ದಾವಣಗೆರೆ ಜಿಲ್ಲೆ ಮಂಟರಘಟ್ಟದಲ್ಲಿ ಅಪರೂಪದ ವಿಲಕ್ಷಣ ಘಟನೆ ನಡೆದಿದೆ.ಖಾಸಗಿ ಸಂಸ್ಥೆ ಪಡೆದಿದ್ದ ಸಾಲದ ಕಂತನ್ನು ಕಟ್ಟಲಿಲ್ಲ ಎಂಬ ಕಾರಣಕ್ಕೆ ದಂಪತಿ ಮಧ್ಯೆ ಜಗಳವಾಗಿ ತನ್ನ ಹೆಂಡತಿ ಮೂಗನ್ನು ಗಂಡ ಹಲ್ಲಿನಿಂದ ಕಚ್ಚಿ ತುಂಡರಿಸಿದ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಮಂಟರಘಟ್ಟ ಗ್ರಾಮದಲ್ಲಿ ನಡೆದಿದೆ.ಮಂಟರಘಟ್ಟ ಗ್ರಾಮದ ವಿಜಯ್ ಮತ್ತು ವಿದ್ಯಾ ದಂಪತಿ 2024ರಲ್ಲಿ ಖಾಸಗಿ ಸಂಸ್ಥೆಯಿಂದ 2 ಲಕ್ಷ ಹಣವನ್ನು ಸಾಲವಾಗಿ ಪಡೆದಿದ್ದರು. ಸಾಲದ ಕಂತಿನ ಹಣವನ್ನು ಪತ್ನಿ ವಿದ್ಯಾ ಕಳೆದ 2 ವಾರದಿಂದ ಕಟ್ಟಿರಲಿಲ್ಲ. ಈ ವಿಷಯವನ್ನು ಸಂಘದವರು ವಿದ್ಯಾಳ ಪತಿ ವಿಜಯ್ ನಿಗೆ ದೂರವಾಣಿಯ ಮೂಲಕ ತಿಳಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಜು.8ರಂದು ಮಧ್ಯಾಹ್ನದ ಸಮಯದಲ್ಲಿ ವಿದ್ಯಾಳ ಗಂಡ ವಿಜಯ್ ಮನೆಗೆ ಬಂದು, ‘ಸಾಲದ ಕಂತಿನ ಹಣವನ್ನು ನೀನು ಎಲ್ಲಿಯಾದರೂ ತಂದು ಕಟ್ಟಬೇಕಾಗಿತ್ತು’ ಎಂದು ಬಾಯಿಗೆ ಬಂದಂತೆ ಬೈಯುತ್ತ ಪತ್ನಿ ಮೇಲೆ ಹಲ್ಲೆ ಮಾಡುತ್ತ ಆಕೆಗೆ ಮನಸೋಇಚ್ಛೆಥಳಿಸಿದ್ದಾನೆ. ಬಳಿಕ ನೆಲಕ್ಕೆ ಕೆಡವಿ ಮೂಗಿಗೆ ಬಾಯಿಯಿಂದ ಜೋರಾಗಿ ಕಚ್ಚಿ ತುಂಡರಿಸಿದ್ದಾನೆ. ಆ ವೇಳೆ ವಿದ್ಯಾ ಆತನಿಂದ ತಪ್ಪಿಸಿಕೊಂಡು ಚನ್ನಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಚನ್ನಗಿರಿ ಪೊಲೀಸರು ತಿಳಿಸಿದ್ದಾರೆ
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



