ನಮ್ಮ ಸರ್ಕಾರವನ್ನು ಟೀಕೆ ಮಾಡಿಲ್ಲ – NYG ಉಲ್ಟಾ
ಚಿತ್ರದುರ್ಗ: ನಾನು ರಾಜ್ಯ ಸರ್ಕಾರವನ್ನು ತೇಜೋವಧೆ ಮಾಡಿಲ್ಲ, ನನ್ನ ಹೇಳಿಕೆಯನ್ನು ಬಿಜೆಪಿಯವರು ತಿರುಚಿದ್ದಾರೆ ಅಂತಾ ಬಿಜೆಪಿ ವಿರುದ್ಧ ಶಾಸಕ ಎನ್ ವೈ ಗೋಪಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯವರು ಸಣ್ಣ ಬುದ್ಧಿ ಬಿಟ್ಟು ಊರು ಉದ್ದಾರಕ್ಕೆ ಕೈಜೋಡಿಸಲಿ. ರಾಜಕೀಯ ಪ್ರೇರಿತ ದುರುದ್ದೇಶದಿಂದ ನನ್ನನ್ನು ಬಲಿಪಶುಮಾಡುತ್ತಾ ಕಾಲಹರಣ ಮಾಡಿದಿರಿ. ರಾಜ್ಯ ನಾನು ಸರ್ಕಾರಕ್ಕೆ ಮುಜುಗರ ತರುವಂತಹ ಕೆಲಸ ಮಾಡಿಲ್ಲ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬಗ್ಗೆ ಅಪಾರ ಅಭಿಮಾನವಿದೆ. ಕಳೆದ ಎರಡು ವರ್ಷಗಳಿಂದ 450 ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡುತ್ತಿದ್ದೆನೆ. ರಾಜ್ಯ ಸರ್ಕಾರದಿಂದ ಸಾಕಷ್ಟು ಅನುದಾನ ಬಂದಿದೆ .ನನ್ನ ಹೇಳಿಕೆಯನ್ನು ದುರುದ್ದೇಶಪೂರ್ವಕವಾಗಿ ಬಿಜೆಪಿಯವರು ತಿರುಚಿದ್ದಾರೆ.
ಹಳ್ಳಿಗಳಲ್ಲಿ ರಸ್ತೆ ,ಚರಂಡಿ,ಶಾಲೆ ಮಾಡಲಾಗುವುದಿಲ್ಲ ಎಂದು ಹೇಳಿದ್ದೇನೆ ಇದರ ಒಳಾರ್ಥ ತಿಳಿಯದೆ ಸುಖ ಸುಮ್ಮನೆ ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ,ಈಗಿನ ರಾಜಕಾರಣದಲ್ಲಿ ನಾವೆಷ್ಟೇ ಅಭಿವೃದ್ಧಿಗಾಗಿ ಹಣ ತಂದರು ಕೆಲವರು ಹಳ್ಳಿಗಳಲ್ಲಿ ರಸ್ತೆ, ಚರಂಡಿ ಮಾಡಲು ಕೆಲವರು ಬಿಡುವುದಿಲ್ಲ, ಹಳ್ಳಿಗಳಲ್ಲಿ ಕೆಲವರು ತಮ್ಮ ಸ್ವಹಿತಾಸಕ್ತಿ ರಾಜಕೀಯ ಪ್ರೇರಿತವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಬಿಡುವುದಿಲ್ಲ. ರಸ್ತೆ ಮಾಡಲು ಹೋದರೆ ಇದು ನಮ್ಮ ಹೊಲದ ದಾರಿ ಎಂದು ಅಡ್ಡಿ ಪಡಿಸುತ್ತಾರೆ. ಹೀಗಾಗಿ ಈ ಅರ್ಥದಲ್ಲಿ ರಸ್ತೆ,ಚರಂಡಿ, ಶಾಲೆ ಮಾಡಲು ಬಿಡುವುದಿಲ್ಲ ಎಂಬ ಅರ್ಥದಲ್ಲಿ ಹೇಳಿದ್ದೇನೆ, ನಾವು ಗ್ರಾಮೀಣ ಪ್ರದೇಶದವರು ಹಳ್ಳಿಯ ಸೊಗಡಿನ ಭಾಷೆಯಿಂದ ಹೇಳುತ್ತೇವೆ. ಇದಕ್ಕೆ ತಪ್ಪು ಅರ್ಥ ಹುಡುಕುವುದು ಬೇಡ ಅಂತಾ ವಿರೋಧ ಪಕ್ಷದ ವಿರುದ್ಧ ಹರಿಹಾಯ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



