ಬ್ರಹ್ಮಚಾರಿಣಿಯನ್ನು ಪೂಜಿಸುವುದರಿಂದ ಸಿಗುವ ಲಾಭಗಳೇನು..?
ಎಲ್ಲೆಡೆ ಈಗಾಗಲೇ ನವರಾತ್ರಿ ಪ್ರಾರಂಭವಾಗಿದೆ. ಈ 9 ದಿನಗಳಲ್ಲಿ ಪ್ರತಿಯೊಂದು ದಿನ ದುರ್ಗಾ ದೇವಿಯ 9 ರೂಪಗಳನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ನವರಾತ್ರಿಯ ಎರಡನೇ ದಿನವಾದ ಇಂದು ದುರ್ಗಾ ದೇವಿಯ ಬ್ರಹ್ಮಚಾರಿಣಿ ರೂಪವನ್ನು ಆರಾಧಿಸಲಾಗುತ್ತದೆ. ಆಶ್ವಯುಜ ಮಾಸದ ಶುಕ್ಲ ದ್ವಿತೀಯೆಯಂದು ಆರಾಧಿಸಲ್ಪಡುವ ದೇವಿ ಸ್ವರೂಪವೇ ಬ್ರಹ್ಮಚಾರಿಣಿ. ಈ ದಿನದಂದು ಕಲಶ ಸ್ಥಾಪಿಸಿ, ಅಷ್ಟದಳ ರಂಗೋಲಿಯಲ್ಲಿ ದೇವಿಯನ್ನು ಧ್ಯಾನಿಸುತ್ತಾ ಪೂಜಿಸಬೇಕು.
ದೇವಿಯ ತಪಸ್ಸು
ಪುರಾಣಗಳ ಪ್ರಕಾರ ದೇವಿ ಹಿಮಾಲಯನ ಮಗಳಾಗಿ ಜನಿಸಿ, ಶಿವನನ್ನು ಗಂಡನಾಗಿ ಪಡೆಯಲು ನಾರದ ಮುನಿಗಳ ಮಾರ್ಗದರ್ಶನದಲ್ಲಿ ಗಾಢ ತಪಸ್ಸು ಮಾಡಿದಳು. ಮೊದಲ ಸಾವಿರ ವರ್ಷಗಳು ಹಣ್ಣು ಮತ್ತು ಎಲೆಗಳನ್ನು ಸೇವಿಸಿ ತಪಸ್ಸು ಮಾಡಿದರೆ, ನಂತರದ ಸಾವಿರ ವರ್ಷಗಳು ಒಣ ಬಿಲ್ವ ಪತ್ರೆಗಳನ್ನು ಮಾತ್ರ ಸೇವನೆ ಮಾಡಿದಳು. ಕೊನೆಯಲ್ಲಿ ಆಹಾರವನ್ನೇ ತ್ಯಜಿಸಿ ತಪಸ್ಸು ಮುಂದುವರಿಸಿದಳು. ಆಹಾರವನ್ನೇ ಬಿಡುವ ಮೂಲಕ ತಪಸ್ಸು ಮಾಡಿದ ಕಾರಣ ಆಕೆಗೆ ಅಪರ್ಣಾ ಎಂಬ ನಾಮ ದೊರಕಿತು ಎಂದು ಹೇಳಲಾಗುತ್ತದೆ.
ಪೂಜಾ ವಿಧಾನ
ಮುಂಜಾನೆ ಸ್ನಾನ ಮಾಡಿದ ನಂತರ ಅಷ್ಟದಳ ರಂಗೋಲಿ ಹಾಕಿ ಲಕ್ಷ್ಮಿ ರೂಪವಾದ ಕಲಶ ಸ್ಥಾಪಿಸಬೇಕುಕಲಶದಲ್ಲಿ ಗಂಧ – ಜಲ ತುಂಬಿ ದೇವಿಯನ್ನು ಆವಾಹನೆ ಮಾಡಬೇಕು.ಬಿಳಿ ಬಣ್ಣದ ಹೂಗಳನ್ನು ಉಪಯೋಗಿಸಿ ಪೂಜೆ ಮಾಡುವುದು ಶ್ರೇಷ್ಠ.ಸಂಜೆ ವೇಳೆಯಲ್ಲಿ ಮುತ್ತೈದೆಯರಿಗೆ ಅರಿಶಿನ, ಕುಂಕುಮ ಅಥವಾ ಬಾಗಿನ ನೀಡುವುದರಿಂದ ಪೂರ್ಣ ಫಲ ದೊರೆಯುತ್ತದೆ.
ಆರಾಧನೆ ಮಾಡುವುದರಿಂದ ಸಿಗುವ ಫಲ ಏನು..?
ದುರ್ಬಲರಿಗೆ ಶಕ್ತಿ ದೊರೆಯುತ್ತದೆ. ಯಾರ ಸಹಾಯ ಸಿಗದೆ ಸಂಕಷ್ಟದಲ್ಲಿ ಇರುವವರಿಗೆ ಅಗತ್ಯ ನೆರವು ಪ್ರಾಪ್ತಿಯಾಗುತ್ತದೆ. ಜೀವನದಲ್ಲಿ ನಿರೀಕ್ಷೆಯ ಹೊರಗಿನ ರಕ್ಷಣಾ ಶಕ್ತಿ ದೊರೆಯುತ್ತದೆ. ಬ್ರಹ್ಮಚಾರಿಣಿ ಸ್ವರೂಪಿಣಿ ಆರಾಧನೆಯಿಂದ ಭಕ್ತರ ಜೀವನದಲ್ಲಿ ಶಕ್ತಿ, ಧೈರ್ಯ ಮತ್ತು ದೈವೀ ಅನುಗ್ರಹ ಸಿಗುತ್ತದೆ.
ಪೂಜೆ ಮಾಡುವ ವೇಳೆ ದೇವಿಯ ಈ ಸ್ತುತಿ ಜಪಿಸಬೇಕು
ಹಂಸಾರೂಢಾಂ ಶುಕ್ಲವರ್ಣಾಂ ಶುಕ್ಲಮಾಲ್ಯಾದ್ಯಲಂಕೃತಾಂ
ಚತುರ್ಭುಜಾಂ ಸೃಕ್ಸ್ರುವೌ ಚ ಕಮಂಡಲ್ವಮಾಲಿಕಾಂ
ಬಿಭ್ರೀತಿಂ ಪೂಜಯೇದ್ದೇವಿಂ ದ್ವೀತಿಯಾಯಾಂ ಸದಾ ನೃಪ
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







