ಸಾವಳಗಿ: ದುಶ್ಚಟಗಳ ದಾಸನಾಗಿ, ಸಾಲ ಮಾಡಿಕೊಂಡು, ಆಸ್ತಿಯಲ್ಲಿ ಪಾಲು ಕೇಳಿ, ಮನೆಯವರ ಮೇಲೆ ಹಲ್ಲೆಗೆ ಯತ್ನಿಸಿದ ಮಗನನ್ನು ತಂದೆ-ತಾಯಿ ಹಾಗೂ ಸಹೋದರ ಸೇರಿಕೊಂಡು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಆತನ ಕಣ್ಣಿಗೆ ಖಾರದ ಪುಡಿ ಎರಚಿ, ಹಗ್ಗದಿಂದ ಕುತ್ತಿಗೆಗೆ ಬಿಗಿದು, ಎರಡೂ ಕೈ ಕಟ್ಟಿ, ಹೊರಗೆಳೆದು ತಂದು, ಆತನ ಮೈಮೇಲೆ ಡೀಸೆಲ್ ಸುರಿದು, ಸುಟ್ಟು ಹಾಕಿದ್ದಾರೆ. ಬಾಗಲಕೋಟೆ ಜಿಲ್ಲೆ ಜಮಖಂಡಿಯ ಬಿದರಿ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಅನಿಲ್ ಕಾನಟ್ಟಿ (32) ಕೊಲೆಯಾದ ಯುವಕ. ಆತನ ಸಹೋದರ ಬಸವರಾಜ (35), ತಂದೆ ಪರಪ್ಪ (62 ), ತಾಯಿ ಶಾಂತಾ (55) ಬಂಧಿತರು. ಅನೀಲ, ದುಶ್ಚಟಕ್ಕೆ ಬಿದ್ದು ಸಾಲ ಮಾಡಿದ್ದ. ಮನೆಯವರು ಅದನ್ನು ತೀರಿಸಿದ್ದರು. ಮತ್ತೆ 4 ಲಕ್ಷ ಸಾಲ ಮಾಡಿ, ಹಣ ಕೊಡಿ ಎಂದು ಜಗಳ ಮಾಡುತ್ತಿದ್ದ. ಶುಕ್ರವಾರ ರಾತ್ರಿ ಅನಿಲ್ ಮನೆಯಲ್ಲಿ ಜಗಳ ಮಾಡಿ, ನಿಮ್ಮನ್ನೆಲ್ಲ ಸಾಯಿಸುತ್ತೇನೆ ಎಂದು ಮುಂದಾದಾಗ ಪೋಷಕರು ಹತ್ಯೆಗೈದಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







