ಹಿಂದಿಯಲ್ಲಿ ಜನಪ್ರಿಯವಾದ ನಂತರ ”ಬಿಗ್ ಬಾಸ್” ದಕ್ಷಿಣದ ಭಾಷೆಗಳಲ್ಲಿ ಆರಂಭವಾಗಿತ್ತು. ಕನ್ನಡದ ಕಾರ್ಯಕ್ರಮದ ಸಾರಥ್ಯವನ್ನು ಕಳೆದ ಹನ್ನೊಂದು ವರ್ಷದಿಂದ ಸುದೀಪ್ ವಹಿಸಿಕೊಂಡಿದ್ದರೆ ತೆಲುಗಿನಲ್ಲಿ ನಾಗಾರ್ಜುನ ಉಸ್ತುವಾರಿಯಲ್ಲಿ ಕಾರ್ಯಕ್ರಮ ಮೂಡಿ ಬರುತ್ತಿದೆ. ತಮಿಳಿನಲ್ಲಿ ಈ ಜವಾಬ್ದಾರಿಯನ್ನು ಕಮಲ್ ಹಾಸನ್ ಕಳೆದ ವರ್ಷದಿಂದ ವಿಜಯ್ ಸೇತುಪತಿ ಅವರಿಗೆ ವಹಿಸಿದ್ದಾರೆ. ಮಲಯಾಳಂನಲ್ಲಿ ಮೋಹನ್ ಲಾಲ್ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದ್ದಾರೆ.ಇಂಥಾ ”ಬಿಗ್ ಬಾಸ್” ಕಾರ್ಯಕ್ರಮ ಈ ವರ್ಷ ಮತ್ತೆ ಶುರುವಾಗುತ್ತಿದೆ. ಈಗಾಗಲೇ ಎಲ್ಲಾ ಭಾಷೆಯಲ್ಲಿ ವೇದಿಕೆ ಕೂಡ ಸಿದ್ಧವಾಗಿದೆ. ಆದರೆ ಈ ಬಾರಿ ಹಿಂದಿ ಯಲ್ಲಿ ಅಲ್ಲ ಕನ್ನಡದಲ್ಲಿ ಅಲ್ಲ ಬದಲಿಗೆ ಎಲ್ಲರಿಗಿಂತ ಮೊದಲು ”ಮಲಯಾಳಂ” ನಲ್ಲಿ ಕಾರ್ಯಕ್ರಮ ಶುರುವಾಗಲಿದೆ. ನಾಳೆ ”ಬಿಗ್ ಬಾಸ್” ಸೀಸನ್-7ಗೆ ಸಂಜೆ 7ಕ್ಕೆ ಅದ್ಧೂರಿಯಾಗಿ ಚಾಲನೆಯನ್ನು ನೀಡಲಾಗುತ್ತಿದೆ.
ಈ ಕುರಿತು ಈಗಾಗಲೇ ಹಲವಾರು ಪ್ರೋಮೋಗಳು ಕೂಡ ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆ ಈ ಬಾರಿ ”ಬಿಗ್ ಬಾಸ್” ಮನೆಯಲ್ಲಿ ಯಾರನ್ನೆಲ್ಲಾ ನೋಡಬಹುದು ಎನ್ನುವ ಪ್ರಶ್ನೆ ಕೂಡ ಹಲವು ಕೇರಳಿಗರಲ್ಲಿದೆ.ಯಾಕೆಂದರೆ ಎಲ್ಲರಿಗೆ ಗೊತ್ತಿರುವಂತೆ ಆ ಭಾಷೆ ಈ ಭಾಷೆ ಅಲ್ಲ ಎಲ್ಲ ಭಾಷೆಯಲ್ಲಿ ಕೂಡ ಈ ಕಾರ್ಯಕ್ರಮದಲ್ಲಿ ಪ್ರತಿ ವರ್ಷ ಚಿತ್ರ ವಿಚಿತ್ರ ಆಸಾಮಿಗಳು ಇದ್ದೇ ಇರುತ್ತಾರೆ. ಇರದಿದ್ದರೆ ಶೋ ಅಪೂರ್ಣವೆನಿಸುತ್ತದೆ.ಹೀಗಾಗಿಯೇ ಈ ವರ್ಷದ ಸ್ಫರ್ಧಿಗಳು ಯಾರಿರಬಹುದು ಎನ್ನುವ ಚರ್ಚೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಇನ್ನು, ಎಲ್ಲಕ್ಕಿಂತ ಹೆಚ್ಚಾಗಿ ಈ ಬಾರಿ ಮಲಯಾಳಂನ ”ಬಿಗ್‌ಬಾಸ್”ನಲ್ಲಿ ಸಾಮಾನ್ಯ ಜನರಿಗೆ ಕೂಡ ಅವಕಾಶವನ್ನು ಕಲ್ಪಿಸಲಾಗಿದೆ. ”ಬಿಗ್ ಬಾಸ್”ನ ಈ ನಡೆಯಿಂದ ಈ ಬಾರಿ ಕೇರಳದಲ್ಲಿ ಯಾರಿಗೆಲ್ಲಾ ಲಾಟರಿ ಹೊಡೆಯಬಹುದು ಎನ್ನುವ ಕುತೂಹಲವಂತೂ ಇದ್ದೇ ಇದೆ.ಇದಕ್ಕೆ ಪೂರಕವಾಗಿ ಈ ಬಾರಿ ಮಲಯಾಳಂ ”ಬಿಗ್ ಬಾಸ್”ನಲ್ಲಿ ಭಾಗವಹಿಸಲಿರುವ ಸ್ಫರ್ಧಿಗಳ ಲಿಸ್ಟ್ ಸದ್ಯ ವೈರಲ್ ಆಗಿದ್ದು ಆ ಪಟ್ಟಿ ಈ ಕೆಳಗಿನಂತೆ ಇದೆ.
ಮಲಯಾಳಂ ‘ಬಿಗ್ ಬಾಸ್’ನ ಸಂಭಾವ್ಯ ಸ್ಫರ್ಧಿಗಳ ಪಟ್ಟಿ
* ರಾನಿಯಾ ರಾಣಾ – ಪ್ರಿನ್ಸ್ & ಫ್ಯಾಮಿಲಿ ಮೂಲಕ ಹೆಸರುವಾಸಿಯಾದ ಕಿರುತೆರೆಯ ನಟಿ.
* ಮುನ್ಶಿ ರಂಜಿತ್ – ಮಲಯಾಳಂ ಚಿತ್ರರಂಗದ ಗೌರವಾನ್ವಿತ್ ನಟ
* ಗಾಯತ್ರಿ ದೇವಿ { ಕಿಂಗಿನಿ } – ಹಾಸ್ಯಪ್ರಜ್ಞೆಯಿಂದ ಹೆಸರುವಾಸಿಯಾದ ಚೆಲುವೆ
* ಬೋಬನ್ ಅಲುಮ್ಮೂಡನ್ – ‘ನಿರಾಮ್’ ಖ್ಯಾತಿಯ ನಟಿ,
* ರೇಖಾ ರತೀಶ್ – ‘ಪರಸ್ಪರಂ’ ಖ್ಯಾತಿಯ ಕಿರುತೆರೆ ನಟಿ.
* ರೇಜನೀಶ್ ವಿಆರ್ – ಖ್ಯಾತ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್
* ಶಾನವಾಸ್ ಶಾನು – ”ಕುಂಕುಮಪೂವು”ದ ”ರುದ್ರ”ಪಾತ್ರಕ್ಕೆ ಹೆಸರುವಾಸಿಯಾದ ನಟ
* ಸುಜಯ ಪಾರ್ವತಿ – ಹಿರಿಯ ಪತ್ರಕರ್ತೆ
* ಬಿನ್ನಿ ಸೆಬಾಸ್ಟಿಯನ್ – ”ಗೀತ ಗೋವಿಂದಂ” ಮೂಲಕ ಪರಿಚಿತರಾದ ನೂಬಿನ್ ಜಾನಿ ಅವರ ಪತ್ನಿ ಮತ್ತು ನಟಿ
* ವಿನ್ಸಿ ಅಲೋಶಿಯಸ್ – ”ಭೀಮಂತೆ ವಾಜಿ” ಮತ್ತು ”ರೇಖಾ” ಖ್ಯಾತಿಯ ಭರವಸೆಯ ಸ್ಟಾರ್
* ಆದಿತ್ಯನ್ ಜಯನ್ – ಟಿವಿ ನಟ ಅಂಬಿಲಿ ದೇವಿಯ ಮಾಜಿ ಪತಿ.
* ಕಿಲಿ ಪಾಲ್ – ಟಾಂಜಾನಿಯಾ ಮೂಲದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್
* ರೇಣು ಸುಧಿ – ಮಾಡೆಲ್ ಮತ್ತು ದಿವಂಗತ ಹಾಸ್ಯನಟ ಕೊಲ್ಲಂ ಸುಧಿ ಅವರ ಪತ್ನಿ.
* ಮೈತ್ರೇಯನ್ – ಸಾಮಾಜಿಕ ಕಾರ್ಯಕರ್ತೆ ಮತ್ತು ಲೇಖಕಿ
* ಅವಂತಿಕಾ ಮೋಹನ್ – ಡಾ. ನಂದಿತಾ ಎಂದೇ ಜನಪ್ರಿಯರಾದ ವೈದ್ಯೆ
* ಅನುಮೋಲ್ ಅನುಕುಟ್ಟಿ – ಮ್ಯಾಜಿಕ್ ಮಾಡುವ ಮೂಲಕ ಖ್ಯಾತಿಯನ್ನು ಪಡೆದ ಹಾಸ್ಯ ನಟಿ
* ಸೀಮಾ ಜಿ. ನಾಯರ್ – ಹಿರಿಯ ನಟಿ.
* ಬೀನಾ ಆಂಟನಿ – ವಿವಾದಾತ್ಮಕ ಕಿರುತೆರೆ ನಟಿ
* ಮಸ್ತಾನಿ – ನಿರೂಪಕಿ
* ಅಪ್ಪಾನಿ ಶರತ್ – ”ಅಂಗಮಾಲಿ ಡೈರೀಸ್” ನೊಂದಿಗೆ ಖ್ಯಾತಿ ಪಡೆದ ನಟ.
* ಜಾಸಿ ಆಶಿ – ಯಂಗ್ ಐಕಾನ್ಸೀ
ಹೀಗೆ ಇವರೆಲ್ಲರೂ ಈ ಬಾರಿ ಮಲಯಾಳಂನ ”ಬಿಗ್ ಬಾಸ್‌ಸ್‌ಸ ಬಾಸ್‌ಸಸನ್ 7”ರಲ್ಲಿ ಭಾಗವಹಿಸುತ್ತಾರೆ ಎನ್ನುವ ಸುದ್ದಿ ಹಬ್ಬಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



