ಹೊಳಲ್ಕೆರೆ : ಜಾತಿ ಗಣತಿ, ಜನ ಗಣತಿ ಜನವರಿ 1 ರಿಂದ ಆರಂಭವಾಗಬಹುದು. ಕ್ಷೇತ್ರ ಮರು ವಿಂಗಡಣೆಯಾಗಿ 2028 ರೊಳಗೆಬದಲಾವಣೆಯಾಗುವ ಸಾಧ್ಯತೆಗಳಿವೆ. ಮುಂದೆ ನಡೆಯುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಎ.ಪಿ.ಎಂ.ಸಿ.ಚುನಾವಣೆಯಲ್ಲಿ ಕಾರ್ಯಕರ್ತರು ಸ್ಪರ್ಧಿಸಿ ಅಧಿಕಾರ ಹಿಡಿಯಬೇಕೆಂದು ಶಾಸಕ ಡಾ.ಎಂ.ಚಂದ್ರಪ್ಪ ಕರೆ ನೀಡಿದರು.ಭಾರತೀಯ ಜನತಾಪಾರ್ಟಿ ಕಚೇರಿಯಲ್ಲಿ ನಡೆದ ಹೊಳಲ್ಕೆರೆ ಮಂಡಲದ ಪದಾಧಿಕಾರಿಗಳ ಸಭೆ ಉದ್ಘಾಟಿಸಿ
ಮಾತನಾಡಿದರು.ಗ್ರಾಮ ಪಂಚಾಯಿತಿ ಚುನಾವಣೆಯನ್ನು ಯಾವುದೆ ಕಾರಣಕ್ಕೂ ಕಡೆಗಣಿಸಬಾರದು. ಜನ ಸೇವೆ ಮಾಡಲು ಅಲ್ಲಿರುವಷ್ಟು ಅವಕಾಶಬೇರೆ ಎಲ್ಲಿಯೂ ಇಲ್ಲ. ಕಾರ್ಯಕರ್ತರ ಅಭಿಪ್ರಾಯಗಳನ್ನು ಪಕ್ಷದ ವೇದಿಕೆಯಲ್ಲಿ ಮಾತನಾಡಿ ಎಲ್ಲರನ್ನು ಪ್ರೀತಿ ವಿಶ್ವಾಸದಿಂದಕಾಣುತ್ತೇನೆ. ಯಾರನ್ನು ಬೇದ ಭಾವ ಮಾಡುವುದಿಲ್ಲ. ಅಧಿಕಾರವಿದ್ದಾಗ ಒಂದು ರೀತಿ, ಇಲ್ಲದಿದ್ದಾಗ ಮತ್ತೊಂದು ರೀತಿಯಾಗಿನಡೆದುಕೊಳ್ಳುವ ರಾಜಕಾರಣಿ ನಾನಲ್ಲ. ಇನ್ನು ಎರಡು ಮೂರು ತಿಂಗಳೊಳಗೆ ಅಪ್ಪರ್‍ಭದ್ರಾದಿಂದ ನೀರು ಹರಿದು ತಾಲ್ಲೂಕಿನ 37ಕೆರಗಳು ತುಂಬಿ ತುಳುಕುತ್ತವೆ ಎಂದು ಹೇಳಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರೈತರು, ಶಾಸಕರು, ಅಧಿಕಾರಿಗಳ ಸಭೆ ನಡೆಸುತ್ತಿದ್ದಾಗ ಇಂತಹ ಸಭೆಗಳನ್ನು
ನಡೆಸುವುದರಿಂದ ಯಾವ ಪ್ರಯೋಜನವಿಲ್ಲ. ಬಡ ರೈತರ ತೋಟಗಳಿಗೆ ನೀರು ಹರಿಯಬೇಕಿದೆ ಎಂದು ತಿಳಿಸಿ 23 ಸಾವಿರ ಕೋಟಿರೂ.ಗಳ ಯೋಜನೆಯನ್ನು ಆದಷ್ಟು ಬೇಗನೆ ಮುಗಿಸಿ ಎಂದು ಮನವಿ ಮಾಡಿದ್ದೇನೆ. ಕಾರ್ಯಕರ್ತರು ಎದೆ ಎತ್ತಿಕೊಂಡುತಿರುಗಾಡುವ ರೀತಿಯಲ್ಲಿ ತಾಲ್ಲೂಕಿನಾದ್ಯಂತ ಕೆಲಸ ಮಾಡಿಸಿದ್ದೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಹೇಶ್, ಚಿತ್ರಹಳ್ಳಿ ದೇವರಾಜ್, ಡಿ.ಸಿ.ಮೋಹನ್, ಮಾರುತೇಶ್, ರಾಮಣ್ಣ, ಬಿಜೆಪಿ. ತಾಲ್ಲುಕುಪ್ರಧಾನ ಕಾರ್ಯದರ್ಶಿ ರೂಪಮಂಡಲದ ಎಲ್ಲಾ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



