ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿರವರ ನಿಯೋಗ ಮುಖ್ಯಮಂತ್ರಿ ಸಿದ್ಧರಾಮಯ್ಯರವರನ್ನುಭೇಟಿ ಮಾಡಿ ನಾಗಮೋಹನ ದಾಸ್ ಅವರ ಜನಗಣತಿ ಲೋಪ ಸರಿಪಡಿಸಿ ಜನಸಂಖ್ಯಾವಾರು ಪ್ರತ್ಯೇಕ ಮೀಸಲಾತಿ ನೀಡಲುಆಗ್ರಹಿಸಿದರು.ಮುಖ್ಯಮಂತ್ರಿಗಳಿಗೆ ನೀಡಿದ ಪತ್ರದ ವಿವರಣೆಯಲ್ಲಿ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ ದಾಸ್ ಆಯೋಗ ಸಲ್ಲಿಸಿರುವವರದಿಯಲ್ಲಿ ಹಲವಾರು ಲೋಪದೋಷಗಳು ಕಂಡು ಬಂದಿವೆ ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಭೋವಿ ಜನಾಂಗದ ಜನಸಂಖ್ಯೆಯನ್ಯೂನ್ಯತೆಗಳು ಸದರಿ ವರದಿಯಲ್ಲಿ ಪುಟ ಸಂಖ್ಯೆ24ರಲ್ಲಿ ತಿಳಿಸಿರುವಂತೆ 2001-11 ರ ಜನಸಂಖ್ಯೆಯ ದಶಕವಾರು ಬೆಳವಣಿಗೆಯಪ್ರಮಾಣ 22.31% ರಷ್ಟಿದೆ. ಇದೇ ಮಾನದಂಡವನ್ನು 2011-2025 ಅಂದರೆ 15 ವರ್ಷಗಳ ನಂತರದ ಜನಸಂಖ್ಯೆ ನ್ಯಾ.ನಾಗಮೋಹನ್ದಾಸ್ರವರ ವರದಿಯಂತೆ ರಾಜ್ಯದ ಪರಿಶಿಷ್ಟ ಜಾತಿ ಜನಸಂಖ್ಯೆ 1 ಕೋಟಿ 7ಲಕ್ಷ ಹಾಗೂ ಭೋವಿ ಜನಾಂಗದ ಜನಸಂಖ್ಯೆ 11,29,301ಮಾತ್ರವಾಗಿದೆ ಸದಾಶಿವ ಆಯೋಗ ಹಾಗೂ 2011ರ ಜನಗಣತಿಯಲ್ಲಿ ಎರಡೂ ಸಮೀಕ್ಷೆ ಏಕಕಾಲದಲ್ಲಿ ನಡೆದರೂ ಸಹ ಪರಿಶಿಷ್ಟ ಜಾತಿ ಜನಸಂಖ್ಯೆ ವಿಚಾರದಲ್ಲ್ಲಿ ದೊಡ್ಡ ಪ್ರಮಾಣದ ವ್ಯತ್ಯಾಸ ಇದೆ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದು ಈ ಕಾರಣದಿಂದ ಹೊಸದಾಗಿ ಸಮೀಕ್ಷೆ ನಡೆಯಬೇಕಾಗಿದೆ ಎಂದು ಹೇಳಿರುವಾಗ ಪ್ರಸ್ತುತ ಲೋಪದೋಷ ಗಳನ್ನು ಸರಿಪಡಿಸಲು ಕೇಂದ್ರ ಸರ್ಕಾರ 2026ರ ಜನಗಣತಿ ಆಗುವವರೆವಿಗೂ ಕಾಯುವುದು ಸೂಕ್ತ ಎಂದು ಮುಖ್ಯಮಂತ್ರಿಗಳಿಗೆ ಮನವರಿಕೆಮಾಡಿಕೊಡಲಾಯಿತು.
ವರದಿಯಲ್ಲಿ ತಿಳಿಸಿರುವಂತೆ ಈ ಎಲ್ಲಾ ಮಾನದಂಡಗಳಲ್ಲಿ ಭೋವಿ ಜನಾಂಗ, ಎಡಗೈ, ಬಲಗೈ ಹಾಗೂ ಬಂಜಾರ
ಸಮಾಜಗಳಂತಹ ಅತ್ಯಂತ ಕಡಿಮೆ ಅಭಿವೃದ್ಧಿ ಹೊಂದಿದ್ದರು ಭೋವಿ ಸಮಾಜವನ್ನು ಮುಂದುವರೆದ ಗುಂಪಿಗೆ
ಸೇರಿಸಲಾಗಿದೆ. ವರದಿಯಲ್ಲಿರುವ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ಉದ್ಯೋಗ ಸೂಚಕಗಳಿಗೂ ಹಾಗೂ ಮೀಸಲಾಗಿರುವಶೇಕಡ ನಿಗದಿ ಪಡೆಸಿರುವುದಕ್ಕೂ ಯಾವುದೇ ತಾಳೇ ಇಲ್ಲದಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ.ಶೈಕ್ಷಣಿಕ, ಆರ್ಥಿಕ ಮತ್ತುಸಾಮಾಜಿಕ ಸೂಚಕಗಳು ಮತ್ತು ವಿವಿಧ ಗುಂಪುಗಳಲ್ಲಿ ನಿಗದಿಪಡಿಸಿದ ಮೀಸಲಾತಿಯ ಪ್ರಮಾಣಗಳ ನಡುವೆ ಯಾವುದೇ ಪರಸ್ಪರಸಂಬಂಧವಿಲ್ಲ. ಸಮೀಕ್ಷೆಗೆ ಕೇಂದ್ರ ಸರ್ಕಾರದ ಜನಗಣತಿಯ ಸಮಯದಲ್ಲಿ ಅನುಸರಿಸಲಾಗುವ ವಿಧಾನವನ್ನು ಅನುಸರಿಸಿದರೆಮತದಾರರ ಪಟ್ಟಿಯನ್ನು ಮಾನದಂಡವಾಗಿ ಇಟ್ಟುಕೊಂಡು ಸಮೀಕ್ಷೆ ಮಾಡಿರುವುದೇ ಈ ಎಲ್ಲಾ ಗೊಂದಲಗಳಿಗೆ ಕಾರಣಎಂದಿದ್ದಾರೆ.ತರಾತುರಿಯಲ್ಲಿ ಅಲ್ಪ ಸಮಯದಲ್ಲಿ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಲು ಬಳಸಿಪ್ರಮಾದ ಎಸಗಲಾಗಿದೆ.ಪರಿಶಿಷ್ಟ ಜಾತಿ ಕುಟುಂಬಗಳನ್ನು ಗುರುತಿಸಲು ಪಡಿತರ ಚೀಟಿಯನ್ನು ಒಂದು ಮಾನದಂಡವಾಗಿಬಳಸಲಾಗಿದೆ. ಆದರೆ ವರದಿಯಲ್ಲಿ ತಿಳಿಸಿರುವಂತೆ ಸುಮಾರು 7 ಲಕ್ಷ ಪರಿಶಿಷ್ಟ ಜಾತಿ ಕುಟುಂಬಗಳು ಪಡಿತರ ಚೀಟಿಯೇಹೊಂದಿಲ್ಲಅಂದ ಮೇಲೆ ಪರಿಶಿಷ್ಟ ಜಾತಿ ಕುಟುಂಬಗಳನ್ನು ಗುರುತಿಸುವಲ್ಲಿ ಲೋಪವಾಗಿ ಸುಮಾರು 30 ಲಕ್ಷ ಜನರನ್ನು ಕೈಬಿಡಲಾಗಿದೆ ಹಾಗೂ ಭೋವಿ ಜನಾಂಗದ ಸುಮಾರು 3.5 ಲಕ್ಷ ಜನರನ್ನು ಸಮೀಕ್ಷೆಯಿಂದ ಕೈಬಿಡಲಾಗಿದೆ.ಹಲವು ಮಾನದಂಡಗಳಲ್ಲಿ ಬಿ ಮತ್ತು ಸಿ ಗುಂಪು,ಡಿ ಗುಂಪಿಗಿಂತ ಸ್ಪಷ್ಟವಾಗಿ ಮಂದೆ ಇದೆ . ಡಿ ಗುಂಪಿನವರು 26 ಮಾನದಂಡಗಳಲ್ಲಿ19 ಮಾನದಂಡಗಳಲ್ಲಿ ಹಿಂದೆ ಇದೆ. ಹೀಗಿರುವಾಗ ಆಯೋಗವು ಡಿ ಗುಂಪಿಗೆ ಕೇವಲ 4% ಮೀಸಲಾತಿ ನಿಗದಿ ಮಾಡಿರುವುದುಮೇಲ್ನೋಟಕ್ಕೆ ಅವೈಜ್ಞಾನಿಕವಾಗಿದೆ . ಭೋವಿ ಸಮಾಜವು 2026ರಲ್ಲಿ ಕೇಂದ್ರ ಸರ್ಕಾರ ನಡೆಸುವ ಜನಗಣತಿ ಆದಾರದ ಮೇಲೆಸಾಮಾಜಿಕ ಮತ್ತು ಆರ್ಥಿಕ ಸೂಚಕಗಳ ಆಧಾರದ ಮೇಲೆ ಒಳಮೀಸಲಾತಿಯನ್ನು ಕಲ್ಪಿಸಲು ಒತ್ತಾಯಿಸುತ್ತದೆ. ಹಾಗೂ ದೋಷಪೂರಿತ ನ್ಯಾ.ನಾಗಮೋಹನದಾಸ್ ವರದಿಯನ್ನು ತಿರಸ್ಕರಿಸಲು ಒತ್ತಾಯಿಸಿದ್ದು ಒಳಮೀಸಲಾತಿ ನೀಡುವ ಸಮಯದಲ್ಲಿನಿಖರವಾದ ವೈಜ್ಞಾನಿಕ ಅಂಕಿಅಂಶಗಳನ್ನು ಪಡೆದು ಭೋವಿ ಸಮಾಜವನ್ನು ಪ್ರತ್ಯೇಕ ಗುಂಪಾಗಿ ಮಾಡಲು ಮನವಿಮಾಡಲಾಯಿತು.
ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯರವರು ಸಚಿವ ಸಂಪುಟದಲ್ಲಿ ತಮ್ಮ ಮನವಿಯನ್ನು ಚರ್ಚಿಸಲಾಗುವುದು ಎಂದುತಿಳಿಸಿದರು.ನಿಯೋಗದಲ್ಲಿ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ, ವಿ ಹನುಮಂತಪ್ಪ, ರವಿ ಪೂಜಾರಿ, ಜಯಶಂಕರ, ಮುರಳಿಧರಬಂಡೆ, ಶ್ರೀಮತಿ ಮಂಜುಳ, ಶ್ರೀಮತಿ ಗೀತಾ, ತಿಪ್ಪಣ್ಣ ಒಡೆಯರಾಜು, ಕೃಷ್ಣಪ್ಪ ಹಾಗೂ ಇನ್ನಿತರರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







