಆಗಮಿಸಿರುವ ಆನೆಗಳ ತೂಕ ಪರೀಕ್ಷಿಸಲಾಗಿದ್ದು, ಈ ಪೈಕಿ ಮೊದಲ ತಂಡದಲ್ಲಿ ಹೆಚ್ಚು ತೂಕ ಹೊಂದಿರುವ ಭೀಮನಿಗಿಂತ ಸುಗ್ರೀವ ಆನೆ ಹೆಚ್ಚು ಬಲಶಾಲಿಯಾಗಿದ್ದಾನೆ ಅನ್ನೋದು ಗೊತ್ತಾಗಿದೆ.
ಎರಡನೇ ತಂಡದ ಆನೆಗಳ ತೂಕದ ವಿವರ:
ಸುಗ್ರೀವ: 5,545 ಕೆ.ಜಿ
ಶ್ರೀಕಂಠ: 5,540 ಕೆ.ಜಿ
ಗೋಪಿ: 4,990 ಕೆ.ಜಿ
ರೂಪ: 3,320 ಕೆ.ಜಿ
ಹೇಮಾವತಿ: 2440 ಕೆ.ಜಿ
ಮೊದಲ ತಂಡದ ಆನೆಗಳ ತೂಕದ ವಿವರ:
ಅಭಿಮನ್ಯು: 5,360 ಕೆ.ಜಿ
ಭೀಮ: 5,465 ಕೆ.ಜಿ
ಧನಂಜಯ: 5,310 ಕೆ.ಜಿ
ಕಾವೇರಿ: 3,010 ಕೆ.ಜಿ
ಲಕ್ಷ್ಮೀ: 3,730 ಕೆ.ಜಿ
ಏಕಲವ್ಯ: 5,305 ಕೆ.ಜಿ
ಮಹೇಂದ್ರ: 5,120 ಕೆ.ಜಿ
ಕಂಜನ್: 4,880 ಕೆ.ಜಿ
ಪ್ರಶಾಂತ: 5,110 ಕೆ.ಜಿ
ನಗರದ ಧನ್ವಂತ್ರಿ ರಸ್ತೆಯಲ್ಲಿರುವ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ಆನೆಗಳ ತೂಕ ಪರಿಶೀಲನೆ ಮಾಡಲಾಯಿತು. ಪರಿಶೀಲನೆ ನಂತರ ಆನೆಗಳಿಗೆ ಪ್ರತಿನಿತ್ಯ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಬೆಳಗ್ಗೆ, ಸಂಜೆ ಎರಡು ಸಮಯ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ನಡೆಸಲಾಗುತ್ತದೆ. ನಗರದ ಸದ್ದುಗದ್ದಲಕ್ಕೆ ವಿಚಲಿತವಾಗದಂತೆ ಆನೆಗಳಿಗೆ ತರಬೇತಿ ನೀಡಲಾಗುತ್ತದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







