ಮಧ್ಯ ಕರ್ನಾಟಕದ ದಸರಾ ಎಂದು ಪ್ರಖ್ಯಾತಿ ಪಡೆದ ಬಸವ ಕೇಂದ್ರ ಮುರುಘಾಮಠದಿಂದ ಆಚರಣೆಗೆ ಒಳಪಡುವ ಶರಣ ಸಂಸ್ಕೃತಿ ಉತ್ಸವ ಸೆಪ್ಟಂಬರ್ 25ರಿಂದ 9 ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿದೆ.ಮುರುಘಾಮಠದ ಅನುಭವ ಮಂಟಪದಲ್ಲಿ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಯಿತು. ಸಭೆಯ ಒಟ್ಟಾರೆ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿಯ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಉತ್ಸವಕ್ಕೆ ಸಾಂಸ್ಕೃತಿಕ ಸ್ಪರ್ಶ ನೀಡಲು ಎಲ್ಲರೂ ಕೈ ಜೋಡಿಸಬೇಕೆಂದರು.
ಸೆಪ್ಟೆಂಬರ್ 25ರಂದು ಮುರುಗಿ ಶಾಂತವೀರ ಶ್ರೀಗಳ ಸಮಗ್ರ ಕೃತಿ ಬಿಡುಗಡೆಯೊಂದಿಗೆ ಅವರ ಚಿಂತನೆ ನಡೆಯಲಿದೆ. 26ರಂದು ಅಥಣಿ ಮುರುಗೇಂದ್ರ ಶಿವಯೋಗಿಗಳು ಹಾಗೂ ಚಿತ್ರದುರ್ಗ ಮುರುಘಾಮಠಕ್ಕಿರುವ ಅವಿನಾಭಾವ ಸಂಬಂಧದ ಬಗ್ಗೆ ಗೋಷ್ಠಿ ಇರಲಿದೆ. ಜತೆಗೆ ಕೃಷಿಮೇಳ, ಕೈಗಾರಿಕಾ ಮೇಳ, ಮಹಿಳಾ ಸಮಾವೇಶ, ಮಕ್ಕಳಗೋಷ್ಠಿ, ಸಂಗೀತ ಸಂಜೆ ಹಾಗೂ ಎಸ್ಜೆಎಂ ವಿದ್ಯಾಪೀಠದ ನಿವೃತ್ತ ನೌಕರರಸಮಾವೇಶನಡೆಸಲಾಗುತ್ತದೆಎಂದರು.ಡಾ.ಬಸವಪ್ರಭು ಸ್ವಾಮೀಜಿ ಮಾತನಾಡಿ, ಶರಣಸಂಸ್ಕೃತಿ ಎಂದರೆ ಕಾಯಕ, ಸಮಾನತೆ ಹಾಗೂ ದಾಸೋಹ ತತ್ವವನ್ನು ಅನುಷ್ಠಾನಕ್ಕೆ ತರುವುದಾಗಿದೆ. ಶ್ರೀಮಠದಲ್ಲಿ ಹಿಂದೆ ದಸರಾ ಮಹೋತ್ಸವ ಎಂದೇ ಖ್ಯಾತಿ ಪಡೆದು ನಿರಂತರವಾಗಿ ನಡೆದುಕೊಂಡು ಬಂದಿದೆ. ತರುವಾಯ ಶರಣ ಸಂಸ್ಕೃತಿ ಉತ್ಸವವಾಗಿ ಬದಲಾಗಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಶ್ರೀಮಠವು ಶರಣ ಸಂಸ್ಕೃತಿ ಉತ್ಸವದ ಆಚರಣೆಯನ್ನು ಪ್ರಾರಂಭಿಸಿದ ಕೀರ್ತಿ ಹೊಂದಿದೆ ಎಂದು ಹೇಳಿದರು.ಹಿರಿಯ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಮಾತನಾಡಿ, 1689ರಲ್ಲಿ ಚಿತ್ರದುರ್ಗದ ಸಂಸ್ಥಾನಕ್ಕೆ ಬಿಚ್ಚುಗತ್ತಿ ಭರಮಣ್ಣ ನಾಯಕರು ನಾಯಕರಾದರು. ಮೊದಲು ಅವರು ಮುರುಗಿ ಸ್ವಾಮಿ ಮಠವನ್ನು ಬೆಟ್ಟದಲ್ಲಿ ಕಟ್ಟಿದರು. ಹಿರಿಯೂರಿನ ರಂಗನಾಥಸ್ವಾಮಿ ದೇವಾಲಯ ಕಟ್ಟಿದರು ಎಂಬುದು ಶಾಸನಗಳ ಪ್ರಕಾರ ತಿಳಿದುಬರುತ್ತದೆ. ಮುರುಘಾ ಶ್ರೀಗಳ ಆಶೀರ್ವಾದದಿಂದ ಭರಮಣ್ಯ ನಾಯಕ ರಾಜನಾಗುತ್ತಾನೆ ಎಂಬುದು ಇತಿಹಾಸ, ಅಲ್ಲಿಂದಲೇ ದಸರಾ ವೈಭವ ಪ್ರಾರಂಭವಾಗಿರಬಹುದು ಎಂಬುದು ಪ್ರತೀತಿ. ನಂತರ ಶರಣ ಸಂಸ್ಕೃತಿ ಉತ್ಸವವಾಗಿ ನಡೆದುಕೊಂಡು ಬರುತ್ತಿದೆ ಎಂದು ತಿಳಿಸಿದರು.
ರಾಜ್ಯ ಸಭೆ ಮಾಜಿ ಸದಸ್ಯ ಎಚ್.ಹನುಮಂತಪ್ಪ ಮಾತನಾಡಿ. ನನಗೆ ಜಯದೇವ ಸ್ವಾಮಿಗಳ ಕಾಲದಿಂದ ಮಠದ ಸಂಪರ್ಕವಿದೆ. ಅಂದು ಶ್ರದ್ಧೆ, ಭಕ್ತಿ, ಪ್ರೀತಿ, ವಿಶ್ವಾಸ ಇತ್ತು. ಇಂದು ಅದು ಕಡಿಮೆಯಾಗಿದೆ. ಮಠ ಬೆಳೆದಿದೆ. ಭಕ್ತರು ಬೆಳೆದಿದ್ದಾರೆ. ಆದರೆ ಭಕ್ತಿ ಕಡಿಮೆಯಾಗಿದೆ ಎಂದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್ ಮಾತನಾಡಿ, ಮೈಸೂರಿನ ದಸರಾ ಬಿಟ್ಟರೆ ಅತ್ಯಂತ ದೊಡ್ಡ ಕಾರ್ಯಕ್ರಮ ಎಂದರೆ
ಶರಣ ಸಂಸ್ಕೃತಿ ಉತ್ಸವ, ಶ್ರೀಮಠಕ್ಕೆ ಯಾವುದೇ ಆತಂಕ ಇರಲಿ, ಆದರೆ ಯಾವ ಕಾಠ್ಯಕ್ರಮಗಳು ನಿಂತಿಲ್ಲ ವಿದ್ಯಾಪೀಠವೂ ನಡೆಯುತ್ತಿದೆ. ಕಾರಣ ಮುರುಘೇಶನ ಆಶೀರ್ವಾದ ಎಂದು ಹೇಳಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







