ಹೊಸದಿಲ್ಲಿ: ಜಿಎಸ್ಟಿ ಸುಧಾರಣೆಗಳು ಮತ್ತು ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಉತ್ತೇಜನ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಎನ್ಡಿಎ ಸಂಸದರಿಗೆ ಕರೆ ನೀಡಿದ್ದಾರೆ.’ನಿಮ್ಮನಿಮ್ಮ ಕ್ಷೇತ್ರದ ನಾಗರಿಕರು ಮತ್ತು ವ್ಯಾಪಾರಿಗಳ ಜೊತೆ ಮುಖಾಮುಖಿಯಾಗಿ – ಈ ಕುರಿತು ಜಾಗೃತಿ ಮೂಡಿಸಿ. ಜಿಎಸ್ಟಿ 2.0 ನಾಗರಿಕರ ಮೇಲಿನ ತೆರಿಗೆ ಹೊರೆಯನ್ನು ಇಳಿಸುತ್ತದೆ. ಆರ್ಥಿಕ ಬೆಳವಣಿಗೆಗೆ ಒತ್ತಾಸೆ ನೀಡುತ್ತದೆ ಎಂದು ಕೇಂದ್ರ ಸರಕಾರದ ದೃಢ ನಂಬಿಕೆಯಾಗಿದೆ. ಜಿಎಸ್ಟಿ ಸುಧಾರಣೆಯು ದೇಶದ ಆರ್ಥಿಕ
ಎಂದು ಬಣ್ಣಿಸಿದ್ದಾರೆ.ಸಂಸದರು ತಮ್ಮ ಕ್ಷೇತ್ರಗಳಲ್ಲಿ ವ್ಯಾಪಾರಿ ಗಳು ಮತ್ತು ಅಂಗಡಿ ಮಾಲೀಕರ 20ರಿಂದ 30 ಸಮ್ಮೇಳನಗಳನ್ನು ಆಯೋಜಿಸಬೇಕು. ತೆರಿಗೆ ಸರಳೀಕರಣದಿಂದ ಆಗುವ ಲಾಭಗಳನ್ನು ತಿಳಿಸಿದ್ದಾರೆ. ವಿವರಿಸಬೇಕು,” ಎಂದು ”ನವರಾತ್ರಿ ಮತ್ತು ದೀಪಾವಳಿಯಲ್ಲಿ ದೇಶೀಯ ಮೇಳಗಳನ್ನು ಆಯೋಜಿಸಬೇಕು. ಇದರಿಂದ ಸ್ವದೇಶಿ ನಿರ್ಮಿತ ವಸ್ತುಗಳ ಮಾರಾಟ ಹೆಚ್ಚುತ್ತದೆ. ಈ ಮೇಳಗಳಲ್ಲಿ ಸ್ಥಳೀಯ ಕುಶಲಕರ್ಮಿಗಳು ಮತ್ತು ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರಿಗಳಿಗೆ ಉತ್ತೇಜನ ನೀಡಬೇಕು,” ಎಂದಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







