ಕೊಲ್ಲಾಪುರ: ಮಹಾರಾಷ್ಟ್ರದ ಐತಿಹಾಸಿಕ ಕೊಲ್ಲಾಪುರಿ ಚಪ್ಪಲಿಗಳು ಮೊದಲಿಂದಲೂ ಪ್ರಸಿದ್ಧ. ಇತ್ತೀಚೆಗೆ ಇಟಲಿಯ ಪ್ರಾಡಾ ಕಂಪನಿ ಅದರ ವಿನ್ಯಾಸ ನಕಲಿಸಿ ವಿವಾದ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಕೊಲ್ಲಾಪುರಿ ಚಪ್ಪಲಿಗಳ ಸ್ವಂತಿಕೆ ಯನ್ನು ಧೃಡಪಡಿಸಲು, ಚಪ್ಪಲಿಗಳ ಮೇಲೆ ಕ್ಯುಆರ್ ಕೋಡ್ ಅಳವಡಿಸಲು ಆರಂಭಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮಹಾರಾಷ್ಟ್ರದ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮ (ಲಿಡ್ ಕಾಂ), ‘ಚಪ್ಪಲಿ ಕರಕುಶಲ ಕಲೆಯಾಗಿರುವು ದರಿಂದ ಅದನ್ನು ತಯಾರಿಸಿದವರನ್ನು ಗುರುತಿ ಸಲು, ನಕಲಿ ಚಪ್ಪಲಿಗಳ ಹಾವಳಿಯನ್ನು ತಡೆ ಯಲು ಅವುಗಳ ಮಾಹಿತಿ ಇರುವ ಕ್ಯುಆರ್ಕೋಡ್‌ಗಳನ್ನು ಪ್ರತಿ ಚಪ್ಪಲಿಯ ಮೇಲೆ ಮುದ್ರಿಸಲಾಗುವುದು. ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿದರೆ ಅದನ್ನು ತಯಾರಿಸಿದವರ ಹೆಸರು, ತಯಾರಾದ ಸ್ಥಳ ಮತ್ತು ರೀತಿ, ಬಳಸಲಾದ ಕಚ್ಚಾವಸ್ತು, ಬಾಳಿಕೆ ಹಾಗೂ ಜಿಐ ಪ್ರಮಾಣಪತ್ರ ಮಾಹಿತಿ ಪಡೆಯಬಹುದು’ ಎಂದಿದೆ.ಕೊಲ್ಲಾಪುರಿ ಚಪ್ಪಲಿಗಳನ್ನು ಮಹಾರಾಷ್ಟ್ರದಗಡಿಭಾಗದಲ್ಲಿರುವ ಕರ್ನಾಟಕದ ಧಾರವಾಡ, ಬೆಳಗಾವಿ, ಭಾಗಲಕೋಟೆ ಮತ್ತು ವಿಜಯಪುರದಲ್ಲಿಯೂ ತಯಾರಿಸಲಾಗುತ್ತದೆ. ತಿಂಗಳ ಹಿಂದಷ್ಟೇ, ಕೊಲ್ಲಾಪುರಿ ಚಪ್ಪಲಿ ಹೋಲುವ ಚಪ್ಪಲಿಗಳನ್ನು ಪ್ರಾಡಾ ಕಂಪನಿ ತಯಾರಿಸಿತ್ತು ಹಾಗೂ ಅಸಲಿ ವಿನ್ಯಾಸಕ್ಕೆ ಶ್ರೇಯವನ್ನೇ ಕೊಟ್ಟಿರಲಿಲ್ಲ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



