ಸಚಿವ ಸಂಪುಟದಲ್ಲಿ ಅವಕಾಶ ಕೋರಿ ಸಿದ್ದು, ಡಿಕೆಶಿಗೆ ಮನವಿ: ಭರತ್ ರೆಡ್ಡಿ
ಬಳ್ಳಾರಿ: ಯುವ ಶಾಸಕರನ್ನು ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳುವಂತೆ ಕೋರಿ ಮತ್ತೊಮ್ಮೆ ಸಿಎಂ ಬಳಿ ಮನವಿ ಮಾಡಲಾಗುವುದು ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದ್ದಾರೆ. ಈದ್ದಾ ಮೈದಾನದಲ್ಲಿ ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತ ರಣೆ ವೇಳೆ ಯುವಕರಿಗೆ ಅವಕಾಶ ನೀಡಬೇಕೆಂದು ರಾಜ್ಯದ 45-48 ಜನ ಶಾಸಕರು ಸೇರಿ ಸಭೆ ನಡೆಸಿ ರುವುದು ನಿಜ. ಮೊದಲ ಬಾರಿಗೆ ಹಾಗೂ ಎರಡನೇ ಬಾರಿ ಶಾಸಕರಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಅರ್ಹರಿಗೆ ಅವಕಾಶ ನೀಡುವಂತೆ ಸಿಎಂ ,ಡಿ. ಸಿ. ಎಂ. ಬಳಿ ಮಾನವಿ ಮಾಡಿಕೊಳ್ಳಲಾಗುವುದು. ದೆಹಲಿಗೆ ತೆರಳಿ, ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ, ಮನವಿ ಮಾಡಲಾಗುವುದು ಎಂದು ಅವರು ತಿಳಿಸಿದರು
