ನವದೆಹಲಿ: ನವರಾತ್ರಿಯಿಂದಲೇ (ಸೆ.22) ಹೊಸ ಜಿಎಸ್ಟಿ ಸ್ಲ್ಯಾಬ್ ಅನುಷ್ಠಾನಗೊಳ್ಳಲಿದ್ದು, ದೇಶದ ಜನತೆಯನ್ನುದ್ದೇಶಿಸಿ ಇಂದು (ಭಾನುವಾರ) ಸಂಜೆ ಪ್ರಧಾನಿ ಮೋದಿ ಅವರು ಭಾಷಣ ಮಾಡಲಿದ್ದಾರೆ.ಹೊಸ ಜಿಎಸ್ಟಿ ಜಾರಿಗೂ ಮೊದಲು ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಈ ಹಿಂದೆ ತೆರಿಗೆ ಭಾರ ಇಳಿಸುವ ಭರವಸೆ ನೀಡಿದ್ದರು. ಅಂತೆಯೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ ಜಿಎಸ್ಟಿ ಸಭೆಯಲ್ಲಿ ಸ್ಲ್ಯಾನ್ ಪರಿಷ್ಕರಣೆ ಮಾಡಲಾಗಿದೆ.ನಾಳೆಯಿಂದ ಹೊಸ ನಿಯಮ ಜಾರಿ ಹಿನ್ನೆಲೆ ಇಂದು ಮೋದಿ ದೇಶದ ಜನರಿಗೆ ಮಾಹಿತಿ ನೀಡುವ ಸಾಧ್ಯತೆ ಇದೆ. ಹೊಸ ಜಿಎಸ್ಟಿ ದರ ಹಿನ್ನೆಲೆ ಹಲವಾರು ಗ್ರಾಹಕ ಉತ್ಪನ್ನಗಳ ಬೆಲೆಗಳು ಕಡಿಮೆಯಾಗಲಿವೆ.ದಸರಾ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಹಬ್ಬದ ಉತ್ಸಾಹದಲ್ಲಿರುವ ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರಿಗೆ ಕೇಂದ್ರ ಸರ್ಕಾರ ‘ದಸರಾ ಗಿಫ್ಟ್’ ಕೊಟ್ಟಿದೆ. ಸೆಪ್ಟೆಂಬರ್ 22ರಿಂದಲೇ ಹೊಸ ಜಿಎಸ್ಟಿ ದರ (GST Rate) ಜಾರಿಗೆ ಬರಲಿದೆ. ಇದರಿಂದ ಅದೆಷ್ಟೋ ದಿನಬಳಕೆ ವಸ್ತುಗಳ ಬೆಲೆ ಕೈಗೆಟುಕುವ ದರದಲ್ಲಿ ಸಿಗಲಿದೆ. ನಾವು ದಿನನಿತ್ಯ ಬಳಸುವ ಬಹುತೇಕ ವಸ್ತುಗಳ ಬೆಲೆಗೆ ಅಗ್ಗದಲ್ಲಿ ಸಿಗಲಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







