ಚಿತ್ರದುರ್ಗ : ಕನ್ನಡವನ್ನು ನಿರ್ಲಕ್ಷಿಸುವ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವಂತೆ ಸರ್ವೋದಯ ಕರ್ನಾಟಕ ಪಕ್ಷದಜಿಲ್ಲಾಧ್ಯಕ್ಷೆ ಜೆ.ಯಾದವರೆಡ್ಡಿ ಸರ್ಕಾರವನ್ನು ಒತ್ತಾಯಿಸಿದರು.ಕರುನಾಡ ವಿಜಯಸೇನೆಯಿಂದ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸರ್ಕಾರದ ಮರಣ ಶಾಸನ, ರಾಜಕಾರಣಿಗಳಲ್ಲಿನ ಇಚ್ಚಾಶಕ್ತಿ ಕೊರತೆ, ಅಧಿಕಾರಿಗಳ ಅಸಡ್ಡೆಯಿಂದ ಕನ್ನಡ ಸೊರಗುತ್ತಿದೆ. ಕರ್ನಾಟಕದಲ್ಲಿ ಕನ್ನಡವೇಸಾರ್ವಭೌಮ ಭಾಷೆಯಾಗಬೇಕೆಂದು ಅನೇಕ ಹೋರಾಟಗಾರರು ಚಿಂತಕರು, ಸಾಹಿತಿಗಳು ಹಿಂದಿನಿಂದಲುಚಳುವಳಿಗಳನ್ನುನಡೆಸಿಕೊಂಡು ಬರುತ್ತಿದ್ದಾರೆ. ಆದರೂ ಕನ್ನಡ ಪೂರ್ಣ ಪ್ರಮಾಣದಲ್ಲಿ ಆಡಳಿತ ಭಾಷೆಯಾಗಿಲ್ಲ. ಇಂಗ್ಲಿಷ್‍ನಲ್ಲಿ ಷರಾ ಬರೆಯುವುದು
ಇನ್ನು ನಿಂತಿಲ್ಲ. ಜನಸಾಮಾನ್ಯರಿಗೆ ಅರ್ಥವಾಗುವ ಕನ್ನಡ ಭಾಷೆಯನ್ನು ಬಳಸಲು ಏನು ಕಷ್ಟ. ದೊಡ್ಡ ದೊಡ್ಡ ದೇಶಗಳಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣವನ್ನು ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಅದು ಏಕೆ ಆಗುತ್ತಿಲ್ಲ ಎಂದು ಜೆ.ಯಾದವರೆಡ್ಡಿ ಪ್ರಶ್ನಿಸಿದರು?ಕನ್ನಡ ಭಾಷೆಗೆ ಸುಪ್ರೀಂಕೋರ್ಟ್ ಅಡ್ಡ ಬಂದಿದೆ. ಬೆಂಗಳೂರಿನಲ್ಲಿ ಮೆಟ್ರೋ ಉದ್ಗಾಟನೆಯಲ್ಲಿ ಹಿಂದಿಯನ್ನು ಬಳಸಿ ಕನ್ನಡಕ್ಕೆಅವಮಾನ ಮಾಡಲಾಗಿದೆ. ಕನ್ನಡಪರ ಸಂಘಟನೆಗಳು ಉಗ್ರ ಹೋರಾಟ ಮಾಡಿವೆ. ಇಂಗ್ಲಿಷ್ ಮತ್ತು ಹಿಂದಿ ಭಾಷೆಯನ್ನು ಕನ್ನಡದಮೇಲೆ ಹೇರಲಾಗುತ್ತಿದೆ. ಹೋರಾಟಗಾರರ ಮೇಲೆ ನೂರಾರು ಕೇಸುಗಳು ಬಿದ್ದಿವೆ. ಶ್ರೀಮಂತ ಭಾಷೆ ಕನ್ನಡವನ್ನು ಉಳಿಸಿಬೆಳೆಸಬೇಕಾಗಿದೆ ಎಂದು ಆಗ್ರಹಿಸಿದರು.
ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡಿ ಅಂಗಡಿ ಮುಂಗಟ್ಟು, ಶಾಲಾ-ಕಾಲೇಜು, ಆಸ್ಪತ್ರೆಗಳಲ್ಲಿ
ಶೇ.60 ರಷ್ಟು ಕನ್ನಡ ನಾಮ ಫಲಕವಿರಬೇಕೆಂದು ಸರ್ಕಾರ ಆದೇಶಿಸಿದ್ದರೂ ಸರಿಯಾಗಿ ಪಾಲನೆಯಾಗುತ್ತಿಲ್ಲ. ಸಾಕಷ್ಟು ಹೋರಾಟಮಾಡಿ ಇಂಗ್ಲಿಷ್ ನಾಮಫಲಕಗಳಿಗೆ ಮಸಿ ಬಳಿದು ಬೋರ್ಡ್‍ಗಳನ್ನು ಕಿತ್ತು ಹಾಕಿದ್ದೇವೆ. ನಮ್ಮ ಪ್ರಾಣ ಹೋದರು ಸರಿಹೋರಾಟದಿಂದ ಮಾತ್ರ ಹಿಂದೆ ಸರಿಯುವುದಿಲ್ಲ. ನಗರಸಭೆಯವರು ಟ್ರೇಡ್ ಲೈಸೆನ್ಸ್ ಕೊಡುವಾಗ ಕಡ್ಡಾಯವಾಗಿ ಕನ್ನಡನಾಮಫಲಕವಾಕಬೇಕೆಂದು ಸೂಚಿಸಬೇಕು. ಇನ್ನು ಎರಡು ತಿಂಗಳು ಗಡುವು ನೀಡುತ್ತೇವೆ. ಇಂಗ್ಲಿಷ್ ಮಯವಾಗಲು ಬಿಡಲ್ಲ.ಎಲ್ಲಾದರೂ ಆಂಗ್ಲ ನಾಮ ಫಲಕಗಳು ಕಂಡು ಬಂದರೆ ಮಸಿ ಬಳಿಯುವುದಾಗಿ ಎಚ್ಚರಿಸಿದ್ದಾರೆ.
ಲೇಖಕ ಹೆಚ್.ಆನಂದ್‍ಕುಮಾರ್ ಮಾತನಾಡಿ ಕನ್ನಡ ಪರ ಹೋರಾಟಗಾರರ ಮೇಲೆ ಹಾಕಿರುವ ಕೇಸ್‍ಗಳನ್ನು ರಾಜ್ಯ ಸರ್ಕಾರಹಿಂದಕ್ಕೆ ಪಡೆಯಬೇಕು. ಕನ್ನಡಪರ, ದಲಿತರ ಪರ, ಅಹಿಂದಾ ಪರವಾಗಿದ್ದೇನೆಂದು ಹೇಳುವ ರಾಜ್ಯದ ಮುಖ್ಯಮಂತ್ರಿಸಿದ್ದರಾಮಯ್ಯನವರು ನುಡಿದಂತೆ ನಡೆದುಕೊಳ್ಳುತ್ತಿಲ್ಲ. ಕನ್ನಡದ ಧ್ವನಿ, ಅಸ್ಮಿತೆಗೆ ಧಕ್ಕೆ ಬಂದಾಗ ಬೀದಿಗಿಳಿಯುವ ಹೋರಾಟಗಾರರಮೇಲೆ ಕೇಸ್ ಹಾಕುವುದು, ಗಡಿಪಾರು ಮಾಡುವುದನ್ನು ಸರ್ಕಾರ ಕೈಬಿಡಬೇಕೆಂದು ಮನವಿ ಮಾಡಿದರು.
ಐತಿಹಾಸಿಕ ಚಿತ್ರದುರ್ಗದ ಕೋಟೆಯಲ್ಲಿ ಸರ್ಕಾರದಿಂದಲೆ ಗೈಡ್‍ಗಳ ನೇಮಕವಾಗಬೇಕು. ಇದರಿಂದ ಹೊರಗಿನಿಂದ ಬರುವ
ಪ್ರವಾಸಿಗರಿಗೆ ಕೋಟೆಯ ಬಗ್ಗೆ ಮಾಹಿತಿ ನೀಡಲು ಸುಲಭವಾಗುತ್ತದೆ. ಯಾವುದೇ ಕಾರಣಕ್ಕೂ ಸರ್ಕಾರ ಹೋರಾಟಗಾರರನ್ನು
ತಿರಸ್ಕರಿಸಬಾರದೆಂದು ಹೇಳಿದರು.ಕರುನಾಡ ವಿಜಯಸೇನೆ ಮಹಿಳಾ ಘಟಕದ ಅಧ್ಯಕ್ಷೆ ವೀಣಗೌರಣ್ಣ, ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ರಾಜ್ಯ ಸಮಿತಿ ಸದಸ್ಯನಿಸಾರ್ ಅಹಮದ್, ನಗರಾಧ್ಯಕ್ಷಅವಿನಾಶ್, ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



